ETV Bharat / state

ರಾಯಚೂರಿನಲ್ಲಿ ವ್ಯಕ್ತಿಗೆ ಸೋಂಕಿನ ಲಕ್ಷಣ, ವೈರಸ್‌ ಪತ್ತೆಯಾಗಿಲ್ಲ.. 14 ದಿನ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ! - corona precaution in vijaypura

ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಅಂತಹ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

14 days treatment compulsory: DC venkatesh kumar
14 ದಿನ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ಕಡ್ಡಾಯ
author img

By

Published : Mar 13, 2020, 6:00 PM IST

ರಾಯಚೂರು : ಇಟಲಿಯಿಂದ ವಾಪಸ್​ ಬಂದ ರಾಯಚೂರು ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ. ಆದರೆ, ಆತನಲ್ಲಿ ಯಾವುದೇ ವೈರಸ್​ ದೃಢಪಟ್ಟಿಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ 14 ದಿನಗಳ ಕಾಲ ಪ್ರತ್ಯೇಕ ವಾರ್ಡ್​ನಲ್ಲಿ ಆತನನ್ನ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌ ವೆಂಕಟೇಶ್​ ಕುಮಾರ್‌ ತಿಳಿಸಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ವಿದೇಶದಿಂದ ಐವರು ವಾಪಸ್ ಬಂದಿದ್ದಾರೆ. ಅವರನ್ನು 14 ದಿನ ಕ್ವಾರೆಂಟ್​ನಲ್ಲಿರಿಸಲಾಗಿದೆ. ರಿಮ್ಸ್​ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ ಜೊತೆಗೆ ತುರ್ತು ವಾಹನವನ್ನೂ ನೇಮಿಸಲಾಗಿದೆ. 5 ಚೆಕ್‌ಪೋಸ್ಟ್​ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಸುಳ್ಳು ಸುದ್ದಿ ಹರಡಿದ್ರೇ ಎಫ್‌ಐಆರ್‌ ಹಾಕ್ತೀವಿ.. ಜಿಲ್ಲಾಧಿಕಾರಿಗಳ ಎಚ್ಚರಿಕೆ!

ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಅಂತಹ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಕ್ಲಬ್​ಗಳಿಗೆ ಬೇರೆಡೆಯಿಂದ ಜನ ಆಗಮಿಸುತ್ತಿದ್ದಾರೆ. ಅವುಗಳನ್ನು ಸ್ಥಗಿತಗೊಳಸಬೇಕೆಂದು ಆದೇಶಿಸಲಾಗಿದೆ. ಇದರ ಜತೆಗೆ ಬೇಸಿಗೆ ಶಿಬಿರಗಳನ್ನೂ ರದ್ದುಗೊಳಿಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.