ETV Bharat / state

ಪುನೀತ್ ಸಾವಿನ ಬಳಿಕ ಭಟ್ಕಳದ ಸರ್ಕಾರಿ ಆಸ್ಪತ್ರೆ ಕಡೆ ಮುಖ ಮಾಡಿದ ಯುವ ಜನತೆ

ನಟ ಪುನೀತ್​​ ರಾಜ್​​ಕುಮಾರ್ (puneeth rajkumar) ಹೃದಯಾಘಾತದಿಂದ ಮೃತಪಟ್ಟ ಬೆನ್ನಲ್ಲೇ ಜನರಲ್ಲಿ ಇದೀಗ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ರಾಜ್ಯಾದ್ಯಂತ ಹೃದಯ ಪರೀಕ್ಷೆಗಾಗಿ ಜನರು ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ. ಅಂತೆಯೇ ಭಟ್ಕಳದ ಸರ್ಕಾರಿ ಆಸ್ಪತ್ರೆ(Bhatkal govt hospital)ಯಲ್ಲಿ ದಿನಕ್ಕೆ ಕನಿಷ್ಠ ಮೂವರು, ಹೊರರೋಗಿಯಲ್ಲಿ ಶೇ. 40ರಷ್ಟು ಯುವ ಜನತೆ ತಪಾಸಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.

Bhatkal govt hospital
ಭಟ್ಕಳದ ಸರ್ಕಾರಿ ಆಸ್ಪತ್ರೆ
author img

By

Published : Nov 11, 2021, 11:12 AM IST

ಭಟ್ಕಳ: ಕಳೆದ ಎರಡು ವಾರದ ಹಿಂದೆ ನಟ ಪುನೀತ್ ರಾಜ್‌ಕುಮಾರ್ (puneeth rajkumar) ಅವರು ಆಕಸ್ಮಿಕ ಹೃದಯಾಘಾತದಿಂದ (Heart Attack) ಮೃತಪಟ್ಟ ಬಳಿಕ ತಾಲೂಕಿನಲ್ಲಿ ಯುವ ಜನತೆ ತಮ್ಮ ಆರೋಗ್ಯದ ಕಾಳಜಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.

ಭಟ್ಕಳದ ಸರ್ಕಾರಿ ಆಸ್ಪತ್ರೆ(Bhatkal govt hospital)ಯಲ್ಲಿ ದಿನಕ್ಕೆ ಕನಿಷ್ಠ ಮೂವರು, ಹೊರರೋಗಿಯಲ್ಲಿ ಶೇ. 40ರಷ್ಟು ಯುವ ಜನತೆ ತಪಾಸಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ದಿನದ ಹೊರ ರೋಗಿಗಳಲ್ಲಿನ ಶೇ. 40ರಷ್ಟು ಮಂದಿ ಎದೆ ನೋವು, ಉಸಿರಾಟದ ಸಮಸ್ಯೆಯಿದೆ ಎಂದು ಭಯದಲ್ಲಿಯೇ ಆಸ್ಪತ್ರೆಗೆ ಬಂದು ತಪಾಸಣೆಗೆ ಮಾಡಿಸಿಕೊಳ್ಳುತ್ತಿದ್ದಾರೆ. ಆಶ್ವರ್ಯಕರ ಸಂಗತಿಯೆಂದರೆ ಅದರಲ್ಲಿ ಬಹುತೇಕರು ಯುವಕರೇ ಆಗಿದ್ದಾರೆ. ಪುನೀತ್ (Puneeth) ಸಾವು ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದರೂ, ಜನರು ಬೆಚ್ಚಿ ಬೀಳುವ ಅವಶ್ಯಕತೆಯಿಲ್ಲ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆ ವೈದ್ಯರು.

ಹೃದಯಾಘಾತದ ಬಗ್ಗೆ ಹೆಚ್ಚಿದ ಜಾಗ್ರತೆ

ಭಟ್ಕಳದಲ್ಲಿ ಜನರಿಗೆ ಮೊದಲಿಗಿಂತ ಒಂದು ಪಟ್ಟು ಜಾಸ್ತಿಯೇ ಹೃದಯಾಘಾತದ ಸಮಸ್ಯೆಯ ಬಗ್ಗೆ ಜಾಗೃತಿ ಹೆಚ್ಚಿದಂತಿದೆ. ಈ ಮೊದಲು ಹೃದಯಾಘಾತದ ಸಮಸ್ಯೆಯಿದ್ದ ರೋಗಿಗಳಿಗೆ ಇಸಿಜಿ(ECG), ಸ್ಕ್ಯಾನಿಂಗ್​​ (Scanning) ಸೇರಿದಂತೆ ಇನ್ನಿತರ ತಪಾಸಣೆ ಮಾಡಿಸಲು ವೈದ್ಯರು ಸೂಚಿಸಿದಲ್ಲಿ ಅವೆಲ್ಲವೂ ಸುಮ್ಮನೆ ಎಂದು ವೈದ್ಯರ ಸೂಚನೆ ನಿರಾಕರಿಸುತ್ತಿದ್ದರು. ಆದರೆ, ಈಗ ಎಲ್ಲ ರೀತಿಯ ತಪಾಸಣೆ ಮಾಡಿಸಿ ಎಂದು ಅವರೇ ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂಬಂತಾಗಿದೆ.

ಕಳೆದ 2 ವಾರದಿಂದ ಇಲ್ಲಿಯವರೆಗೆ ನಿತ್ಯವೂ ಈ ಹಿಂದಿನ ಅವಧಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಜನರು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ (Bhatkal govt hospital)ಧಾವಿಸುತ್ತಿದ್ದು, ನಿತ್ಯವೂ 100ಕ್ಕೂ ಹೆಚ್ಚು ಜನರು ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ.

ಆತ್ಮಸ್ಥೈರ್ಯ ತುಂಬುತ್ತಿರುವ ವೈದ್ಯರು

ರೋಗಿಗಳಿಗೆ ಪೂರಕವಾಗಿ ಸ್ಪಂದನೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರು, ಅವರಿಗೆ ಆತ್ಮಸ್ಥೈರ್ಯ ಹಾಗೂ ಹೃದಯಾಘಾತದ ಬಗೆಗಿನ ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸುತ್ತಿದ್ದಾರೆ. ಅನುವಂಶಿಕವಾಗಿರುವ ಕಾಯಿಲೆ ಹೊರತಾಗಿಯೂ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತವಾಗಲಿದೆ ಎಂಬುದು ಪುನೀತ್ ಅವರ ಸಾವಿನಿಂದ ದೃಢಪಟ್ಟಂತಾಗಿದೆ. ಆದರೆ, ಇದಕ್ಕೆ ಹೆದರುವ ಅವಶ್ಯಕತೆಯಿಲ್ಲ.

ಚಿಕಿತ್ಸೆಗೆ ಬರುವವರು ಈ ವಯಸ್ಸಿನವರು!

ತಾಲೂಕಿನ ಸರ್ಕಾರಿ ಆಸ್ಪತ್ರೆಗೆ 20 - 40 ವರ್ಷದೊಳಗಿನ ಯುವಕರೇ ಭಯದಿಂದ ಆಸ್ಪತ್ರೆಗೆ ಬರುತ್ತಿದ್ದಾರೆ. ಇನ್ನೇನು ತಮಗೆ ಹೃದಯಾಘಾತವೇ ಆಯಿತು ಎನ್ನುವಷ್ಟರ ಮಟ್ಟಿಗೆ ಏನು ಇಲ್ಲದ ಆರೋಗ್ಯ ಸ್ಥಿತಿಯನ್ನು ಹಾಳು ಮಾಡಿಕೊಳ್ಳುವವರು ಜಾಸ್ತಿಯಾಗಿದ್ದಾರೆ. ಒಂದೇ ಸಮನೆ ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆ, ನೋವು ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಓರ್ವ ವ್ಯಕ್ತಿಯ ನಿತ್ಯ ದಿನಚರಿ, ಊಟ, ತಿಂಡಿ, ವ್ಯಾಯಾಮ, ನಿದ್ದೆ, ಒತ್ತಡ ಎಲ್ಲದರ ಮೇಲೆ ಆರೋಗ್ಯ ಹಾಳಾಗಲಿದೆ. ಈ ಬಗ್ಗೆ ಜನರು ಆತಂಕಪಡುವುದಕ್ಕಿಂತ ಕಾಳಜಿ ಮಾಡುವುದು ಸೂಕ್ತ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆಯ ವೈದ್ಯರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.