ಶಿರಸಿ(ಉತ್ತರಕನ್ನಡ) : ದಕ್ಷಿಣ ಭಾರತ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನ 16 ವರ್ಷದೊಳಗಿನ ಹ್ಯಾಮರ್ ಎಸೆತದಲ್ಲಿ ಶಿರಸಿಯ ಯಶಸ್ ಪ್ರವೀಣ್ ಕುರುಬರ ಬಂಗಾರದ ಪದಕ ಗೆದ್ದಿದ್ದಾರೆ.
ಸೆ.6 ರಿಂದ 11 ರವರೆಗೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ಚಾಂಪಿಯನ್ಶಿಪ್ ನಡೆಯಿತು. ಕರ್ನಾಟಕವನ್ನು ಪ್ರತಿನಿಧಿಸಿದ ಯಶಸ್ ದಕ್ಷಿಣ ಭಾರತ ಕೂಟ ದಾಖಲೆಯೊಂದಿಗೆ ಹ್ಯಾಮರನ್ನು 61.96 ಮೀ. ದೂರ ಎಸೆದು ಜಯಶಾಲಿಯಾಗಿದ್ದಾರೆ.
ಯಶಸ್ ಅವರು ಸಿದ್ದಾಪುರ ತಾಲೂಕಿನ ಶ್ರೀ ಕಾಳಿಕಾ ಭವಾನಿ ಸೆಕೆಂಡರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರವೀಣ ಕುರುಬರ ಹಾಗೂ ರಶ್ಮಿ ಅವರ ಪುತ್ರನಾಗಿದ್ದು, ಶಿರಸಿಯ ಎಂಇಎಸ್ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅದೇ ರೀತಿ 20 ವರ್ಷದ ಒಳಗಿನ ವಿಭಾಗದ 400 ಮೀಟರ್ ಹರ್ಡಲ್ಸ್ ಮತ್ತು 400 ಮೀಟರ್ ಮಿಕ್ಸ್ಡ್ ರಿಲೆ ಎರಡರಲ್ಲೂ ಶಿರಸಿಯ ರಕ್ಷಿತ್ ರವೀಂದ್ರ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇದನ್ನೂ ಓದಿ :ಹುಬ್ಬಳ್ಳಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಸಮಾಪ್ತಿ