ETV Bharat / education-and-career

ಉಡುಪಿಯಲ್ಲಿದೆ ಉದ್ಯೋಗಾವಕಾಶ: ಎಂಎಸ್​ಡಬ್ಲ್ಯೂ ಪದವೀಧರರಿಗೆ ಸುವರ್ಣಾವಕಾಶ..ಅರ್ಹರು ಅಪ್ಲೈ ಮಾಡಿ! - UDUPI DISTRICT TOBACCO CONTROL UNIT

ಒಂದು ವರ್ಷದ ಅವಧಿಗೆ ಹುದ್ದೆ ನೇಮಕಾತಿ ನಡೆಯಸಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಹುದ್ದೆ ವಿಸ್ತರಣೆ ಆಗಲಿದೆ.

District Social Worker Job Notification By UDUPI District Tobacco Control Unit
ಉದ್ಯೋಗ ಮಾಹಿತಿ (ಈಟಿವಿ ಭಾರತ್​​)
author img

By ETV Bharat Karnataka Team

Published : Nov 29, 2024, 3:21 PM IST

ಬೆಂಗಳೂರು: ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ.

ಹುದ್ದೆ ವಿವರ: ಜಿಲ್ಲಾ ಸಮಾಜ ಕಾರ್ಯಕರ್ತರು- 1 ಹುದ್ದೆ ನೇಮಕಾತಿ

ವಿದ್ಯಾರ್ಹತೆ: ಅಭ್ಯರ್ಥಿಯು ಸಮಾಜ ಕಾರ್ಯ ಅಥವಾ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ವೇತನ: ಮಾಸಿಕ 25,000 ರೂ

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡು ವರ್ಷದ ಕಾರ್ಯ ನಿರ್ವಹಣೆ ಅನುಭವ ಹೊಂದಿರಬೇಕು. ಆರೋಗ್ಯ ವಲಯದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

District Social Worker Job Notification By UDUPI District Tobacco Control Unit
ಅಧಿಸೂಚನೆ (ಉಡುಪಿ ಜಿಲ್ಲಾಡಳಿತ)

ಒಂದು ವರ್ಷದ ಅವಧಿಗೆ ಹುದ್ದೆ ನೇಮಕಾತಿ ನಡೆಯಸಲಾಗುವುದು. ಅಭ್ಯರ್ಥಿಗಳ ಕಾರ್ಯಕ್ರಮತೆ ಆಧಾರದ ಮೇಲೆ ಹುದ್ದೆ ವಿಸ್ತರಣೆ ನಡೆಯಲಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ರೋಸ್ಟರ್​ ಕಂ ಮೆರಿಟ್​ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಉಡುಪಿ ಜಿಲ್ಲಾಡಳಿತದ ಅಧಿಕೃತ ಜಾಲತಾಣದಲ್ಲಿ ನೀಡಲಾದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆ ಮತ್ತು ಪ್ರಮಾಣಪತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು.

ಅರ್ಜಿ ಸಲ್ಲಿಕೆ ವಿಳಾಸ: ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉಡುಪಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಕಡೇಯ ದಿನ ಡಿಸೆಂಬರ್​ 11 ಆಗಿದೆ. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು udupi.nic.in ಭೇಟಿ ನೀಡಿ.

ಗದಗ ಜಿಲ್ಲಾ ಪಂಚಾಯತಿಯಲ್ಲಿ ಉದ್ಯೋಗ: ಸ್ವಚ್ಛ ಭಾರತ ಮಿಷನ್​ (ಗ್ರಾ) ಯೋಜನೆ ಅಡಿ ಗದಗ ಜಿಲ್ಲಾ ಪಂಚಾಯತ್​ನಲ್ಲಿ ಜಿಲ್ಲಾ ಎಂಐಎಸ್​ ಸಮಾಲೋಚಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಖ್ಯಾಶಾಸ್ತ್ರ, ಎಂಸಿಎ, ಎಂಎಸ್​​​​​​ಸಿ ಕಂಪ್ಯೂಟರ್​ ಸೈನ್ಸ್​​, ಬಿಇ ಪದವೀದರರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ನಾಲ್ಕು ವರ್ಷದ ಕಾರ್ಯನಿರ್ವಹಣೆ ಅನುಭವ ಹೊಂದಿರಬೇಕು.

ಅಭ್ಯರ್ಥಿಗಳು ಕನಿಷ್ಠ 21 ಮತ್ತು ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು.

ಈ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕಾತಿ ನಡೆಸಲಾಗುವುದು. ಅಭ್ಯರ್ಥಿ ಕಾರ್ಯಕ್ಷಮತೆ ಆಧಾರದ ಮೇಲ ಹುದ್ದೆ ವಿಸ್ತರಣೆ ನಡೆಯಲಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಗದಗ ಜಿಲ್ಲಾಡಳಿತ ವೆಬ್​ತಾಣದ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಯಾವುದೇ ಅರ್ಜಿ ಶುಲ್ಕ ನಿಗದಿ ಮಾಡಲಾಗಿಲ್ಲ

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನ ಡಿಸೆಂಬರ್​ 5 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗಾಗಿ gadag.nic.in ಭೇಟಿ ನೀಡಿ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ 48 ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.