ವಿಜಯಪುರ: ಅಭಿಷೇಕ ಖ್ಯಾಡಿ ಎಂಬ ವಿದ್ಯಾರ್ಥಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ (ಎನ್ ಡಿಎ) ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ ಭಾಗ ಒಂದರ ಪುನರ್ವಸತಿ ಕೇಂದ್ರದ ಶಿಕ್ಷಕ ಬಿ.ಐ. ಖ್ಯಾಡಿ ದಂಪತಿ ಪುತ್ರ ಅಭಿಷೇಕ ಖ್ಯಾಡಿ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ ಡಿ ಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪರೀಕ್ಷೆಯಲ್ಲಿ 54 ನೇ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎನ್ ಡಿ ಎ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೇವಲ 600 ವಿದ್ಯಾರ್ಥಿಗಳನ್ನು ವಿವಿಧ ಪರೀಕ್ಷಾ ಹಂತದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕದಿಂದ ಆಯ್ಕೆಗೊಂಡ ಕೆಲವೇ ವಿದ್ಯಾರ್ಥಿಗಳಲ್ಲಿ ಅಭಿಷೇಕ ಕೂಡಾ ಒಬ್ಬರು. ಇವರು ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.