ETV Bharat / state

ಗ್ರಾಪಂ ಚುನಾವಣೆ.. ವಿಜಯಪುರ ಜಿಲ್ಲೆಯಲ್ಲಿ 7,533 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ - ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈವರೆಗೆ 7,533 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ..

Vijaypur
ಜಿಲ್ಲಾಧಿಕಾರಿ ಪಿ. ಸುನೀಲಕುಮಾರ
author img

By

Published : Dec 12, 2020, 11:59 AM IST

ವಿಜಯಪುರ : ಜಿಲ್ಲೆಯ ಗ್ರಾಮ ಪಂಚಾಯತ್‌ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ಒಟ್ಟು ವಿವಿಧ ಕ್ಷೇತ್ರಗಳಿಂದ 7,533 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲೆಯ 12 ತಾಲೂಕಿನ 212 ಗ್ರಾಮ ಪಂಚಾಯತ್‌ಗಳ ಪೈಕಿ 201 ಗ್ರಾಪಂಗೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ 8 ತಾಲೂಕಿನ 111 ಗ್ರಾಮ ಪಂಚಾಯತ್‌ನ 2,126 ಸದಸ್ಯ ಸ್ಥಾನಕ್ಕೆ ಡಿ. 22ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.

ಓದಿ: ವಿಜಯಪುರ ಪಾಲಿಕೆಗೆ ಚುನಾವಣೆ ನಡೆಸುವಂತೆ ಸರ್ಕಾರ, ಚು. ಆಯೋಗಕ್ಕೆ ಹೈಕೋರ್ಟ್ ಆದೇಶ

ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈವರೆಗೆ 7,533 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ವಿಜಯಪುರ-1,358, ತಿಕೋಟಾ-974, ನಿಡಗುಂದಿ-478, ಮುದ್ದೇಬಿಹಾಳ-1,158, ತಾಳಿಕೋಟೆ-1,011, ಬಬಲೇಶ್ವರ-1,070, ಬಾಗೇವಾಡಿ-1,005, ಕೊಲ್ಹಾರ-479 ಸೇರಿ ಒಟ್ಟು 7,533 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಡಿ. 14 ಕೊನೆ ದಿನವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.