ETV Bharat / state

ಕಾರವಾರದಲ್ಲಿ ವಟ ಸಾವಿತ್ರಿ ವ್ರತ : ಗಂಡನ ಆಯುಷ್ಯ-ಆರೋಗ್ಯ ವೃದ್ಧಿಗೆ ವಟ ಸುತ್ತಿದ ನಾರಿಯರು - ವಟ ಸಾವಿತ್ರಿ ವೃತ

ಜೇಷ್ಠ ಹುಣ್ಣಿಮೆಯ ದಿನವಾದ ನಿನ್ನೆ (ಮಂಗಳವಾರ) ಕಾರವಾರದಲ್ಲಿ ಸ್ತ್ರೀಯರು ವಟ ಸಾವಿತ್ರಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು..

Vat Savitri Vrat  Celebration in Karwar
ಕಾರವಾರದಲ್ಲಿ ವಟ ಸಾವಿತ್ರಿ ವೃತ ಆಚರಣೆ
author img

By

Published : Jun 15, 2022, 12:08 PM IST

ಕಾರವಾರ (ಉತ್ತರಕನ್ನಡ) : ಭರತ ಖಂಡದ ಪ್ರಸಿದ್ಧ ಪತಿವ್ರತೆಯರಲ್ಲಿ ಸಾವಿತ್ರಿ ಆದರ್ಶಪ್ರಾಯಳು. ಸತ್ಯವಾನ ಸಾವಿತ್ರಿಯನ್ನು ಸೌಭಾಗ್ಯದ ಪ್ರತೀಕವೆಂದೇ ಪರಿಗಣಿಸಲಾಗುತ್ತಿದೆ. ಇಂದಿಗೂ ಶ್ರದ್ಧಾ ಭಕ್ತಿಯಿಂದ ಆಚರಿಸುವ ಈ ವಟ ಸಾವಿತ್ರಿ ವ್ರತವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಾರಿಯರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಏಳೇಳು ಜನ್ಮಕ್ಕೂ ತನ್ನ ಪತಿ ತನ್ನವನಾಗಿಯೇ ಇರಲಿ, ಆತನ ಆಯುಷ್ಯ-ಆರೋಗ್ಯ ವೃದ್ಧಿಸಲಿ ಎಂದು ಪ್ರಾರ್ಥಿಸಿದರು.

ಕಾರವಾರದಲ್ಲಿ ವಟ ಸಾವಿತ್ರಿ ವ್ರತಾಚರಣೆ..

ಜೇಷ್ಠ ಹುಣ್ಣಿಮೆಯ ದಿನವಾದ ನಿನ್ನೆ (ಮಂಗಳವಾರ) ಕಾರವಾರದಲ್ಲಿ ಸ್ತ್ರೀಯರು ವಟ ಸಾವಿತ್ರಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆಯಿಂದಲೇ ಕಾರವಾರದ ಸುತ್ತಮುತ್ತಲ ಆಲದ ಮರದ ಸಮೀಪ ನೂರಾರು ಸಂಖ್ಯೆಯ ಮಹಿಳೆಯರು ಸೇರಿದ್ದರು.

ಸುತ್ತಮುತ್ತಲಿನ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ತನ್ನ ಗಂಡ, ಮಕ್ಕಳು, ಕುಟುಂಬಗಳಿಗೆ ಆಯುಷ್ಯ ವೃದ್ಧಿಗೊಳಿಸುವಂತೆ ಬೇಡಿಕೊಂಡರು. ಪರಸ್ಪರ ಅರಿಶಿಣ-ಕುಂಕುಮ, ಹೂಗಳನ್ನು ವಿನಿಮಯ ಮಾಡಿಕೊಂಡು ಸ್ತ್ರೀಯರು ಸಂತಾನ ವೃದ್ಧಿಗಾಗಿ ಪ್ರಾರ್ಥಿಸಿದರು.

ಪುರಾಣದಲ್ಲಿ ಯಮ ಧರ್ಮನು ಸತ್ಯವಾನನ ಪ್ರಾಣ ಹರಣ ಮಾಡಿದ ನಂತರ ಸಾವಿತ್ರಿ ಯಮಧರ್ಮನೊಂದಿಗೆ ಮೂರು ದಿನಗಳ ಕಾಲ ವಟ ವೃಕ್ಷದ ಕೆಳಗೆ ಕುಳಿತು ಶಾಸ್ತ್ರ ಚರ್ಚೆಯನ್ನು ಮಾಡುತ್ತಾಳೆ. ಅದರಿಂದ ಪ್ರಸನ್ನನಾಗಿ ಯಮಧರ್ಮ ಸತ್ಯವಾನನಿಗೆ ಪುನಃ ಜೀವಂತಗೊಳಿಸುತ್ತಾನೆ.

ಹೀಗಾಗಿ, ವಟ ವೃಕ್ಷಕ್ಕೆ ಸಾವಿತ್ರಿ ಹೆಸರು ಸೇರಿಕೊಂಡಿತು. ಸಾವಿತ್ರಿ ತನ್ನ ಪತಿಯ ಆಯುಷ್ಯ ವೃದ್ಧಿಸಬೇಕೆಂದು ಹಾರೈಸಿದ ಹಾಗೆ ಸ್ತ್ರೀಯರು ಈ ದಿನದಂದು ತಮ್ಮ ಪತಿಯ ಆಯುಷ್ಯ ವೃದ್ಧಿಯಾಗುವ ನಂಬಿಕೆ ನಮ್ಮಲ್ಲಿದೆ ಎನ್ನುತ್ತಾರೆ ಭಕ್ತರು.

ವಟ ಸಾವಿತ್ರಿ ಹುಣ್ಣೆಮೆಯಂದು ಸ್ತ್ರೀಯರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಪೂಜಾ ಕೈಂಕರ್ಯದೊಂದಿಗೆ ಆಲದ ಮರಕ್ಕೆ ಹತ್ತಿ ನೂಲು ಸುತ್ತುತ್ತಾರೆ. ಆಲದ ಮರದಲ್ಲಿ ಶಿವನ ರೂಪವಿದ್ದು, ವಟ ವೃಕ್ಷಕ್ಕೆ ದಾರ ಸುತ್ತುವುದರಿಂದ ಜೀವದ ಭಾವಕ್ಕನುಸಾರ ಕಾಂಡದಲ್ಲಿನ ಶಿವತತ್ವಕ್ಕೆ ಸಂಬಂಧಪಟ್ಟ ಲಹರಿಗಳು ಕಾರ್ಯನಿರತವಾಗಿ, ಆಕಾರವನ್ನು ಧರಿಸುತ್ತದೆ. ಹೀಗಾಗಿ, ವೃಕ್ಷಕ್ಕೆ ಆರತಿ ಬೆಳಗುತ್ತಾರೆ.

ಪಂಚ ಫಲಗಳನ್ನು ಇಟ್ಟು ಆರಾಧಿಸುತ್ತಾರೆ. ತನಗೆ ಹಾಗೂ ತನ್ನ ಪತಿಯ ಆರೋಗ್ಯ, ಸಂಪದ್ಭರಿಸಲಿ ಎಂದು ಮಹಿಳೆಯರು ಹಾರೈಸುತ್ತಾರೆ. ನೆರೆಯ ಮಹಾರಾಷ್ಟ್ರ ಮತ್ತು ಗುಜರಾತ್ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಆಚರಣೆಯನ್ನು ಉತ್ತರಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿಯೂ ಆಚರಿಸುತ್ತಾರೆ.

ವಟ ವೃಕ್ಷದಲ್ಲಿ ಶಿವತತ್ವ ಅಡಗಿರುತ್ತದೆ. ಹೀಗಾಗಿ, ವಟವೃಕ್ಷಕ್ಕೆ ಇಂದಿನ ದಿನದಂದು ಹೆಚ್ಚು ಮಹತ್ವ ಬರುತ್ತದೆ. ವೃಕ್ಷದ ಪೂಜೆಯಿಂದ ಚೈತನ್ಯ, ಗಂಡನ ಶ್ರೇಯೋಭಿವೃದ್ಧಿ ಹೆಚ್ಚಾಗುತ್ತದೆ. ಆದ್ದರಿಂದ ಸ್ತ್ರೀಸಮೂಹ ಪ್ರತಿ ವರ್ಷ ವಟ ಸಾವಿತ್ರಿ ವ್ರತ ಆಚರಿಸುತ್ತಾರೆ.

ಇದನ್ನೂ ಓದಿ: ಕಾರ ಹುಣ್ಣಿಮೆ ಸಂಭ್ರಮ: ಸರಪಳಿ ಹರಿಯುವ ಪವಾಡ ಕಣ್ತುಂಬಿಕೊಂಡ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.