ವಿಜಯಪುರ: ಜಿಲ್ಲೆಯಲ್ಲಿ ಇಂದು ಸಹ ಕೊರೊನಾ ಆರ್ಭಟ ಮುಂದುವರಿದಿದೆ. ಒಂದೇ ದಿನ 160 ಪ್ರಕರಣ ದೃಢವಾಗಿದೆ. ಅಲ್ಲದೆ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಕೃಷ್ಣಾನಗರದ ರೋಗಿ ನಂ- 51,948, 50 ವರ್ಷ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜುಲೈ 14 ರಂದು ಜ್ವರ, ಕೆಮ್ಮು ಹಾಗೂ ತೀವ್ರ ಶ್ವಾಸಕೋಶ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 17 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,745 ಜನರು ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಸೋಂಕಿನಿಂದ ಗುಣಮುಖರಾದ 58 ಮಂದಿ ಸೇರಿ 1,091ಕ್ಕೆ ಏರಿಕೆಯಾಗಿದೆ. ಒಟ್ಟು 632 ಜನ ಸೋಂಕಿತರು ಜಿಲ್ಲಾ ಹಾಗೂ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಲ್ಲಿ ವಿಜಯಪುರ ನಗರದ-128, ಬಸವನ ಬಾಗೇವಾಡಿ-12, ಬಬಲೇಶ್ವರ-12, ಚಡಚಣ-1, ದೇವರ ಹಿಪ್ಪರಗಿ-1, ಇಂಡಿ-3, ಕೊಲ್ಹಾರ್ -01, ಮುದ್ದೇಬಿಹಾಳ-01, ತಾಳಿಕೋಟೆ-01 ಪಾಸಿಟಿವ್ ಸೇರಿ ಒಟ್ಟು 160 ಪ್ರಕರಣ ಪತ್ತೆಯಾಗಿದೆ.
ಇಂದು ಬಂದ ಪಾಸಿಟಿವ್ ವರದಿಯಲ್ಲಿ ಪುರುಷರು-97, ಮಹಿಳೆಯರು-41, ಯುವಕರು-10, ಯುವತಿಯರು-1, ಬಾಲಕರು-8 ಮತ್ತು ಮೂವರು ಬಾಲಕಿಯರು ಸೇರಿದ್ದಾರೆ.
ಜಿಲ್ಲೆಯಲ್ಲಿ 39,098 ಮಂದಿಯ ಗಂಟಲು ದ್ರವ ಪರೀಕ್ಷಗೆ ಒಳಪಡಿಸಲಾಗಿದ್ದು, ಇದರಲ್ಲಿ 36,405 ಮಂದಿಗೆ ನೆಗೆಟಿವ್ ಹಾಗೂ 1,745 ಮಂದಿಗೆ ಪಾಸಿಟಿವ್ ವರದಿಯಾಗಿತ್ತು. ಇನ್ನುಳಿದಂತೆ 948 ಮಂದಿಯ ವರದಿ ಬಾಕಿ ಇದೆ.
ಜಿಲ್ಲೆಯಲ್ಲಿ 325 ಕಂಟೇನ್ಮೆಂಟ್ ವಲಯವಿದ್ದು, 219 ಚಾಲ್ತಿಯಲ್ಲಿವೆ. 106 ವಲಯವನ್ನು ಡಿನೋಟಿಫೈ ಮಾಡಲಾಗಿದೆ.