ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದ ಪರಿಣಾಮ ಭಾರಿ ದುರಂತವೊಂದು ಸಂಭವಿಸಿದೆ. ಘಟನೆಯಲ್ಲಿ ಕಾರ್ಮಿಕನೋರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಪ್ರಕರಣ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ.
ಕಾರ್ಮಿಕ ಹುಚ್ಚಪ್ಪ (35) ಸ್ಥಳದಲ್ಲೇ ಮೃತಪಟ್ಟಿರುವ ವ್ಯಕ್ತಿ. ವೈಶ್ಯವಾಡದ ತುಳಸಿ ಬಾಯಿ ಎಂಬುವರ ಮನೆ ದುರಸ್ತಿ ಹಿನ್ನೆಲೆ ಮೇಲ್ಮಹಡಿಯನ್ನು ಬಿಚ್ಚಲಾಗಿತ್ತು. ಆದರೆ ಈ ವೇಳೆ ನೆನೆದ ಗೊಡೆ ಏಕಾಏಕಿ ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಗೋಡೆ ಕೆಳಗೆ ಸಿಲುಕಿಕೊಂಡಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಓರ್ವನನ್ನು ರಕ್ಷಣೆ ಮಾಡಿದ್ದು, ಇನ್ನೋರ್ವನ ಮೇಲೆ ಭಾರಿ ಗಾತ್ರದ ಗೋಡೆಗಳು ಬಿದ್ದ ಪರಿಣಾಮ ತೆಗೆಯುವ ವೇಳೆಗೆ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಗೋಕರ್ಣ: ಅಪ್ಪನ ಅಸ್ತಿ ವಿಸರ್ಜನೆಗೆ ಬಂದ ಮಗ ನೀರಿನಲ್ಲಿ ಮುಳುಗಿ ಸಾವು..