ವಿಜಯಪುರ: ಕೇವಲ 7 ದಿನದ ಟಗರು ಮರಿಯೊಂದು ಬರೋಬ್ಬರಿ 2 ಲಕ್ಷ ರೂಪಾಯಿಗೆ ಮಾರಾಟವಾಗಿ ಜನರನ್ನು ಆಶ್ಚರ್ಯಕ್ಕೀಡು ಮಾಡಿದ ಘಟನೆ ಜಿಲ್ಲೆಯ ಇಂಡಿ ಇಂಡಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಪಟ್ಟಣದ ಟಗರು ಸಾಕಾಣಿಕೆದಾರ ಬಾನಪ್ಪ ಮಾಸ್ತರ್ ಪೂಜಾರಿ ಅವರಿಗೆ ಸೇರಿದ 7 ದಿನದ ಟಗರು ಮರಿ ₹2 ಲಕ್ಷಕ್ಕೆ ಮಾರಾಟವಾಗಿದೆ. ಈ ಟಗರು ಮರಿ ವಿಶೇಷ ತಳಿಯಾಗಿದ್ದಲ್ಲದೇ, ಇದು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತಿದೆ.
ಮರಿ ಟಗರು ಜನಿಸಿದ ಕೇವಲ 7 ದಿನ ಮಾತ್ರ ಕಳೆದಿವೆ. ಈ ಅದೃಷ್ಟದ ಟಗರು ಮರಿ ಖರೀದಿಗೆ ಮಹಾರಾಷ್ಟ್ರದ ಕುರಿ ಖರೀದಿದಾರರಿಂದ ಭಾರಿ ಬೇಡಿಕೆ ಬಂದಿತ್ತು. ಇದೀಗ ಈ ಮರಿ ಟಗರನ್ನು ಮಹಾರಾಷ್ಟ್ರದ ಸಿದ್ದನಾಥ ಗ್ರಾಮದ ನಾಮದೇವ ಖೊಖರೆ ಎಂಬ ಕುರಿ ಸಾಕಾಣಿಕೆದಾರ 2 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದಾರೆ.
ಈ ಟಗರು ಮರಿಗೆ 'ಸುಲ್ತಾನ್' ಎಂದು ಹೆಸರಿಡಲಾಗಿದ್ದು, ಇಂಡಿ ಪಟ್ಟಣದಾದ್ಯಂತ ಹೊತ್ತುಕೊಂಡು ಡೋಲು, ಬ್ಯಾಂಡ್ ಸಮೇತ ಮೆರವಣಿಗೆ ಮಾಡಲಾಗಿದೆ.
ಇದನ್ನೂ ಓದಿ: ಆತನನ್ನು ಒಬ್ಬ ನಟನಾಗಿ ಇಷ್ಟಪಡುತ್ತಿದ್ದೆ, ಆದ್ರೆ ಬಳಸಿದ ಪದ ಸರಿಯಲ್ಲ: ಸೈನಾ ನೆಹ್ವಾಲ್