ETV Bharat / state

ವಿಜಯಪುರದಲ್ಲಿ 15 ದಿನ ಲಾಕ್​ಡೌನ್​ ಮಾಡಿ: ಎಂ.ಬಿ.ಪಾಟೀಲ್​​ ಒತ್ತಾಯ - 15 Day LockDown at Vijayapura

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 15 ದಿನ ಲಾಕ್​ಡೌನ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್​ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಾಜಿ ಸಚಿವ ಎಂ.ಬಿ. ಪಾಟೀಲ್
ಮಾಜಿ ಸಚಿವ ಎಂ.ಬಿ. ಪಾಟೀಲ್
author img

By

Published : Jul 12, 2020, 5:24 PM IST

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಉಲ್ಭಣವಾಗುತ್ತಿದ್ದು 15 ದಿನ ಲಾಕ್‍ಡೌನ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್​​ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಆಸ್ಪತ್ರೆಗಳಲ್ಲಿಯೂ ಸಹ ರೋಗಿಗಳಿಗೆ ಬೆಡ್ ಸಿಗಲಾರದ ಪರಿಸ್ಥಿತಿ ಇದೆ.

ಹಾಗಾಗಿ, 15 ದಿನ ಲಾಕ್​ಡೌನ್​ ಮಾಡುವುದರಿಂದ ರೋಗ ಮತ್ತಷ್ಟು ಪಸರಿಸದಂತೆ ತಡೆಗಟ್ಟಬಹುದು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಹೆಚ್ಚಿನ ಹಾನಿ ಸಂಭವಿಸುವ ಮುಂಚೆಯೇ ಎಚ್ಚೆತ್ತುಕೊಡು ಲಾಕ್‍ಡೌನ್ ಘೋಷಿಸಲು ಪಾಟೀಲ್​ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.