ಮುದ್ದೇಬಿಹಾಳ (ವಿಜಯಪುರ): ಇದೇ ತಿಂಗಳ 23ರಂದು ಹಸೆಮಣೆ ಏರಬೇಕಿದ್ದ ಯುವತಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಶೃತಿ ಐಹೊಳ್ಳಿ (24) ಎಂಬುವವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಿಎಸ್ಸಿ, ಬಿಎಡ್ ಪದವೀಧರೆಯಾಗಿದ್ದ ಶೃತಿ ಗಣಿತ ವಿಷಯದಲ್ಲಿ ಪಾಂಡಿತ್ಯ ಹೊಂದಿದ್ದರು. ಮುದ್ದೇಬಿಹಾಳದ ಕೆಪಿಬಿಎಂಪಿಎಸ್ ಶಾಲೆಯಲ್ಲಿ ಎರಡು ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.
ಎಲ್ಲಾ ತಯಾರಿ ಮಾಡಿಕೊಂಡು ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
ಓದಿ: Revealed! ಗಂಗಾ ನದಿಯಲ್ಲಿ ಮೃತದೇಹ ತೇಲಿಬಿಡುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದ! ಆತ ಹೇಳಿದ್ದೇನು ಕೇಳಿ..