ಭಟ್ಕಳ: ತಾಲೂಕಿನ ಬೈಲೂರು ಗ್ರಾಮದ ಮಡಿಕೇರಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಪಾರ್ವತಿ ಮಂಜುನಾಥ ನಾಯ್ಕ (55 ) ಮೃತ ಮಹಿಳೆ. ಗದ್ದೆಯಲ್ಲಿ ಕಳೆ ತೆಗೆಯುತ್ತಿದ್ದಾಗ ವಿಷಪೂರಿತ ಹಾವೊಂದು ಪಾರ್ವತಿಯವರ ಬಲಗೈ ಹೆಬ್ಬೆರಳಿಗೆ ಕಚ್ಚಿದೆ. ತಕ್ಷಣ ಅವರನ್ನು ಹೊನ್ನಾವರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.