ETV Bharat / state

ಬಡ ಕಲಾವಿದರಿಗೆ ವಿಶೇಷ ಪ್ಯಾಕೇಜ್​.. ತಾಂತ್ರಿಕ ತೊಂದರೆ ಸೇರಿ ನೆರವಿಗೆ ನೂರೆಂಟು ಅಡ್ಡಿ!

ಸರ್ಕಾರ ಘೋಷಿಸಿರುವ ಲಾಕ್​ಡೌನ್​​ ಪರಿಹಾರ ಹಣ ಕೆಲವರಿಗೆ ಸಿಗದಂತಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಜೂನ್ 5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದ್ರೆ ಈ ಅವಧಿಯಲ್ಲಿ ಲಾಕ್ ಡೌನ್ ಇದ್ದಿದ್ದರಿಂದ ಬಹುತೇಕ ಕಲಾವಿದರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹತ್ತಾರು ನಿಯಮಾವಳಿಗಳನ್ನು ವಿಧಿಸಿದ ಕಾರಣ ಸಾವಿರಾರು ಕಲಾವಿದರಿಗೆ ಪರಿಹಾರ ಮರೀಚಿಕೆಯಾದಂತಾಗಿದೆ.

author img

By

Published : Jun 23, 2021, 11:53 AM IST

karwar
karwar

ಕಾರವಾರ(ಉತ್ತರ ಕನ್ನಡ): ಕೊರೊನಾ ಅಟ್ಟಹಾಸದಿಂದಾಗಿ ಕಳೆದೆರಡು ವರ್ಷಗಳಿಂದ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಮಹಾಮಾರಿಯ ರುದ್ರನರ್ತನಕ್ಕೆ ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದೆ ಅದೆಷ್ಟೊ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇಂತಹ ಕಲಾವಿದರಿಗೆ ಸ್ವಲ್ಪ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಘೋಷಿಸಿದ್ದ ಆರ್ಥಿಕ ಪ್ಯಾಕೇಜ್ ಪಡೆಯಲು ಎದುರಾದ ತಾಂತ್ರಿಕ ತೊಂದರೆ ಹಾಗೂ ಕಲಾವಿದರನ್ನು ಗುರುತಿಸುವಲ್ಲಿ ವಿಫಲವಾದ ಮಾನದಂಡದಿಂದಾಗಿ ಅದೆಷ್ಟೊ ಕಲಾವಿದರಿಗೆ ಪರಿಹಾರವೇ ಸಿಗದಂತಾಗಿದೆ.

ಕಲಾವಿದರಿಗೆ ಕೊಟ್ಟರೂ ಸಿಗದಂತಾದ ಲಾಕ್​ಡೌನ್ ಪರಿಹಾರ

ಹೌದು, ಕೊರೊನಾ ಕಾರಣಕ್ಕೆ ವಿಧಿಸಿದ್ದ ಲಾಕ್​ಡೌನ್​ನಿಂದಾಗಿ ಅದೆಷ್ಟೋ ಕಲಾವಿದರ ಸ್ಥಿತಿ ಅಯೋಮಯವಾಗಿದೆ. ಕಲೆಯನ್ನೇ ಉಸಿರಾಗಿಸಿಕೊಂಡು ಜೀವನ ನಡೆಸುತ್ತಿದ್ದ ಕಲಾವಿದರಿಗೆ ಕೋವಿಡ್ ಬರಸಿಡಿಲಿನಂತೆ ಬಡಿದಿದೆ. ಸೋಂಕನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ವಿಧಿಸಿದ ಕಠಿಣ ಕ್ರಮದಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿಲ್ಲ. ಆದರೆ ಇದನ್ನು ಅರಿತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಲಾವಿದರಿಗೆ ತಲಾ 3 ಸಾವಿರ ರೂ. ಲಾಕ್​ಡೌನ್ ಪರಿಹಾರ ನೀಡುವುದಾಗಿ ತಿಳಿಸಿದ್ದರು.

ಸೇವಾ ಸಿಂಧು ಪೋರ್ಟಲ್ ಮೂಲಕ ಜೂನ್ 5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದ್ರೆ ಈ ಅವಧಿಯಲ್ಲಿ ಲಾಕ್ ಡೌನ್ ಇದ್ದಿದ್ರಿಂದ ಬಹುತೇಕ ಕಲಾವಿದರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಬೇಕಾದ್ರೆ 35 ವರ್ಷ ವಯಸ್ಸಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು. 2020-21 ನೇ ಸಾಲಿನ ಸಾಮಾನ್ಯ ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ, ಸಾಂಸ್ಕೃತಿಕ ಚಟುವಟಿಕೆಗೆ ಕಲಾ ಸಂಘಗಳ ಪರವಾಗಿ ಸಹಾಯಧನ ಪಡೆದಿರಬಾರದು, ವಾದ್ಯ ಪರಿಕರ, ವೇಷಭೂಷಣ ಖರೀದಿ, ಶಿಲ್ಪಕಲೆ ಚಿತ್ರಕಲಾ ಪ್ರದರ್ಶನಕ್ಕೆ ಸಹಾಯಧನ ಪಡೆದಿರಬಾರದು. ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿ ಕನಿಷ್ಠ 10 ವರ್ಷವಾಗಿರಬೇಕು. ಹೀಗೆ ಹತ್ತಾರು ನಿಯಮಾವಳಿಗಳನ್ನು ವಿಧಿಸಲಾಗಿದೆ. ಪರಿಣಾಮ ಸಾವಿರಾರು ಕಲಾವಿದರನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಕೇವಲ 595 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಯಕ್ಷಗಾನ
ಯಕ್ಷಗಾನ

ಸರ್ಕಾರ ಮೇ 28 ರಿಂದ ಜೂನ್ 5 ರವರೆಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ಆ ಅವಧಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಇದ್ದ ಕಾರಣ ಜನ ಹೊರ ಬರಲು ಸಾಧ್ಯವಾಗಿಲ್ಲ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಗ್ರಾಮೀಣ ಭಾಗದಲ್ಲಿ ನೆಟ್​ವರ್ಕ್​ ಸಮಸ್ಯೆ ಕಾರಣವಾಗಿತ್ತು. ಅಲ್ಲದೇ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೂಡ ಸೇವಾ ಸಿಂಧು ಪೋರ್ಟಲ್ ಓಪನ್ ಆಗದೆ ಇರೋದ್ರಿಂದ ಕಲಾವಿದರಿಗೆ ಪರಿಹಾರ ಮರೀಚಿಕೆಯಾದಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ, ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ ಕಲಾವಿದರು ಸೇರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರಿದ್ದಾರೆ. ಶೇಕಡಾ 50ಕ್ಕಿಂತ ಹೆಚ್ಚಿನ ಕಲಾವಿದರು ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಂಕಷ್ಟದಲ್ಲಿರುವವರಿಗೆಲ್ಲಾ ಸಹಾಯಧನದ ಅವಶ್ಯಕತೆ ಇದೆ. ಅಲ್ಲದೆ ರಾಜ್ಯದಲ್ಲಿ ಲಕ್ಷಾಂತರ ಮಂದಿ ಕಲಾವಿದರಿದ್ದು, ಕೇವಲ 16 ಸಾವಿರ ಕಲಾವಿದರಿಗೆ ಪರಿಹಾರ ಘೋಷಣೆ ಮಾಡಲಾಗಿದೆ. ಸರ್ಕಾರ ಯಾವ ಮಾನದಂಡದಲ್ಲಿ ಕಲಾವಿದರನ್ನು ಗುರುತು ಮಾಡಿದೆಯೋ ಗೊತ್ತಿಲ್ಲ. ಆದರೆ ಕಲೆಯನ್ನೇ ಬದುಕಾಗಿಸಿಕೊಂಡ ಕಲಾವಿದರಿಗೆ ಲಾಕ್ ಡೌನ್ ಪರಿಹಾರ ಮರೀಚಿಕೆಯಾದಂತಾಗಿದೆ ಎನ್ನುತ್ತಾರೆ ಜಾನಪದ ಕಲಾವಿದ ಪುರುಷೋತ್ತಮ ಗೌಡ.

ಒಟ್ಟಾರೆ ಸರ್ಕಾರ ಕಲಾವಿದರನ್ನು ಗುರುತಿಸುವಲ್ಲಿ ಎಡವಿರುವ ಗಂಭೀರ ಆರೋಪ ಕೇಳಿಬಂದಿದ್ದು, ಘೋಷಣೆ ಮಾಡಿದ ಕಲಾವಿದರಿಗೂ ಸಹ ಸರ್ಕಾರದ ನಿಯಮಾವಳಿ ಸಡಿಲಿಸಿ, ತಾಂತ್ರಿಕ ಸಮಸ್ಯೆಯಿಂದಾಗಿ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಿ ಬಡ ಕಲಾವಿದರಿಗೆ ಪರಿಹಾರ ಸಿಗುವಂತ ವ್ಯವಸ್ಥೆ ಮಾಡಬೇಕಾಗಿದೆ.

ಇದನ್ನೂ ಓದಿ: ಕರುಳಕುಡಿಯ ಕಳೇಬರದೆದುರು ಕದಲದೇ ನಿಂತು ತಾಯಿ ಕುದುರೆಯ ಮೂಕ ರೋಧನೆ! ವಿಡಿಯೋ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.