ETV Bharat / state

ನೆರೆ ಸಂತ್ರಸ್ತ ಕಂದಮ್ಮಗಳಿಗಾಗಿ ಮಿಡಿದ ಮನ... ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ತೊಟ್ಟಿಲು ಕೊಡಿಸಿದ ಬಾಲಕಿ

ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಬಿ. ಪಾಟೀಲ್​ ಅವರ ಪುತ್ರಿ ಸಾನ್ವಿ ಎಸ್. ಪಾಟೀಲ್, ನೆರೆ ಸಂತ್ರಸ್ತ ಕುಟುಂಬಗಳ ಹಸುಗೂಸುಗಳಿಗೆ ತೊಟ್ಟಿಲುಗಳನ್ನು ಕೊಡಿಸಿದ್ದಾಳೆ.

ಸಾನ್ವಿ ಎಸ್.ಪಾಟೀಲ್
author img

By

Published : Aug 14, 2019, 9:39 AM IST

ವಿಜಯಪುರ: ಉತ್ತರ ಕರ್ನಾಟಕ ಪ್ರವಾಹದ ಹೊಡೆತಕ್ಕೆ ಸಿಕ್ಕಿ ನಲುಗುತ್ತಿದೆ. ಮನೆ ಮತ್ತು ಅಗತ್ಯ ವಸ್ತುಗಳನ್ನು ಕಳೆದುಕೊಂಡು ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಂತಹ ನಿರಾಶ್ರಿತರಲ್ಲಿ ಹಸುಗೂಸುಗಳು ಕೂಡ ಸೇರಿರುವುದರಿಂದ, ಆ ಮುದ್ದು ಕಂದಮ್ಮಗಳಿಗೆ ಬೇಕಿರುವ ಅಗತ್ಯ ಸಾಮಗ್ರಿಗಳನ್ನು ನೀಡುವ ಮೂಲಕ ಎಂಎಲ್​​ಸಿ ಅವರ ಪುತ್ರಿ ಇತರರಿಗೂ ಮಾದರಿಯಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಬಿ. ಪಾಟೀಲ್​ ಅವರ ಪುತ್ರಿ ಸಾನ್ವಿ ಎಸ್.ಪಾಟೀಲ್ ಜನಮೆಚ್ಚುವ ಕಾರ್ಯ ಮಾಡಿರುವ ಬಾಲಕಿ. ಸಾನ್ವಿ ಬಿ.ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್​ನ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಭಾನುವಾರ ಬಾಗಲಕೋಟೆಯಲ್ಲಿ ನಡೆದಿದ್ದ ಬ್ಯಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಳು. ಅದರಲ್ಲಿ ತಮಗೆ ಬಂದ ಬಹುಮಾನದ ಹಣದಲ್ಲಿ ನೆರೆ ಸಂತ್ರಸ್ತ ಕುಟುಂಬಗಳ ಹಸುಗೂಸುಗಳ ರಕ್ಷಣೆಗಾಗಿ ತೊಟ್ಟಿಲುಗಳನ್ನು ಕೊಡಿಸಿದ್ದಾಳೆ.

ಮುದ್ದೇಬಿಹಾಳ ಸಂತ್ರಸ್ತರ ಕೇಂದ್ರಗಳಲ್ಲಿ ತಾಯಂದಿರು ತಮ್ಮ ಕಂದಮ್ಮಗಳಿಗೆ ಈ ತೊಟ್ಟಿಲುಗಳನ್ನು ಬಳಸುತ್ತಿದ್ದಾರಂತೆ. ಸಾನ್ವಿಯ ಈ ಉದಾರತೆ ಮತ್ತು ಮಾನವೀಯ ಗುಣ ಉಳಿದ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.

Intro:ವಿಜಯಪುರ Body:ವಿಜಯಪುರ: ವಿಧಾನ ಪರಿಷತ್ ಸದಸ್ಯ ಸುನೀಲ ಪಾಟೀಲ್‍ರ ಪುತ್ರಿ ಸಾನ್ವಿ ಎಸ್.ಪಾಟೀಲ್ ಬಿ.ಎಂ.ಪಾಟೀಲ್ ಪಬ್ಲಿಕ್ ಸ್ಕೂಲ್ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಭಾನುವಾರ ಬಾಗಲಕೋಟೆಯಲ್ಲಿ ನಡೆದ ಬ್ಯಾಡ್ಮಿಟನ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ತಮಗೆ ಬಂದ ಬಹುಮಾನ ಮೊತ್ತ 5 ಸಾವಿರಗಳನ್ನು ನೆರೆ ಸಂತ್ರಸ್ತ ಕುಟುಂಬಗಳ ಹಸು ಗೂಸುಗಳ ರಕ್ಷಣೆಗಾಗಿ ತೊಟ್ಟಿಲುಗಳನ್ನು ಕೊಡಿಸಿದ್ದು, ಮುದ್ದೇಬಿಹಾಳ ಸಂತ್ರಸ್ತರ ಕೇಂದ್ರಗಳಲ್ಲಿ ಆ ತೊಟ್ಟಿಲುಗಳಲ್ಲಿ ಮಕ್ಕಳ ತಾಯಂದಿರು ತಮ್ಮ ಮಕ್ಕಳಿಗೆ ಬಳಸುತ್ತಿದ್ದಾರೆ.
ಈ ಬಾಲೆಯ ಕ್ರಮ ಉಳಿದ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.