ETV Bharat / state

ಇಂಡಿ ಬಳಿ ರೈಲು ಇಂಜಿನ್​ನಲ್ಲಿ ದಿಢೀರ್​ ಕಾಣಿಸಿಕೊಂಡ ಬೆಂಕಿ

ರೈಲು ಇಂಜಿನ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸುವ ಮೂಲಕ ಅನಾಹುತ ತಪ್ಪಿಸಿದ್ದಾರೆ. ಇಂಡಿ ತಾಲೂಕಿನ ಲಚ್ಯಾಣ-ಪಡನೂರು ಮಧ್ಯೆ ಇಂದು ಬೆಳಗ್ಗೆ ಈ ಅವಘಡ ನಡೆದಿದೆ.

ರೈಲು ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ
author img

By

Published : Sep 12, 2019, 11:47 AM IST

ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ-ಪಡನೂರು ಮಧ್ಯೆ ಇಂದು ಬೆಳಗ್ಗೆ ರೈಲು ಇಂಜಿನ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ರೈಲ್ವೆ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಅನಾಹುತವನ್ನು ತಪ್ಪಿಸಿದ್ದಾರೆ.

ರೈಲು ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ

ವಿಜಯಪುರದಿಂದ ಮಹಾರಾಷ್ಟ್ರದ ಸೋಲಾಪುರ ಕಡೆ ಸಂಚರಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡು ರೈಲು ನಿಲ್ಲಿಸಿದ ಸಿಬ್ಬಂದಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ಗಂಟೆಗಳ ಕಾಲ ರೈಲು ಸ್ಥಗಿತ:

ಈ ಘಟನೆಯಿಂದ ಸುಮಾರು ಎರಡು ಗಂಟೆಗಳ ಕಾಲ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಬೇರೆ ಇಂಜಿನ್ ತಂದು ರೈಲು ಸಂಚಾರಕ್ಕೆ ಸಿಬ್ಬಂದಿ ಅನುವು ಮಾಡಿಕೊಟ್ಟರು. ಇನ್ನು ಸೋಲಾಪುರಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸೋಲಾಪುರದಿಂದ ಗದಗ ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ರೈಲು ಸಹ ಒಂದು ಗಂಟೆ ತಡವಾಗಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.

Intro:ವಿಜಯಪುರ Body:ವಿಜಯಪುರ-
ರೈಲು ಎಂಜಿನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ
ಇಂಡಿ ತಾಲೂಕಿನ ಲಚ್ಯಾಣ-ಪಡನೂರು ಮಧ್ಯೆ ಇಂದು ಬೆಳಗ್ಗೆ ನಡೆದಿದೆ.
ತಕ್ಷಣ ಎಚ್ಚೆತ್ತುಕೊಂಡ ರೈಲು ಚಾಲಕ ರೈಲು ನಿಲ್ಲಿಸಿ ಆಗಬಹುದಿದ್ದ ಅನಾಹುತ ತಪ್ಪಿಸಿದ್ದಾನೆ.
ವಿಜಯಪುರದಿಂದ ಮಹಾರಾಷ್ಟ್ರದ ಸೋಲಾಪುರ ಕಡೆ ರೈಲು ಸಂಚರಿಸುತ್ತಿತ್ತು.
ಬೆಂಕಿ ಕಾಣಿಸಿಕೊಂಡ ತಕ್ಷಣ ರೈಲು ನಿಲ್ಲಿಸಿದ ರೈಲಿನ ಸಿಬ್ಬಂದಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಿದ್ದಾರೆ. ಹೀಗಾಗಿ ಎಲ್ಲ. ಪ್ರಯಾಣಿಕರು ಸೇಫ್ ಆಗಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಎರಡು ಗಂಟೆ ಸ್ಥಗಿತ: ಈ ಘಟನೆಯಿಂದ
ಸುಮಾರು ಎರಡು ಗಂಟೆಗಳ ಕಾಲ ರೈಲು ಸ್ಥಗಿತಗೊಳಿಸಲಾಗಿತ್ತು ಬಳಿಕ ಬೇರೆ ಎಂಜಿನ್ ತಂದು ರೈಲು ಸಂಚಾರಕ್ಕೆ ಸಿಬ್ಬಂದಿ ಅನು ಮಾಡಿಕೊಟ್ಟರು.
ಮಹಾರಾಷ್ಟ್ರದ ಸೋಲಾಪುರ ಕಡೆಗೆ ಮತ್ತೆ ರೈಲು ಪ್ರಯಾಣ ಬೆಳೆಸಿತು.
ರೈಲು ತಡ: ಸೋಲಾಪುರಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸೋಲಾಪುರದಿಂದ ಗದಗ ಕಡೆಗೆ ಬರುತ್ತಿದ್ದ ಪ್ಯಾಸೇಂಜರ್ ರೈಲು ಸಹ ಒಂದು ಗಂಟೆ ತಡವಾಗಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.