ETV Bharat / state

ಜನಸ್ನೇಹಿಯಾದ ಯಲ್ಲಾಪುರ ಪೊಲೀಸ್ ಠಾಣೆ: ಮಾಹಿತಿ ಆಗರ, ಸ್ಥಳೀಯರಿಗೆ ಭಯ ದೂರ - ಜನಸ್ನೇಹಿಯಾದ ಯಲ್ಲಾಪುರ ಪೊಲೀಸ್ ಠಾಣೆ: ಭಯ ತೊಡೆದು ಜನ ಸಾಮಾನ್ಯರ ಆಕರ್ಷಿಸುವ ಠಾಣೆ

ಪೊಲೀಸ್ ಠಾಣೆ ಅಂದ್ರೆ ಭಯ ಪಡುವ ಮನಸ್ಥಿತಿಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ಜನಸ್ನೇಹಿಯಾಗಿ ರೂಪುಗೊಂಡಿರುವುದು ನಿಜಕ್ಕೂ ಮೆಚ್ಚುವಂತದ್ದು. ಮುಂದಿನ ದಿನಗಳಲ್ಲಿ ಇದೇ ರಿತಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಜನಸ್ನೇಹಿ ಠಾಣೆಯಾಗಿ ಪರಿವರ್ತನೆಗೊಂಡರೆ ಬಹುಶಃ ಜನಸ್ನೇಹಿ ಪೊಲೀಸ್ ಪರಿಕಲ್ಪನೆ ಯಶಸ್ವಿಯಾಗಬಹುದು.

janasnehi_police station
ಜನಸ್ನೇಹಿಯಾದ ಯಲ್ಲಾಪುರ ಪೊಲೀಸ್ ಠಾಣೆ
author img

By

Published : Feb 19, 2022, 7:06 PM IST

ಕಾರವಾರ: ಸಾಮಾನ್ಯವಾಗಿ ಪೊಲೀಸ್ ಠಾಣೆ ಅಂದಾಕ್ಷಣ ತಕ್ಷಣ ಕಣ್ಮುಂದೆ ಬರೋದು ಠಾಣೆ ಮುಂದೆ ನಿಂತ ನಾಲ್ಕಾರು ಹಳೆ ವಾಹನಗಳು, ಬಣ್ಣ ಮಾಸಿದ ಗೋಡೆ, ಗಿಡಗಂಟಿಗಳು ಬೆಳೆದುನಿಂತ ಇಕ್ಕಟ್ಟಾದ ಪ್ರದೇಶ. ಇಂತಹ ಠಾಣೆಗಳಿಗೆ ಜನ ಬರುವುದಕ್ಕೂ ಹಿಂದೆಮುಂದೆ ನೋಡುವ ಇಂದಿನ ದಿನಗಳಲ್ಲಿ ಇಲ್ಲೊಂದು ಪೊಲೀಸ್ ಠಾಣೆ ಮಾತ್ರ ಸಾಕಷ್ಟು ಡಿಫರೆಂಟ್ ಆಗಿ ಜನಸಾಮಾನ್ಯರನ್ನ ಆಕರ್ಷಿಸುತ್ತಿದೆ. ಮಾತ್ರವಲ್ಲದೆ ಬಂದಂತಹ ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ಒದಗಿಸುವ ಮೂಲಕ ಜನಸ್ನೇಹಿಯಾಗಿ ರೂಪುಗೊಂಡಿದೆ.

ಜನಸ್ನೇಹಿಯಾದ ಯಲ್ಲಾಪುರ ಪೊಲೀಸ್ ಠಾಣೆ

ಹೌದು, ಒಂದೆಡೆ ಪೊಲೀಸ್ ಠಾಣೆ ಗೋಡೆ ಮೇಲೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ನೀಡುವ ಚಿತ್ತಾಕರ್ಷಕ ಚಿತ್ರಗಳು. ಇನ್ನೊಂದೆಡೆ ರಸ್ತೆಯಲ್ಲಿ ಹೋಗಿಬರುವವರೆಲ್ಲರೂ ಠಾಣೆಯ ಗೋಡೆಗಳತ್ತ ಕಣ್ಣಾಡಿಸಿ ಮಾಹಿತಿ ಗಮನಿಸುತ್ತಿರುವ ಜನರು. ಮತ್ತೊಂದೆಡೆ ಠಾಣೆ ಎದುರು ವಿಶಾಲವಾದ ಜಾಗದಲ್ಲಿ ಕುಳಿತು ವಿರಮಿಸುತ್ತಿರುವ ಜನ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ.

'ಜನಸ್ನೇಹಿ ಪೊಲೀಸ್’ ಪರಿಕಲ್ಪನೆಯಲ್ಲಿ ಯಲ್ಲಾಪುರ ತಾಲ್ಲೂಕಿನ ಪೊಲೀಸ್ ಠಾಣೆ ಹೊಸ ರೂಪ ಪಡೆದುಕೊಂಡಿದೆ. ಪೊಲೀಸ್ ಠಾಣೆ ಎಂದಾಗ ಮೂಡುವ ಭಯದ ಸಾಮಾನ್ಯ ಭಾವನೆಯನ್ನು ದೂರ ಮಾಡಲು ಈ ಮೂಲಕ ಪ್ರಯತ್ನಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ವರ್ಷದ ಹಿಂದೆ ಇಕ್ಕಟ್ಟಾದ ಪ್ರದೇಶದಲ್ಲಿ ಕಾಂಪೌಂಡ್ ಇಲ್ಲದೆ ಇದ್ದ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿ ಆಗಮಿಸಿದ್ದ ಇನ್ಸ್​ಪೆಕ್ಟರ್ ಸುರೇಶ್ ಯಳ್ಳೂರು ಮೊದಲು ಠಾಣೆ ವಾತಾವರಣ ಸರಿಪಡಿಸಲು ಯೋಚಿಸಿದ್ದರಂತೆ. ಅದರಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸ್ಥಳೀಯರ ಸಹಕಾರದಲ್ಲಿ ಠಾಣೆಗೆ ಕಾಂಪೌಂಡ್ ನಿರ್ಮಿಸಿ, ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಬಳಿಯಲಾಯಿತು. ಬಳಿಕ ಅದರ ಮೇಲೆ ಉತ್ತರಕನ್ನಡ ಜಿಲ್ಲೆಯ ಇತಿಹಾಸ ಸಾರುವ ಚಿತ್ರಗಳನ್ನು ಬಿಡಿಸಲಾಗಿದೆ.

ಠಾಣೆಯನ್ನೂ ಜನಸ್ನೇಹಿಯಾಗಿಸಲು ಸ್ಥಳೀಯರು ಸಹಕಾರ ನೀಡಿದ್ದಾರೆ. ಕಾಂಪೌಂಡ್, ಕುಳಿತುಕೊಳ್ಳಲು ಆಸನ, ಗಾರ್ಡನ್, ಗೋಡೆ ಮೇಲೆ ಬರಹಗಳು, ಬೋರ್ವೆಲ್ ಸೇರಿ ಎಲ್ಲವನ್ನು ೨೫ ಲಕ್ಷ ವೆಚ್ಚವನ್ನು ಜನಸಾಮಾನ್ಯರೇ ಭರಿಸುವ ಮೂಲಕ ತಮ್ಮೂರಿಗೆ ಒಂದು ಉತ್ತಮ ಪೊಲೀಸ್ ಠಾಣೆ ನಿರ್ಮಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಪೊಲೀಸ್ ಠಾಣೆ ಅಂದರೆ ಭಯ ಪಡುವ ಇಂದಿನ ದಿನಗಳಲ್ಲಿ ಮಕ್ಕಳು, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪೊಲೀಸ್ ಠಾಣೆ ಆವರಣದಲ್ಲಿ ಓಡಾಡಿಕೊಂಡು ಮಾಹಿತಿ ಜೊತೆಗೆ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಮಾತ್ರವಲ್ಲದೆ ಠಾಣೆ ಮುಂಭಾಗದಲ್ಲಿ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಗಿಡಗಳನ್ನು ಸಹ ಬೆಳೆಸಲಾಗುತ್ತಿದೆ. ಈ ಮೂಲಕ ಠಾಣೆಯನ್ನು ಮಾದರಿಯನ್ನಾಗಿಸಲಾಗಿದೆ.

ಪೊಲೀಸ್ ವ್ಯವಸ್ಥೆ ಬಗ್ಗೆ ಅದೆಷ್ಟೋ ತಿಳಿಯದ ಮಾಹಿತಿಗಳನ್ನು ಗೋಡೆಗಳಲ್ಲಿ ಚಿತ್ರಗಳ ಮೂಲಕ ಮಾಹಿತಿ ಒದಗಿಸಿದ್ದು, ಇದೊಂದು ಪೊಲೀಸ್ ಅಧಿಕಾರಿಗಳ ಉತ್ತಮ ಕಾರ್ಯ ಎನ್ನುತ್ತಾರೆ ಇಲ್ಲಿನ ಜನ.

ಪೊಲೀಸ್ ಠಾಣೆ ಅಂದ್ರೆ ಭಯ ಪಡುವ ಮನಸ್ಥಿತಿಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ಜನಸ್ನೇಹಿಯಾಗಿ ರೂಪುಗೊಂಡಿರುವುದು ನಿಜಕ್ಕೂ ಮೆಚ್ಚುವಂತದ್ದು. ಮುಂದಿನ ದಿನಗಳಲ್ಲಿ ಇದೇ ರೀತಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಜನಸ್ನೇಹಿ ಠಾಣೆಯಾಗಿ ಪರಿವರ್ತನೆಗೊಂಡರೆ ಬಹುಶಃ ಜನಸ್ನೇಹಿ ಪೊಲೀಸ್ ಪರಿಕಲ್ಪನೆ ಯಶಸ್ವಿಯಾಗಬಹುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿ: ಹಿರಿಯ ನಟ ರಾಜೇಶ್​​​ ನಿಧನಕ್ಕೆ ಕಂಬನಿ ಮಿಡಿದ ಶಿವಣ್ಣ...

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.