ವಿಜಯಪುರ: ಮಹಾಮಾರಿ ಕೂರೊನಾ ವಿರುದ್ದ ಹೋರಾಟಕ್ಕೆ ಮಹೇಶ್ವರಿ ಸಮಾಜ ಸಹಾಯ ಮಾಡಲು ಮುಂದಾಗಿದೆ. ಸುಮಾರು 10 ಲಕ್ಷ ರೂ. ದೇಣಿಗೆ ನೀಡುವ ಮೂಲಕ ನೆರವಿನ ಹಸ್ತ ಚಾಚಿದೆ.
ಕೂರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಪರಿತಪ್ಪಿಸುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂರೊನಾ ವೈರಸ್ ತಡೆಯಲು ನಿರತವಾಗಿ ಶ್ರಮಿಸುತ್ತಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ವಿಪತ್ತು ಪರಿಹಾರ ನಿಧಿಗೆ ಮಹೇಶ್ವರಿ ಸಮಾಜದಿಂದ ಸರ್ಕಾರಕ್ಕೆ ದೇಣಿಗೆ ನೀಡುತ್ತಿದ್ದೇವೆ ಎಂದು ಮಹೇಶ್ವರಿ ಸಮಾಜದ ಮುಖಂಡರು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಮೂಲಕ ಪ್ರಧಾನಿ ವಿಪತ್ತು ಪರಿಹಾರ ನಿಧಿಗೆ 10 ಲಕ್ಷ ರೂ ಚಕ್‌ನ್ನು ಮಹೇಶ್ವರಿ ಸಮಾಜದ ಮುಖಂಡರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.