ವಿಜಯಪುರ: ಯುವಕನೋರ್ವ ತನ್ನ ಹುಟ್ಟುಹಬ್ಬದಂದು ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಬಣ್ಣ ಬಳಿಸುವ ಮೂಲಕ ಶಾಲೆಯ ಅಂದ ಹೆಚ್ಚಿಸಿದ್ದಾನೆ.
ಜಿಲ್ಲೆಯ ತಿಕೋಟಾ ಪಟ್ಟಣದಶ್ರೀ ರಾಮ ಕಾಲೋನಿಯ ನಿವಾಸಿ ಸುರೇಶ್ ಕೊಣ್ಣೂರ ತನ್ನದೇ ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 20 ಸಾವಿರ ರೂ. ವೆಚ್ಚದಲ್ಲಿ ಬಣ್ಣ ಬಳಿಸುವ ಮೂಲಕ ತನ್ನ 29ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಯುವಕನ ಈ ಕಾಳಜಿಗೆ ಶಿಕ್ಷಕ ಸಮೂಹ ಅಭಿನಂದನೆ ಸಲ್ಲಿಸಿದೆ.
ಸಮಾಜ ಸೇವೆಯಲ್ಲಿ ತೊಡಗಿರುವ ಸುರೇಶ್ ಕೊಣ್ಣೂರ, ಕಳೆದ ವರ್ಷ ಇದೇ ಶಾಲೆಯ 108 ಮಕ್ಕಳಿಗೆ ನೋಟ್ಬುಕ್ ವಿತರಣೆ ಮಾಡಿದ್ದರು. ಕೊರೊನಾ ಆರಂಭದಲ್ಲಿ ತಮ್ಮ ಕಾಲೋನಿಯ ಜನರಿಗೆ ಮಾಸ್ಕ್ ವಿತರಿಸಿದ್ದರು. ಇದರ ಜೊತೆಗೆ ಕಾಲೋನಿಯಲ್ಲಿರುವ ಪಶು-ಪಕ್ಷಿಗಳಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿದ್ದರು.
ಓದಿ: ಭಾನುವಾರ ಹಸಿರು ಮಾರ್ಗದಲ್ಲಿ ಬೆಳಗ್ಗೆ 2 ತಾಸು ಮೆಟ್ರೋ ಸಂಚಾರ ಸ್ಥಗಿತ