ETV Bharat / state

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​.. 19 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಆಲಗೂರು ಗ್ರಾಮದಲ್ಲಿ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದಾಗಿ 19 ಎಕರೆ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದೆ.

fire
ಬೆಂಕಿಗಾಹುತಿ
author img

By

Published : Mar 19, 2022, 9:00 PM IST

Updated : Mar 19, 2022, 9:10 PM IST

ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ‌ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಆಲಗೂರು ಗ್ರಾಮದ ಬಳಿ ಇಂದು ನಡೆದಿದೆ.‌

19 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ನಾಲ್ವರು ರೈತರಿಗೆ ಸೇರಿದ 19 ಎಕರೆ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಆಲಗೂರು ಗ್ರಾಮದ ರೈತರಾದ ಅಹ್ಮದ್ ಭಾಷಾ ನಾಯ್ಕೋಡಿ, ಲಾಲ್​ಸಾಬ್ ನಾಯ್ಕೋಡಿ, ಅಕ್ಬರ್ ನಾಯ್ಕೋಡಿ, ದಾವಲಸಾಬ್ ನಾಯ್ಕೋಡಿ ಎಂಬುವವರಿಗೆ ಸೇರಿದ್ದ ಕಬ್ಬು ಇದಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.‌ ಕಲಕೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಓದಿ: ಹಾಸನ : ಅಕ್ರಮ ಸಂಬಂಧಕ್ಕೆ ಒಪ್ಪದ್ದಕ್ಕೆ ಮಹಿಳೆ ಕೊಲೆ.. ಆರೋಪಿ ಅರೆಸ್ಟ್​

Last Updated : Mar 19, 2022, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.