ETV Bharat / state

ವಿಜಯಪುರ: ಹಣಕಾಸಿನ ವಿಚಾರಕ್ಕೆ ಯುವಕನ ಮೇಲೆ ಫೈರಿಂಗ್​​

‌ವಿಜಯಪುರದಲ್ಲಿ 9 ಗಂಟೆಯ ಸುಮಾರಿಗೆ ತುಳಸಿರಾಮ ಹರಿಜನ ಎಂಬುವವ ಪದ್ದು ರಾಠೋಡ್ ಎಂಬುವನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಒಂದು ಗುಂಡು ತಗಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

A man shot at a young man in Vijayapur city
ಹಣದ ವಿಚಾರಕ್ಕೆ ಜಗಳ : ಯುವಕನಿಗೆ ಗುಂಡು ಹಾರಿಸಿದ ದುಷ್ಕರ್ಮಿ
author img

By

Published : Nov 18, 2020, 10:27 PM IST

Updated : Nov 18, 2020, 10:57 PM IST

ವಿಜಯಪುರ: ಹಣದ ವಿಚಾರವಾಗಿ ಓರ್ವ ಯುವಕನ ಮೇಲೆ ಫೈರಿಂಗ್ ಮಾಡಿರುವ ಘಟನೆ ನಗರದ ಮನಗೂಳಿ ರಸ್ತೆಯ ಪುಲಕೇಶಿ ನಗರದ ವಿಡಿಯೋ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆದಿದೆ.

‌9 ಗಂಟೆಯ ಸುಮಾರಿಗೆ ತುಳಸಿರಾಮ ಹರಿಜನ ಎಂಬಾತ ಪದ್ದು ರಾಠೋಡ್ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ಯುವಕನ ಸ್ಥಿತಿ ಗಭೀರವಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ. ಕಾರು ರಿಪೇರಿ ವಿಚಾರವಾಗಿ ವಾಗ್ವಾದ ನಡೆದು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ.

ಹಣದ ವಿಚಾರಕ್ಕೆ ಜಗಳ : ಯುವಕನಿಗೆ ಗುಂಡು ಹಾರಿಸಿದ ದುಷ್ಕರ್ಮಿ

ಇನ್ನು ಘಟನಾ ಸ್ಥಳಕ್ಕೆ ಎಸ್ಪಿ ಅನುಪಮ್ ಅಗರವಾಲ್ ಹಾಗೂ ಎಎಸ್ಪಿ ರಾಮ ಅರಸಿದ್ದಿ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಎಸ್ಪಿ ಅನುಪಮ್ ಅಗರವಾಲ್, ಇದು ಯಾವುದೇ ಗ್ಯಾಂಗ್ ಪ್ರೇರಿಪಿತವಾಗಿ ಗುಂಡಿನ ದಾಳಿ ನಡೆದಿಲ್ಲ. ಬದಲಾಗಿ‌ ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ಗುಂಡು ಹಾರಿಸಿದ್ದಾನೆ. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು‌ ಹೇಳಿದರು.

Last Updated : Nov 18, 2020, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.