ವಿಜಯಪುರ: ಯುವಕರ ಗುಂಪೊಂದು ಯುವಕನಿಗೆ ಚಾಕು ಇರಿದ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಭಿಲಾಷ್ ಕಾಳೆ ಚಾಕು ಇರಿತಕ್ಕೊಳಗಾದ ಯುವಕ. ಘಟನೆ ಸಂಬಂಧ ದೀಪಕ್ ಲಕ್ಷ್ಮಣ ರಾಠೋಡ, ಕಾರ್ತಿಕ್ ಮಂಜುನಾಥ ಪೇಟೇಕರ, ಮನೋಜ್ ಮುತ್ತಣ್ಣ ದೊಡ್ಡಮನಿ, ಕಿಶೋರ್ ರಮೇಶ ರಾಠೋಡ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
"ಮುದ್ದೇಬಿಹಾಳ ಪಟ್ಟಣದ ನಾಲ್ವರು ಯುವಕರು ಆಲಮಟ್ಟಿ ಉದ್ಯಾನ ವೀಕ್ಷಣೆಗೆಂದು ರಾಕ್ ಗಾರ್ಡನ್ಗೆ ತೆರಳುತ್ತಿದ್ದ ಯುವತಿಯರ ಗುಂಪಿಗೆ ಚುಡಾಯಿಸಿದ್ದರು. ಈ ವೇಳೆ ಅಭಿಲಾಷ್ ಕಾಳೆ ಸೇರಿದಂತೆ ಕೆಲವರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿತ್ತು. ನಂತರ ಬುಧವಾರ ಸಂಜೆ ಆರೋಪಿಗಳು ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಇರುವ ಪ್ರವೇಶ ದ್ವಾರದ ಬಳಿ ಕುಳಿತಿದ್ದ ಅಭಿಷೇಕ್ ಕಾಳೆಗೆ ಚಾಕು ಇರಿದಿದ್ದರು" ಎಂದು ವಿಜಯಪುರ ಡಿವೈಎಸ್ಪಿ ಜಿ.ಹೆಚ್.ತಳಕಟ್ಟಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ವಕೀಲ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ