ಭಟ್ಕಳ: ಮನೆ ಟೆರಸ್ ಮೇಲೆ ನಿಂತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಕಾರ್ಸ್ಟ್ರೀಟ್ ಬಳಿ ನಡೆದಿದೆ.
ಮೊಹಮ್ಮದ್ ಫಹಾದ್ ಫಾರಿಕ್ ಮನಿಯಾರ (18) ಮೃತ ಯುವಕ. ಹಜಪ್ ಫಾರಿಕ್ ಮನಿಯಾರ (15) ಗಾಯಗೊಂಡಿರುವ ಯುವಕ. ಈ ಇಬ್ಬರು ಸಹೋದರರು ತಮ್ಮ ಮನೆಯ ಮೇಲಿನ ಟೆರಸ್ ಮೇಲೆ ನಿಂತಿದ್ದರು. ಆಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅಕ್ಕ- ಪಕ್ಕದ ಮನೆಯವರು ಯುವಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಇನ್ನು ಗಾಯಗೊಂಡ ಮತ್ತೊಬ್ಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.