ಕಾರವಾರ: ಅಂಜನಾದ್ರಿ ಪರ್ವತದಿಂದ ತಂದ ಶಿಲೆಗೆ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸ್ವಿಂಘ್ವಿ, ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈ ಶಿಲೆಯನ್ನು ಗೋಕರ್ಣ ಕ್ಷೇತ್ರಕ್ಕೆ ತರಲಾಗಿದ್ದು, ದೇವಾಲಯದ ಹೊರ ಭಾಗದಲ್ಲೇ ಶಿಲೆಯನ್ನು ಪೂಜಿಸಿ ಪ್ರಾರ್ಥಿಸಲಾಯಿತು. ಬಳಿಕ ಶಿಲೆಯನ್ನು ತಲೆಯಲ್ಲಿ ಹೊತ್ತುಕೊಂಡು ಕಾರ್ಯಕರ್ತರು ದೇವಸ್ಥಾನದ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯಾಧ್ಯಾಕ್ಷ ಪ್ರಮೋದ್ ಮುತಾಲಿಕ್, 500 ವರ್ಷಗಳ ಸುದೀರ್ಘ ಹೋರಾಟಕ್ಕೆ ತೆರೆಬಿದ್ದಿದ್ದು, ಈ ಸಮಯದಲ್ಲಿ ಅದೆಷ್ಟೋ ತ್ಯಾಗ ಬಲಿದಾನಗಳು ನಡೆದಿವೆ. ಸ್ವಾತಂತ್ರ್ಯ ಬಂದ ನಂತರವೂ ಹೋರಾಟ ನಡೆದಿದೆ. ಅಂಜನಾದ್ರಿ ಆಂಜನೇಯನ ಜನ್ಮ ಭೂಮಿಯಾಗಿದ್ದು, ಇಲ್ಲಿಂದ ರಾಮಜನ್ಮ ಭೂಮಿಗೆ ಶಿಲೆ ತಲುಪಿಸುವ ಕಾರ್ಯ ಒದಗಿರುವುದು ಪುಣ್ಯ ಹಾಗೂ ಶ್ರೇಷ್ಠ ಅವಕಾಶ ಎಂದರು.