ETV Bharat / state

ಡೆಂಘೀ ಜ್ವರಕ್ಕೆ ಭಟ್ಕಳದ 24 ವರ್ಷದ ಯುವಕ ಬಲಿ - Youth died of dengue in Bhatkal

ಡೆಂಘೀ ಜ್ವರಕ್ಕೆ ಯುವಕ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

youth-died-of-dengue-in-bhatkal-uttarakannada
ಡೆಂಗ್ಯು ಜ್ವರಕ್ಕೆ ಭಟ್ಕಳದ 24 ವರ್ಷದ ಯುವಕ ಬಲಿ
author img

By ETV Bharat Karnataka Team

Published : Oct 23, 2023, 12:41 PM IST

ಭಟ್ಕಳ (ಉತ್ತರಕನ್ನಡ) : ಡೆಂಘೀ ಜ್ವರದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಉಡುಪಿಯ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರುವ ವೇಳೆ ಯುವಕ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಮಾವಿನಕುರ್ವ ಗ್ರಾಮ ಪಂಚಾಯತ್​ ವ್ಯಾಪ್ತಿಯ ತಲಗೋಡ ನಿವಾಸಿ ಪ್ರಜ್ವಲ ಖಾರ್ವಿ(24) ಎಂದು ಗುರುತಿಸಲಾಗಿದೆ.

ಮೃತ ಪ್ರಜ್ವಲ್​ ಖಾರ್ವಿ ಇಲ್ಲಿನ ಸಾಗರ ಶ್ರೀ ಬೋಟ್​​ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಒಂದು ವಾರದಿಂದ ಪ್ರಜ್ವಲ್​ ಡೆಂಘೀ ಜ್ವರದಿಂದ ಬಳಲುತ್ತಿದ್ದ. ಈ ಸಂಬಂಧ ಅಕ್ಟೋಬರ್​ 19ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಜ್ವರ ಹೆಚ್ಚಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 2 ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಇಲ್ಲಿಂದ ಡಿಸ್ಚಾರ್ಜ್ ಮಾಡಿಕೊಂಡು ಭಟ್ಕಳಕ್ಕೆ ಬರುವ ವೇಳೆ ಯುವಕ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಡೆಂಘೀ ತಾಣವಾಗಿರುವ ಭಟ್ಕಳ ಬಂದರು : ಕಳೆದ ಜೂನ್, ಜುಲೈನಿಂದ ತಿಂಗಳಲ್ಲಿ ಬಂದರು ಸುತ್ತಮುತ್ತಲಿನ ಸ್ವಚ್ಛತೆಗಾಗಿ ಟೆಂಡರ್ ಕರೆಯಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಬಂದರು ಮೀನುಗಾರಿಕೆ ಸೊಸೈಟಿ ಈ ಟೆಂಡರ್ ಪಡೆದಿದ್ದು, ಮೀನುಗಾರಿಕಾ ಇಲಾಖೆ ಟೆಂಡರ್ ನೀಡದೇ ಇರುವ ಕಾರಣ ಬಂದರು ಸುತ್ತಮುತ್ತಲಿನ ನೀರು ನಿಂತು ದುರ್ಗಂಧ ಬೀರುತ್ತಿದೆ. ಸ್ವಚ್ಛತೆಯನ್ನು ಕಡೆಗಣಿಸಿರುವ ಕಾರಣ ಈ ಭಾಗದಲ್ಲಿ ಹೆಚ್ಚು ಡೆಂಘೀ ಪ್ರಕರಣ ಕಂಡು ಬಂದಿದೆ.

ಇದನ್ನೂ ಓದಿ : ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 2.5 ಕೋಟಿ ವಂಚನೆ ಆರೋಪ: ಚೈತ್ರಾ ಮಾದರಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ

ನಾಪತ್ತೆಯಾದ ಚರ್ಮರೋಗ ತಜ್ಞ ಪತ್ತೆ : ಕಳೆದ ಅಕ್ಟೋಬರ್ 10 ರಂದು ಮನೆಯಿಂದ ತೆರಳಿ ನಾಪತ್ತೆಯಾದ ಭಟ್ಕಳ ಸರಕಾರಿ ಆಸ್ಪತ್ರೆಯ ಚರ್ಮ ರೋಗ ತಜ್ಞ ವೈದ್ಯ ಡಾ. ಉಮೇಶ ಎಚ್.ಟಿ ಭಟ್ಕಳ ಗ್ರಾಮೀಣ ಠಾಣೆಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಜರಾಗಿದ್ದಾರೆ.

ಪಟ್ಟಣದ ಡಿ.ಪಿ. ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂಲತಃ ಹರಪನಹಳ್ಳಿ ಹಳ್ಳಿ ನಿವಾಸಿ ಡಾ. ಎಚ್.ಟಿ ಉಮೇಶ್​, ಅ.10ರ ಬೆಳಗ್ಗೆ ತನ್ನ ಮನೆಯಿಂದ ಕರ್ತವ್ಯಕ್ಕೆ ಎಂದು ತೆರಳಿದವರು ಮರಳಿ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಈ ಕುರಿತು ವೈದ್ಯರ ಪತ್ನಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಳಿಕ ಪೊಲೀಸರು ವೈದ್ಯ ಡಾ. ಉಮೇಶ ಎಚ್.ಟಿ ಮುಂಬೈನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಭಟ್ಕಳದಿಂದ ಹೊರಟ ವೈದ್ಯರು ತಮ್ಮ ಕಾರಿನ ಮೂಲಕ ಕುಂದಾಪುರಕ್ಕೆ ತೆರಳಿ ಅಲ್ಲಿಂದ ಶಿವಮೊಗ್ಗ, ಬಳ್ಳಾರಿ ಮಾರ್ಗವಾಗಿ ಅಹಮದಾಬಾದ್​ನಿಂದ ಮುಂಬೈಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ನಂತರ ವೈದ್ಯರು ತಮ್ಮ ಊರಿನಲ್ಲಿರುವ ತಂದೆ ಹಾಗೂ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ರಾಣಿಬೆನ್ನೂರಿಗೆ ಬರುವುದಾಗಿ ತಿಳಿಸಿದ್ದಾರೆ. ಬಳಿಕ ಕುಟುಂಬಸ್ಥರು ಅಲ್ಲಿಗೆ ತೆರಳಿ ವೈದ್ಯರನ್ನು ಭಟ್ಕಳಕ್ಕೆ ಕರೆತಂದಿದ್ದಾರೆ. ಗ್ರಾಮೀಣ ಠಾಣೆಯ ಸಿಪಿಐ ಚಂದನ ಗೋಪಾಲ ಹಾಗೂ ಪಿಎಸ್ಐ ಮಯೂರ, ಪಟ್ಟಣಶೆಟ್ಟಿ ಮತ್ತು ಪಿಎಸ್ಐ ಶ್ರೀಧರ್ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನು ಓದಿ: ಹೆಚ್ಚುತ್ತಿದೆ ಡೆಂಘೀ ಪ್ರಕರಣಗಳ ಸಂಖ್ಯೆ; 13ಸಾವಿರ ಪ್ರಕರಣ ದಾಖಲು.. ಏನೆಲ್ಲಾ ಮುಂಜಾಗ್ರತೆ ತೆಗೆದುಕೊಳ್ಳಬೇಕು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.