ETV Bharat / state

ನೇದಲಗಿ ನೇತೃತ್ವದಲ್ಲಿ 15 ನೇ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ - 15th generak meeting in vijayapura jilla panchayath]

ಜಿ.ಪಂ. ಅಧ್ಯಕ್ಷ ಶಿವಯೋಗಪ್ಪ ನೇದಲಗಿ ನೇತೃತ್ವದಲ್ಲಿ 15ನೇ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ ಜರುಗಿದ್ದು, ಸದಸ್ಯರಿಂದ ಜಿಲ್ಲೆಯಲ್ಲಿರುವ ಸಮಸ್ಯೆಗಳ ಕುರಿತ ಚರ್ಚೆ ಪ್ರತಿಧ್ಬನಿಸಿತು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ
author img

By

Published : Oct 25, 2019, 12:02 PM IST

ವಿಜಯಪುರ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಜಿ.ಪಂ. ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ 15 ನೇ ಸಾಮಾನ್ಯ ಸಭೆ ಜರುಗಿತು.

ಜಿಲ್ಲಾ ಪಂಚಾಯತ್​ ಸದಸ್ಯರಿಂದ ಜಿಲ್ಲೆಯ ಸಮಸ್ಯೆಗಳ ಮಹಾಪೂರವೇ ಹರಿದುಬಂದಿದ್ದು, ಮುಖ್ಯವಾಗಿ ಫಸಲ್​ ಭೀಮಾ ಯೋಜನೆಯಡಿಯಲ್ಲಿ ಕಂಪ್ಯೂಟರ್ ಆಧಾರಿತ ಸರ್ವೇಯಿಂದಾಗಿ ರೈತರಿಗೆ ಆಗುತ್ತಿರುವ ತೊಂದರೆ, ಬೆಳೆ ಹಾನಿ, ಅನಧಿಕೃತ ಗೊಬ್ಬರದ ಅಂಗಡಿಗಳು ನಿರ್ಮಾಣವಾಗಿರುವ ಬಗ್ಗೆ ತೀವ್ರ ಚರ್ಚೆಯಾಗಿ, ಮಾತಿನ ಜಟಾಪಟಿಗೆ ಕಾರಣವಾಯಿತು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ

ಜಿ.ಪಂ. ಅಧ್ಯಕ್ಷ ನೇದಲಗಿ, ಸದಸ್ಯರ ಸಮಸ್ಯೆ ಆಲಿಸಿ ಅನಧಿಕೃತ ಗೊಬ್ಬರ ಅಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯಪುರ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಜಿ.ಪಂ. ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ 15 ನೇ ಸಾಮಾನ್ಯ ಸಭೆ ಜರುಗಿತು.

ಜಿಲ್ಲಾ ಪಂಚಾಯತ್​ ಸದಸ್ಯರಿಂದ ಜಿಲ್ಲೆಯ ಸಮಸ್ಯೆಗಳ ಮಹಾಪೂರವೇ ಹರಿದುಬಂದಿದ್ದು, ಮುಖ್ಯವಾಗಿ ಫಸಲ್​ ಭೀಮಾ ಯೋಜನೆಯಡಿಯಲ್ಲಿ ಕಂಪ್ಯೂಟರ್ ಆಧಾರಿತ ಸರ್ವೇಯಿಂದಾಗಿ ರೈತರಿಗೆ ಆಗುತ್ತಿರುವ ತೊಂದರೆ, ಬೆಳೆ ಹಾನಿ, ಅನಧಿಕೃತ ಗೊಬ್ಬರದ ಅಂಗಡಿಗಳು ನಿರ್ಮಾಣವಾಗಿರುವ ಬಗ್ಗೆ ತೀವ್ರ ಚರ್ಚೆಯಾಗಿ, ಮಾತಿನ ಜಟಾಪಟಿಗೆ ಕಾರಣವಾಯಿತು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ

ಜಿ.ಪಂ. ಅಧ್ಯಕ್ಷ ನೇದಲಗಿ, ಸದಸ್ಯರ ಸಮಸ್ಯೆ ಆಲಿಸಿ ಅನಧಿಕೃತ ಗೊಬ್ಬರ ಅಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Intro:ವಿಜಯಪುರ Body:ವಿಜಯಪುರ : ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಡಿಯಲ್ಲಿ ಕಂಪ್ಯೂಟರ್ ಆಧಾರಿತ ಸರ್ವೇಯಿಂದಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ರೈತರಿಗೆ ಈ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮ್ಯಾನುವಲ್ ಆಧಾರಿತ ಸರ್ವೇ ಕೈಗೊಂಡರೆ ಉತ್ತಮ ಎಂಬ ಸಲಹೆ ಹಾಗೂ ಹಕ್ಕೊತ್ತಾಯ ಅನೇಕ ಜಿಲ್ಲಾ ಪಂಚಾಯತ ಸದಸ್ಯರಿಂದ ಕೇಳಿಬಂದಿತು.
ವಿಜಯಪುರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಜಿ.ಪಂ. ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ಜರುಗಿದ 15 ನೇ ಸಾಮಾನ್ಯ ಸಭೆಯಲ್ಲಿ ಜಿ.ಪಂ. ಸದಸ್ಯೆಯಾದ ಜ್ಯೋತಿ ಅಸ್ಕಿ, ಪ್ರತಿಭಾಗೌಡತಿ ಪಾಟೀಲ ಮೊದಲಾದವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪಾರ್ಲಿಮೆಂಟ್‍ನಲ್ಲಿ ಈ ಯೋಜನೆ ಬದಲಾವಣೆಗೊಳ್ಳಬೇಕಾಗಿರುವುದು ನಿಜ, ಈ ಭಾಗದ ರೈತರ ನೋವನ್ನು ಅವರ ಗಮನಕ್ಕೆ ತರಬೇಕಾಗಿದೆ ಎಂದರು. ಆಗ ಮಹಾಂತಗೌಡ ಪಾಟೀಲ, ಈ ಕೆಲಸವನ್ನು ನಮ್ಮ ಸಂಸದರು ಮಾಡಬೇಕು, ಇಲ್ಲಿ ಈ ವಿಷಯ ಚರ್ಚೆ ಮಾಡಿದರೂ ಪ್ರಯೋಜನವಿಲ್ಲ ಎಂದರು.
ಬೆಳೆಹಾನಿಗೆ ಸಂಬಂಧಿಸಿದಂತೆ ಕೃಷಿ ಅಧಿಕಾರಿಗಳು ಮಾಹಿತಿ ನೀಡುವ ಸಂದರ್ಭದಲ್ಲಿ ಕಣ್ಣಳತೆಯ ಆಧಾರದ ಮೇಲೆ ಬೆಳೆಹಾನಿ ಸಮೀಕ್ಷೆ ಮಾಡಲಾಗುತ್ತದೆ ಎಂಬ ಪ್ರಕ್ರಿಯೆ ವಿವರಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಭುವನೇಶ್ವರಿ ಬಗಲಿ, ಕಣ್ಣಳತೆಯಿಂದ ಸರ್ವೇ ಮಾಡುವುದು ಎಷ್ಟು ಸರಿ? ಇದು ಕೇವಲ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾಗುತ್ತದೆ ಎಂದು ದೂರಿದರು.
ಬೆಳೆ ಹಾನಿ ಸಮೀಕ್ಷಾ ಕಾರ್ಯಕ್ಕೆ ಬರುವ ಗ್ರಾಮಸೇವಕರು ಅಲ್ಲಿನ ಜಿಲ್ಲಾ ಪಂಚಾಯತ ಸದಸ್ಯರಿಗೆ ಮಾಹಿತಿ ನೀಡುವುದಿಲ್ಲ, ಪರಿಸ್ಥಿತಿ ಹಿ?ಹೀಗಾದರೆ ಜನಸಾಮಾನ್ಯರ ಗತಿಯೇನು? ಎಂದು ಜ್ಯೋತಿ ಅಸ್ಕಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಕುರಿತು ಸ್ಪಷ್ಟೀಕರಣ ನೀಡಿದ ಸಿಇಓ ಗೋವಿಂದ ರೆಡ್ಡಿ ಅವರು, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ಇಡೀ ರಾಷ್ಟ್ರದಾದ್ಯಂತ ಒಂದೇ ರೀತಿಯ ಪ್ರಕ್ರಿಯೆ ಹೊಂದಿದೆ. ಈ ಯೋಜನೆಯಡಿಯಲ್ಲಿ ಕಂಪ್ಯೂಟರ್ ಆಯಾ ಗ್ರಾಮದ ಸರ್ವೇ ನಂಬರ್‍ವೊಂದನ್ನು ಆಯ್ಕೆ ಮಾಡುತ್ತದೆ, ಆಯ್ಕೆ ಮಾಡಿರುವ ಸರ್ವೇ ನಂಬರ್‍ನಲ್ಲಿ ಬೆಳೆ ಚೆನ್ನಾಗಿದ್ದರೆ ಅದು ಇಡೀ ಊರಿಗೆ ಅನ್ವಯವಾಗುತ್ತದೆ, ಅದೇ ತೆರನಾಗಿ ಕಂಪ್ಯೂಟರ್ ಆಯ್ಕೆ ಮಾಡಿದ ಸರ್ವೇ ನಂಬರ್ ಹೊಲದಲ್ಲಿ ಬೆಳೆ ಚೆನ್ನಾಗಿಲಿಲ್ಲದಿದ್ದರೆ ಇಡೀ ಗ್ರಾಮದ ಬೆಳೆ ಚೆನ್ನಾಗಿಲ್ಲದಂತೆ ತೋರುತ್ತದೆ, ಆದರೆ ಕೆಲವೊಂದು ಕಡೆಗಳಲ್ಲಿ ಕಂಪ್ಯೂಟರ್ ಆಯ್ಕೆ ಮಾಡಿದ ಸರ್ವೇ ನಂಬರ್ ಜಮೀನಿನಲ್ಲಿ ಉತ್ತಮ ಬೆಳೆ ಇದ್ದು, ಉಳಿದ ಗ್ರಾಮದಲ್ಲಿ ಬೆಳೆ ನಾಶವಾಗಿದ್ದರೂ ಸಹ ಇಡೀ ಊರಿನಲ್ಲಿ ಉತ್ತಮ ಬೆಳೆ ಇದೆ ಎಂದು ಧೃಡೀಕೃತಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜ್ಯೋತಿ ಅಸ್ಕಿ ಮೊದಲಾದ ಸದಸ್ಯರು, ಕಂಪ್ಯೂಟರ್ ಆಧರಿಸಿ ಸರ್ವೇ ನಡೆಯುತ್ತದೆ ಎಂದರೆ ಏನಥ? ವಾಸ್ತವಿಕತೆ ಸಂಪೂರ್ಣ ಮರೆಯಾಗುತ್ತದೆ, ಹೀಗಾದರೆ ಇದು ರೈತರನ್ನು ತೊಂದರೆಗೀಡುಮಾಡುವ ಯೋಜನೆಯಾಗಿ ಬಿಡುತ್ತದೆ, ಇದು ಇನ್ಸೂರೆನ್ಸ್ ಕಂಪನಿಗಳಿಗೆ ಲಾಭವಾಗುತ್ತಿದೆಯೇ ಹೊರತು ರೈತರಿಗೆ ಇಲ್ಲ ಎಂದು ದೂರಿದರು. ಇನ್ಸೂರೆನ್ಸ್ ಕಂಪನಿಗಳು 10 ವರ್ಷ ಲಾಭದಲ್ಲಿಯೇ ಇರುತ್ತದೆ, ಒಂದು ವರ್ಷ ರೈತರಿಗೆ ವಿಮಾ ಹಣ ಕೊಡಲು ಅವರಿಗೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಕಟಾವು ಸಮೀಕ್ಷೆ ಮೊದಲಾದ ಕಾರ್ಯಗಳನ್ನು ನಿರ್ವಹಿಸುವ ಗ್ರಾಮ ಸೇವಕರು ಜಿಲ್ಲಾ ಪಂಚಾಯತ ಸದಸ್ಯರನ್ನು ಭೇಟಿಯೇ ಆಗುವುದಿಲ್ಲ, ಯಾವಾಗ ಎಲ್ಲಿ ಸರ್ವೇ ನಡೆಯುತ್ತದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ ಎಂದು ದೂರಿದರು.
ಆಗ ತಕ್ಷಣವೇ ಜಿ.ಪಂ. ಸಿಇಓ ಬೆಳೆ ಕಟಾವು ಸಮೀಕ್ಷೆ ಸೇರಿದಂತೆ ಮೊದಲಾದ ಕಾರ್ಯಗಳನ್ನು ಜಿಲ್ಲಾ ಪಂಚಾಯತ ಸದಸ್ಯರ ಸಮಕ್ಷಮದಲ್ಲಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಬೆಳೆ ಕಟಾವು ಸಮೀಕ್ಷೆಯೂ ಸರಿಯಾಗಿ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬಿ.ಆರ್. ಯಂಟಮಾನ, ಯಾವ ಪ್ರದೇಶದಲ್ಲಿ ಬೆಳೆ ಸ್ಟ್ಯಾಂಡರ್ಡ್ ಇರುತ್ತದೆಯೋ ಅದನ್ನೇ ವರದಿ ಕಳುಹಿಸಿ ಬಿಡುತ್ತೀರಿ, ಇದರಿಂದಾಗಿ ಇಡೀ ತಾಲೂಕಿಗೆ ಹೊಡೆತ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಧಿಕೃತ ಗೊಬ್ಬರ ಅಂಗಡಿ ಸೀಜ್ ಮಾಡಿ:
ಜಿಲ್ಲೆಯಲ್ಲಿರುವ ಅನಧಿಕೃತ ಗೊಬ್ಬರ ಅಂಗಡಿಗಳ ಮೇಲೆ ತಕ್ಷಣವೇ ದಾಳಿ ನಡೆಸಿ ಅವುಗಳನ್ನು ಜಪ್ತು ಮಾಡಬೇಕು ಎಂದು ಜಿ.ಪಂ. ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಸೂಚಿಸಿದರು.
ಆಗ ವಿವರಣೆ ನೀಡಿದ ಕೃಷಿ ಅಧಿಕಾರಿಗಳು, ಅನಧಿಕೃತವಾಗಿ ತಲೆ ಎತ್ತಿದ್ದ 17 ಗೊಬ್ಬರ ಅಂಗಡಿಗಳನ್ನು ಈಗಾಗಲೇ ಸೀಜ್ ಮಾಡಲಾಗಿದೆ ಎಂದು ವಿವರಿಸಿದರು.
ಸದಸ್ಯ ಕಲ್ಲಪ್ಪ ಕೊಡಬಾಗಿ ಆಕ್ಷೇಪ ವ್ಯಕ್ತಪಡಿಸಿ, ಅನಧಿಕೃತ ಗೊಬ್ಬರ ಅಂಗಡಿಗಳ ಸಂಖ್ಯೆ ಕೇವಲ 17 ಅಲ್ಲ, ಅದಕ್ಕೆ ಲೆಕ್ಕವೇ ಇಲ್ಲದಂತಾಗಿದೆ, ಅನಧಿಕೃತ ಅಂಗಡಿಗಳ ಹಾವಳಿ ವ್ಯಾಪಕವಾಗಿದೆ, ಬೇಕಾದರೆ ನನ್ನ ಜೊತೆ ಗಾಡಿಯಲ್ಲಿ ಬನ್ನಿ ಹೋಗಿ ನೋಡೋಣ ಎಂದರು.
ಆಗ ತಕ್ಷಣವೇ ಜಿ.ಪಂ. ಅಧ್ಯಕ್ಷ ನೇದಲಗಿ, ಜಿಲ್ಲೆಯಲ್ಲಿರುವ ಅನಧಿಕೃತ ಗೊಬ್ಬರ ಅಂಗಡಿಗಳನ್ನು ಕೂಡಲೇ ಸೀಜ್ ಮಾಡಿ ಎಂದು ತಾಕೀತು ಮಾಡಿದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.