ETV Bharat / bharat

ರಾಜಸ್ಥಾನದಲ್ಲಿ ಅರಳಿದ "ಡಯಾನಾ ಅಂಜೂರ": ಮರಳುಗಾಡಿನಲ್ಲಿ ಅಚ್ಚರಿ ಮೂಡಿಸಿದ ಕಜ್ರಿ ವಿಜ್ಞಾನಿಗಳು! - DIANA FIG FARMING IN RAJASTHAN

ರಾಜಸ್ಥಾನದ ಜೋಧ್‌ಪುರದಲ್ಲಿರುವ ಸೆಂಟ್ರಲ್‌ ಆರಿಡ್‌ ಝೋನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಕ್ಯಾಂಪಸ್‌ನಲ್ಲಿ 1 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಡಯಾನಾ ತಳಿಯ ಅಂಜೂರವನ್ನು ಬೆಳೆಯಲಾಗುತ್ತಿದ್ದು, ಅಸಾಧ್ಯವನ್ನು ಕಜ್ರಿ ವಿಜ್ಞಾನಿಗಳು ಸಾಧ್ಯವಾಗಿಸಿದ್ದಾರೆ.

ರಾಜಸ್ಥಾನದಲ್ಲಿ ಅರಳಿದ "ಡಯಾನಾ ಅಂಜೂರ"
ರಾಜಸ್ಥಾನದಲ್ಲಿ ಅರಳಿದ "ಡಯಾನಾ ಅಂಜೂರ" (ETV Bharat)
author img

By ETV Bharat Karnataka Team

Published : Nov 30, 2024, 8:03 AM IST

Updated : Nov 30, 2024, 8:09 AM IST

ಜೋಧ್​ಪುರ (ರಾಜಸ್ಥಾನ)​: ಭಾರತದಲ್ಲಿ ಮುಖ್ಯವಾಗಿ ಅಂಜೂರವನ್ನು ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಲೋಮಮಿ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಆದರೆ ಈಗ ಈ ಬೆಳೆಯನ್ನು ರಾಜಸ್ಥಾನದ ಮಾರ್ವಾರ್‌ನಲ್ಲಿಯೂ ಬೆಳೆಯಲಾಗುತ್ತಿದ್ದು, ಸಮೃದ್ಧವಾಗಿ ಅಂಜೂರ ಫಸಲು ಬಂದಿದೆ.

ಜೋಧ್‌ಪುರದ ಕಜ್ರಿ ಕ್ಯಾಂಪಸ್‌ನಲ್ಲಿ ಒಂದು ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯಲ್ಲಿ ಡಯಾನಾ ತಳಿಯ ಅಂಜೂರದ ಹಣ್ಣುಗಳನ್ನು ಕೊಯ್ಲು ಮಾಡಲಾಗುತ್ತಿದೆ. ಇದಕ್ಕಾಗಿ ಕಜ್ರಿ ವಿಜ್ಞಾನಿಗಳು ತುಂಬಾ ಶ್ರಮಿಸಿದ್ದಾರೆ. ಅದರ ಪ್ರತಿಫಲವಾಗಿ ಮರಳು ದಿಬ್ಬಗಳ ನಾಡು ರಾಜಸ್ಥಾನದಲ್ಲೂ ಅಂಜೂರದ ಕೃಷಿ ಸಾಧ್ಯವಾಗಿದೆ.

ಕಜ್ರಿಯಿಂದ ತರಬೇತಿ ಪಡೆದ ನಂತರ ಕೆಲವು ಪ್ರಗತಿಪರ ರೈತರು ಬಾರ್ಮರ್​, ಜೈಸಲ್ಮೇರ್ ಮತ್ತು ಗಂಗಾನಗರ ಮತ್ತು ಹನುಮಾನ್‌ಗಢದಲ್ಲಿ ಅದರ ಕೃಷಿಯನ್ನು ಪ್ರಾರಂಭಿಸಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಹಿಂದೆ ವಿಜ್ಞಾನಿಗಳು ಕಜ್ರಿಯಲ್ಲಿ ಅಂಜೂರದ ಹಣ್ಣುಗಳ ಬಗ್ಗೆ ಸಂಶೋಧನಾ ಕಾರ್ಯವನ್ನು ಪ್ರಾರಂಭಿಸಿದರು. ಇದರಲ್ಲಿ ಡಯಾನಾ ತಳಿಯ ಅಂಜೂರ ಉತ್ತಮ ಫಲಿತಾಂಶಗಳನ್ನು ನೀಡಿದ್ದವು. ಬಳಿಕ ಇದರ ಬಗ್ಗೆ ಕಜ್ರಿ ರೈತರಿಗೆ ತರಬೇತಿ ನೀಡುವ ಕಾರ್ಯ ಆರಂಭಿಸಲಾಯಿತು.

ಕಜ್ರಿ ನಿರ್ದೇಶಕ ನಿರ್ದೇಶಕ ಡಾ. ಒ. ಪಿ. ಯಾದವ್ ಮಾತನಾಡಿ, ಕೇಂದ್ರ ಒಣ ವಲಯ ಸಂಶೋಧನಾ ಸಂಸ್ಥೆಯು ರೈತರ ಆದಾಯವನ್ನು ಹೆಚ್ಚಿಸಲು ಆವಿಷ್ಕಾರಗಳನ್ನು ಮಾಡುತ್ತದೆ. ಇದರ ಅಡಿಯಲ್ಲಿ ಅಂಜೂರ ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಂಜೂರದ ಬೆಳೆಗೆ ನೀರು ಬೇಕು: ಸಮಗ್ರ ಕೃಷಿ ಪದ್ಧತಿ ವಿಭಾಗದ ಮುಖ್ಯಸ್ಥ ಡಾ. ಧೀರಜ್ ಸಿಂಗ್ ಮಾತನಾಡಿ, "ಕಜ್ರಿಯಲ್ಲಿ ಈ ಕುರಿತು ನಡೆದ ಸಂಶೋಧನಾ ಕಾರ್ಯದಿಂದ ಉತ್ತಮ ಫಲಿತಾಂಶ ಬರುತ್ತಿದೆ. ಡಯಾನಾ ವಿಧದ ಅಂಜೂರದ ಹಣ್ಣುಗಳು ರಾಜಸ್ಥಾನದ ಹವಾಮಾನಕ್ಕೆ ತುಂಬಾ ಸೂಕ್ತವೆಂದು ಸಾಬೀತಾಗಿದೆ. ಅಂಜೂರವನ್ನು ಅರೆ-ಶುಷ್ಕ ಪರಿಸರದಲ್ಲಿ ಮತ್ತು ಮಧ್ಯಮ ತಾಪಮಾನದಲ್ಲಿ ಬೆಳೆಸಲಾಗುತ್ತದೆ. ಈ ಸಸ್ಯವನ್ನು ಶಾಖದ ಅಲೆಯಿಂದ ರಕ್ಷಿಸಬೇಕು. ರೈತರಿಗೆ ಯಾವುದೇ ಹಾನಿಯಾಗದಂತೆ ತರಬೇತಿ ಸಮಯದಲ್ಲಿ ಇದನ್ನು ಹೇಳಲಾಗುತ್ತದೆ. ಈ ಕೃಷಿಗೆ ಸಾಕಷ್ಟು ನೀರು ಬೇಕು. ಆದ್ದರಿಂದ ನೀರಾವರಿಗಾಗಿ ಹನಿ ವಿಧಾನವನ್ನು ಬಳಸಬಹುದು.

ಅಂಜೂರದ ಹಣ್ಣುಗಳನ್ನು ಒಣಗಿಸುವ ಕೆಲಸ: "ಒಂದು ಹೆಕ್ಟೇರ್‌ನಲ್ಲಿ 250 ಗಿಡಗಳನ್ನು ನೆಡಲಾಗಿದೆ. 3 ವರ್ಷಗಳ ನಂತರ, ಪ್ರತಿ ಮರದಿಂದ 15 ರಿಂದ 20 ಕೆಜಿ ಅಂಜೂರದ ಹಣ್ಣುಗಳನ್ನು ಪಡೆಯಲಾಗುತ್ತದೆ. ಹಳೆಯ ಮರ ಆಗಿರುವುದರಿಂದ ಉತ್ಪಾದನೆ ಸಹ ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಹಸಿ ಅಂಜೂರದ ಬೆಲೆ ಕೆಜಿಗೆ 100 ರಿಂದ 150 ರೂ. ಇದೆ. ಆದರೆ, ಅದನ್ನು ಹಸಿಯಾಗಿ ತಿನ್ನುವುದು ಸದ್ಯದ ಟ್ರೆಂಡ್ ಅಲ್ಲ. ಇದು ತುಂಬಾ ಪೌಷ್ಟಿಕವಾಗಿದ್ದರೂ ಇದರಲ್ಲಿ ಹೆಚ್ಚಿನ ಫೈಬರ್ ಅಂಶವಿರುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ರೈತರಲ್ಲಿ ಇದನ್ನು ಹೆಚ್ಚು ಜನಪ್ರಿಯಗೊಳಿಸಲು, ಈ ಹಣ್ಣನ್ನು ಒಣಗಿಸುವ ಸರಳ ತಂತ್ರದ ಮೇಲೆ ಕೆಲಸ ಮಾಡುವ ಅವಶ್ಯಕತೆಯಿದೆ. ಅದೇ ಸಮಯದಲ್ಲಿ, ಹೆಕ್ಟೇರ್‌ಗೆ 5 ರಿಂದ 6 ಲಕ್ಷ ರೂ. ಆದಾಯವನ್ನು ಗಳಿಸಬಹುದು ಎಂದು ಡಾ. ಸಿಂಗ್ ಮಾಹಿತಿ ನೀಡಿದರು.

ಇದನ್ನೂ ಓದಿ: ರೈತರೊಂದಿಗೆ ಸೇರಿ ಶಾಲಾ ವಿದ್ಯಾರ್ಥಿನಿಯರ ಭತ್ತದ ನಾಟಿ; ಕೈಗೆ ಬಂತು 60 ಚೀಲ ಫಸಲು; 'ಫಲ' ನೀಡಿದ ಹೆಡ್‌ ಮಾಸ್ಟರ್‌ ಕೃಷಿ ಪಾಠ

Last Updated : Nov 30, 2024, 8:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.