ETV Bharat / state

ಕರ್ತವ್ಯಲೋಪ :  ಓರ್ವ ಅಧಿಕಾರಿ ವಜಾ ಮೂವರಿಗೆ ನೋಟೀಸ್! - ಆದೇಶ ಉಲ್ಲಂಘಿಸಿದ ಅಧಿಕಾರಿಗಳು,

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆ ವಿವಿಧ ಇಲಾಖೆ ಮುಖ್ಯಾಧಿಕಾರಿಗಳಿಗೆ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆಯದಂತೆ ಸುತ್ತೋಲೆ ಹೊರಡಿಸಿತ್ತು.

ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್
author img

By

Published : Jul 22, 2019, 9:22 PM IST

ಕಾರವಾರ: ಕೇಂದ್ರ ಸ್ಥಾನ ತೊರೆಯದಂತೆ ಆದೇಶವಿದ್ದರೂ ಕರ್ತವ್ಯಲೋಪ ಎಸಗಿದ ಮೂವರು ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ, ಓರ್ವರನ್ನು ಕರ್ತವ್ಯದಿಂದ ವಜಾಗೊಳಿಸಿ ಉತ್ತರಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್, ವೈ ಮಣ್ಣವಡ್ಡರ ಅವರನ್ನು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ವಜಾಗೊಳಿಸಿದ್ದು, ಭಟ್ಕಳ, ಕುಮಟಾ ಹಾಗೂ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಾದ ಡಿ ದೇವರಾಜ, ಸುರೇಶ ಎಂ.ಕೆ ಹಾಗೂ ಬಿ. ಪ್ರಹ್ಲಾದ ಎಂಬವರಿಗೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನಲೆ ತಾಲೂಕಿನ ವಿವಿಧ ಇಲಾಖೆ ಮುಖ್ಯಾಧಿಕಾರಿಗಳಿಗೆ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆಯದಂತೆ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ ತಮ್ಮ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಯಾಗುವ ಪ್ರದೇಶಗಳ ಮೇಲೆ ನಿಗಾ, ಸ್ವಚ್ಚತೆ ಸೇರಿದಂತೆ ತುರ್ತು ಕ್ರಮಕೈಗೊಳ್ಳಬೇಕಾದ ಜವಬ್ದಾರಿ ನೀಡಿ ಆದೇಶಿಸಲಾಗಿದೆ.

ಆದೇಶ ಉಲ್ಲಂಘಿಸಿದ ಅಧಿಕಾರಿಗಳು ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ತೊರೆದು ಕರ್ತವ್ಯಲೋಪ ಎಸಗಿದ್ದರು. ಅದರಲ್ಲೂ ಹೊನ್ನಾವರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಚ್, ವೈ ಮಣ್ಣವಡ್ಡರ ವಿರುದ್ಧ ಸರ್ಕಾರದ ಹಣ ದುರುಪಯೋಗ, ಸಭೆಗೆ ಹಾಜರಾಗದಿರುವುದು, ನೋಟೀಸ್ ಗೆ ಉತ್ತರ ನೀಡದೇ ನಿರ್ಲಕ್ಷ್ಯ, ಅನಧಿಕೃತ ಕಾಮಗಾರಿ ನಡೆಸುವ ಆರೋಪ, ತೆರಿಗೆ ಹಣ ಪಾವತಿಸದಿರುವುದು, ಮೀನುಗಾರರಿಂದ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಮತ್ತು ಭಟ್ಕಳ ಉಪ ವಿಭಾಗಾಧಿಕಾರಿಯವರ ತನಿಖಾ ವರದಿ ಉಲ್ಲೇಖಿಸಿ ವೈ ಮಣ್ಣವಡ್ಡರ ಅವರನ್ನು ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ಕುಮಟಾ ಪುರಸಭೆ ಕಚೇರಿ ವ್ಯವಸ್ಥಾಪಕ ನೀಲಕಂಠ ಎಂ ಮೇಸ್ತಾ ಅವರನ್ನು ಮುಂದಿನ ಆದೇಶದವರೆಗೆ ಪ್ರಭಾರ ಮುಖ್ಯ ಅಧಿಕಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Intro:ಪೋಟೊ: ಡಾ.ಹರೀಶಕುಮಾರ್, ಉತ್ತರಕನ್ನಡ ಜಿಲ್ಲಾಧಿಕಾರಿ

ಕರ್ತವ್ಯಲೋಪ ಎಸಗಿದ ಓರ್ವ ಅಧಿಕಾರಿ ವಜಾ... ಮೂವರಿಗೆ ಜಿಲ್ಲಾಧಿಕರಿ ನೋಟೀಸ್...!
ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆದರೆ ಇಂತಹ ಸ್ಥಿತಿಯಲ್ಲೂ ಕೇಂದ್ರ ಸ್ಥಾನ ತೊರೆದು ಕರ್ತವ್ಯಲೋಪ ಎಸಗಿದ ಮೂವರು ಅಧಿಕಾರಿಗಳಿಗೆ ನೋಟೀಸ್ ಜಾರಿಮಾಡಿ, ಓರ್ವರನ್ನು ಕರ್ತವ್ಯದಿಂದ ವಜಾಗೊಳಿಸಿ ಉತ್ತರಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್, ವೈ ಮಣ್ಣವಡ್ಡರ ಅವರನ್ನು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ವಜಾಗೊಳಿಸಿದ್ದು, ಭಟ್ಕಳ, ಕುಮಟಾ ಹಾಗೂ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಾದ ಡಿ ದೇವರಾಜ, ಸುರೇಶ ಎಂ.ಕೆ ಹಾಗೂ ಬಿ. ಪ್ರಹ್ಲಾದ ಎಂಬುವವರಿಗೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕಾರಣ ಕೇಳಿ ಇಂದು ನೋಟೀಸ್ ಜಾರಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಳೆ ವಿಪರೀತವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿ ತಾಲ್ಲೂಕಿನ ವಿವಿಧ ಇಲಾಖೆ ಮುಖ್ಯಾಧಿಕಾರಿಗಳಿಗೆ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆಯದಂತೆ ಸುತ್ತೋಲೆ ಹೊರಡಿಸಿತ್ತು. ಅಲ್ಲದೆ ತಮ್ಮ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಯಾಗುವ ಪ್ರದೇಶಗಳ ನಿಗಾ, ಸ್ವಚ್ಚತೆ ಸೇರಿದಂತೆ ತುರ್ತು ಕ್ರಮಕೈಗೊಳ್ಳಬೇಕಾದ ಜವಬ್ದಾರಿ ನೀಡಿ ಆದೇಶಿಸಿತ್ತು.
ಆದರೆ ಈ ಮೇಲಿನ ಎಲ್ಲರೂ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆದು ಕರ್ತವ್ಯಲೋಪ ಎಸಗಿದ್ದರು. ಅದರಲ್ಲೂ ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್, ವೈ ಮಣ್ಣವಡ್ಡರ ವಿರುದ್ಧ, ಸರ್ಕಾರದ ಹಣ ದುರುಪಯೋಗ, ಸಭೆಗೆ ಹಾಜರಾಗದಿರುವುದು, ನೋಟೀಸ್ ಗೆ ಉತ್ತರ ನೀಡದೇ ನಿರ್ಲಕ್ಷ್ಯ, ಅನಧಿಕೃತ ಕಾಮಗಾರಿ ನಡೆಸುವ ಆರೋಪ, ತೆರಿಗೆ ಹಣ ಪಾವತಿಸದಿರುವುದು, ಮೀನುಗಾರರಿಂದ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮತ್ತು ಭಟ್ಕಳ ಉಪವಿಭಾಗಾಧಿಕಾರಿ ತನಿಖಾ ವರದಿ ಉಲ್ಲೇಖಿಸಿ ವಜಾ ಮಾಡಲಾಗಿದೆ.
ಅಲ್ಲದೆ ಅವರ ಸ್ಥಾನಕ್ಕೆ ಕುಮಟಾ ಪುರಸಭೆ ಕಚೇರಿ ವ್ಯವಸ್ಥಾಪಕ ನೀಲಕಂಠ ಎಂ ಮೇಸ್ತಾ ಅವರನ್ನು ಮುಂದಿನ ಆದೇಶದವರೆಗೆ ಪ್ರಭಾರ ಮುಖ್ಯ ಅಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

Body:k

Conclusion:k
ETV Bharat Logo

Copyright © 2025 Ushodaya Enterprises Pvt. Ltd., All Rights Reserved.