ವಿಜಯಪುರ : ಗುಮ್ಮಟ ನಗರಿಯಲ್ಲಿ ಎಮ್ಮೆಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಒಂದೇ ಕುಟುಂಬದ 6 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 7 ಲಕ್ಷ ಮೌಲ್ಯದ 11 ಎಮ್ಮೆಗಳನ್ನು ವಶಕ್ಕೆ ಪಡೆದಿದ್ದಾರೆ. ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಎಮ್ಮೆ ಕಳ್ಳತನ ಪ್ರಕರಣ ದಾಖಲಾಗಿದ್ದವು.
ಈ ಪ್ರಕರಣ ಬೆನ್ನತ್ತಿದ ಪೊಲೀಸರು, ಆರೋಪಿಗಳಾದ ಬೇಗಂ ತಾಲಾಬ್, ದೊಡ್ಡಿ ನಿವಾಸಿ ಸಹೋದರರಾದ ಶ್ರೀಕಾಂತ ಲಕ್ಷ್ಮಣ ಗೋಪಣೆ, ಮೈಲಾರಿ ಲಕ್ಷ್ಮಣ ಗೋಪಣೆ, ಇವರ ಸಂಬಂಧಿಗಳಾದ ರಾಮು ತಾಯಪ್ಪ ಗೋಪಣೆ, ಭೀಮು ಅಂಬು ಗೋಪಣೆ ಹಾಗೂ ಭೀಮಶಿ ಅಂಬು ಗೋಪಣೆ ಅವರನ್ನು ಬಂಧಿಸಿದ್ದಾರೆ.
ವಿಶೇಷ ತಂಡ ರಚನೆ : ಇತ್ತೀಚಿಗೆ ಜಿಲ್ಲೆಯಲ್ಲಿ ಮನೆಗಳ್ಳತನದ ಜತೆ ಜಾನುವಾರುಗಳ ಕಳ್ಳತನ ಹೆಚ್ಚಾಗುತ್ತಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆ ಎಸ್ಪಿ ಆನಂದಕುಮಾರ್ ವಿಶೇಷ ತಂಡ ರಚಿಸಿದ್ದರು.
ಈ ತಂಡ ಮಹಾರಾಷ್ಟ್ರದ ಸೋಲಾಪೂರ್, ಮಿರಜ್, ಸಾಂಗ್ಲಿ, ಪುಣೆ, ಮುಂಬೈ ಸೇರಿದಂತೆ ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ತಪಾಸಣೆ ನಡೆಸಿದಾಗ ಎಮ್ಮೆಗಳನ್ನು ಕಳ್ಳತನ ಮಾಡುತ್ತಿದ್ದ ಗೋಪಣೆ ಕುಟುಂಬದ 6 ಸದಸ್ಯರು ಭಾಗಿಯಾಗಿದ್ದು ಕಂಡು ಬಂದಿದೆ. ಪ್ರಕರಣ ಪತ್ತೆ ಮಾಡಿದ ವಿಶೇಷ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ : ವಿಚಾರಣೆಗೆ ಹಾಜರಾಗುವಂತೆ ಪ್ರೆಸ್ಟೀಜ್ ಕಂಪನಿ ಸಿಇಒಗೆ ನೋಟಿಸ್