ETV Bharat / technology

ಡೈರೆಕ್ಟ್-ಟು-ಡಿವೈಸ್ ಸರ್ವೀಸ್​ ಎಂದರೇನು?, ಈ ಸೇವೆಯಿಂದ ಮೂಲೆ-ಮೂಲೆಯಲ್ಲಿ ಸಿಗಲಿದೆ ಬಿಎಸ್​ಎನ್​ಎಲ್​ನ ನೆಟ್​ವರ್ಕ್​!

BSNL Direct to Device Service: ಬಿಎಸ್​ಎನ್​ಎಲ್​ನ ಡೈರೆಕ್ಟ್-ಟು-ಡಿವೈಸ್ ಸರ್ವೀಸ್​ ಅನ್ನು ಒದಗಿಸುವ ಸಾಧ್ಯತೆಯಿದೆ. ಇದು ಯಾವರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಮಾಹಿತಿ ಇಲ್ಲಿದೆ..

BSNL NETWORK  DIRECT TO DEVICE SERVICE  SATELLITE COMMUNICATIONS COMPANY  BSNL 5G SERVICE
ಡೈರೆಕ್ಟ್-ಟು-ಡಿವೈಸ್ ಸರ್ವೀಸ್​ (BSNL)
author img

By ETV Bharat Tech Team

Published : 2 hours ago

BSNL Direct to Device Service: ಕಳೆದ ದಶಕದಲ್ಲಿ ವೈರ್‌ಲೆಸ್ ನೆಟ್‌ವರ್ಕಿಂಗ್ ಮತ್ತು ಸಂಪರ್ಕವು ತೀವ್ರವಾಗಿ ಸುಧಾರಿಸಿದೆ. ಆದ್ರೂ ಸಹ ಇದು ಇನ್ನೂ ಸಂಪೂರ್ಣವಾಗಿಲ್ಲ. ಭಾರತದಲ್ಲಿ ಅನೇಕ ದೂರಸ್ಥ ಮತ್ತು ಸೇವೆ ತಲುಪದ ಸ್ಥಳಗಳಿವೆ. ಅಂತಹ ಸ್ಥಳಗಳಲ್ಲಿ ಸೆಲ್ಯುಲಾರ್ ಟವರ್ ಅನ್ನು ಸ್ಥಾಪಿಸುವುದು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ. ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್​ಎನ್​ಎಲ್​), ಅಮೆರಿಕ ಮೂಲದ ಉಪಗ್ರಹ ಸಂವಹನ ಕಂಪನಿಯಾದ Viasat ಸಹಭಾಗಿತ್ವದಲ್ಲಿ ಪರಿಹಾರವೊಂದನ್ನು ಕಂಡುಕೊಂಡಿದೆ. ಈ ಸಾಧನದಿಂದ ನೇರವಾಗಿ ಉಪಗ್ರಹ ಸಂಪರ್ಕ ಸೇವೆ ನೀಡಬಹುದಾಗಿದೆ. ಇದು ದೇಶದ ಮೂಲೆ ಮೂಲೆಗಳಲ್ಲಿ ಸೆಲ್ಯುಲರ್ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬಿಎಸ್​ಎನ್​ಎಲ್​ ಹೇಳಿಕೊಂಡಿದೆ.

ಡೈರೆಕ್ಟ್​ ಟು ಡಿವೈಸ್​ ಉಪಗ್ರಹ ಸಂಪರ್ಕವು ಹೊಚ್ಚಹೊಸ ತಂತ್ರಜ್ಞಾನವಲ್ಲ. ಆಪಲ್ ಮತ್ತು ಗೂಗಲ್‌ನಂತಹ ಫೋನ್ ತಯಾರಕರು ಸ್ವಲ್ಪ ಸಮಯದವರೆಗೆ ಅಂತಹ ಸೇವೆಗಳನ್ನು ನೀಡುತ್ತಿದ್ದಾರೆ. ಆದರೆ ಇವುಗಳ ಸೇವೆ ಭಾರತದಲ್ಲಿ ಅಲ್ಲ. ಭಾರತದಲ್ಲಿ ಡೈರೆಕ್ಟ್​ ಸ್ಯಾಟಲೈಟ್​ ಕನೆಕ್ಟಿವಿಟಿ ಸರ್ವೀಸ್​ ಅನ್ನು ಪ್ರಾರಂಭಿಸಿದ ಮೊದಲ ಟೆಲಿಕಾಂ ಸೇವಾ ಪೂರೈಕೆದಾರ ಬಿಎಸ್​ಎನ್​ಎಲ್​ ಆಗಲಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿವರ ಇಲ್ಲಿದೆ.

ಬಿಎಸ್​ಎನ್​ಎಲ್​ನ ಡೈರೆಕ್ಟ್-ಟು-ಡಿವೈಸ್ ಉಪಗ್ರಹ ಸಂಪರ್ಕಕ್ಕೆ ಮೂರು ಮುಖ್ಯ ಅಂಶಗಳ ಅಗತ್ಯವಿದೆ. ಉಪಗ್ರಹ ಸಂಪರ್ಕಕ್ಕೆ ಸಪೋರ್ಟ್​ ಹೊಂದಿರುವ ಸ್ಮಾರ್ಟ್‌ಫೋನ್, ಸ್ಯಾಟಲೈಟ್​ ಮತ್ತು ಸೆಲ್ಯುಲಾರ್ ಟವರ್. ದುರ್ಬಲ ಸಿಗ್ನಲ್‌ನಿಂದಾಗಿ ಫೋನ್​ನ ಸಮೀಪದ ಸೆಲ್ಯುಲಾರ್ ಟವರ್‌ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದಾಗ ಸ್ಮಾರ್ಟ್‌ಫೋನ್ ನಂತರ ಸ್ಯಾಟಲೈಟ್​ಗೆ ಸಂಪರ್ಕಗೊಳ್ಳುತ್ತದೆ. ಸ್ಯಾಟಲೈಟ್​ ನಂತರ ಅದೇ ಸಂಕೇತವನ್ನು ಹತ್ತಿರದ ಟವರ್‌ಗೆ ಕಳುಹಿಸುವ ಮೂಲಕ ಸಂಪರ್ಕವನ್ನು ಪೂರ್ಣಗೊಳಿಸುತ್ತದೆ.

ಬಿಎಸ್​ಎನ್​ಎಲ್​ ನಡೆಸಿದ ಪ್ರಯೋಗಗಳ ಪ್ರಕಾರ ಭೂಮಿಯಿಂದ 36,000 ಕಿ.ಮೀ. ದೂರದಲ್ಲಿರುವ ಭೂಸ್ಥಿರ ಎಲ್-ಬ್ಯಾಂಡ್ ಉಪಗ್ರಹದ ಮೂಲಕ ಟೆಕ್ಸ್ಟ್​ ಮೆಸೇಜ್​ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಲಭ್ಯವಿರುವ ಕೆಲವು ನೇರ-ಸಾಧನ ಉಪಗ್ರಹ ಸಂಪರ್ಕ ಸೇವೆಗಳಂತಲ್ಲದೆ, ರಕ್ಷಣಾ ತಂಡಕ್ಕೆ SOS ಸಂದೇಶಗಳನ್ನು ಕಳುಹಿಸಲು ಮಾತ್ರ ಬಳಸಬಹುದಾಗಿದೆ. ಬಿಎಸ್​ಎಲ್​ಎನ್​ನ ಈ ಸೇವೆಯನ್ನು ಯುಪಿಐ ಪಾವತಿಗಳನ್ನು ಮಾಡಲು ಸಹ ಬಳಸಬಹುದಾಗಿದೆ.

ಉಪಗ್ರಹದೊಂದಿಗೆ ಸಂಪರ್ಕವನ್ನು ಪಡೆಯಲು ಸ್ಮಾರ್ಟ್‌ಫೋನ್‌ಗೆ ವಿಶೇಷ ಯಂತ್ರಾಂಶದ ಅಗತ್ಯವಿರುವುದರಿಂದ ಇದು ಅಸಂಭವಾಗಿದೆ. ಆದರೂ ಇತ್ತೀಚಿನ ಕೆಲವು ಆಂಡ್ರಾಯ್ಡ್ ಫ್ಲ್ಯಾಗ್‌ಶಿಪ್‌ಗಳು ಮತ್ತು ಐಫೋನ್‌ಗಳು ಬಿಎಸ್​ಎನ್​ಎಲ್​ನ ಡೈರೆಕ್ಟ್-ಟು-ಡಿವೈಸ್ ಸ್ಯಾಟಲೈಟ್​ ಕನೆಕ್ಟಿವಿಟಿ ಸೇವೆಗಳನ್ನು ಸಪೋರ್ಟ್​ ಮಾಡಲಿವೆ ಮತ್ತು ಈ ಸೇವೆಯನ್ನು ಸಾಮಾನ್ಯ ಬಳಕೆದಾರರಿಗೆ ಪರಿಚಯಿಸಿದಾಗ ಬಿಎಸ್​ಎನ್​ಎಲ್​ ತನ್ನ ಉಪಗ್ರಹ ಸಂಪರ್ಕ ಸೇವೆಗೆ ಹೊಂದಿಕೆಯಾಗುವ ಸಾಧನಗಳ ಪಟ್ಟಿಯನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.

ಈ ಸೇವೆಯನ್ನು ಅಧಿಕೃತವಾಗಿ ಘೋಷಿಸಲಾಗಿದ್ದರೂ ಬಿಎಸ್​ಎನ್​ಎಲ್​ ಅದನ್ನು ಹೇಗೆ ಬಳಸುವುದು ಮತ್ತು ವಿಶೇಷ ರೀಚಾರ್ಜ್ ಯೋಜನೆ ಅಗತ್ಯ ಸೇರಿದಂತೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಬೇಕಾಗಿದೆ.

ಓದಿ: ಇಸ್ರೋದೊಂದಿಗೆ ಕೈಜೋಡಿಸಿದ ಇಎಸ್​ಎ - PSLV-XLನಿಂದ ಲಾಂಚ್​ ಆಗಲಿದೆ ಪ್ರೋಬಾ-3 ಮಿಷನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.