ETV Bharat / state

ಉತ್ತರ ಕನ್ನಡದಲ್ಲಿ ಮರಳಿ ಕಾಂಗ್ರೆಸ್ ಅಧಿಕಾರ: ಬಿಜೆಪಿ ತಿರಸ್ಕರಿಸಿದ ಕರಾವಳಿ ಮಂದಿ - ಸತೀಶ್ ಸೈಲ್​

ಉತ್ತರ ಕನ್ನಡದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದು ಕಂಡಿದೆ. 6 ಕ್ಷೇತ್ರಗಳಲ್ಲಿ ಕೇಸರಿ ಪಕ್ಷ ಕೇವಲ 2 ರಲ್ಲಿ ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ.

uttara kannada
ಉತ್ತರಕನ್ನಡ ಫಲಿತಾಂಶ
author img

By

Published : May 14, 2023, 9:14 AM IST

Updated : May 14, 2023, 12:16 PM IST

ಹಳಿಯಾಳ ಕ್ಷೇತ್ರ ವಿಜೇತ ಅಭ್ಯರ್ಥಿ ಆರ್. ವಿ. ದೇಶಪಾಂಡೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮರಳಿ ಅಧಿಪತ್ಯ ಸಾಧಿಸಿದೆ. ಕಳೆದ ಬಾರಿ ಕಳೆದುಕೊಂಡಿದ್ದ ಐದು ಸ್ಥಾನಗಳ ಪೈಕಿ ನಾಲ್ಕರಲ್ಲಿ ಮತ್ತೆ ಗೆಲುವಿನ ನಗೆ ಬೀರಿದೆ. ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರದ ನಡುವೆಯೂ ಬಿಜೆಪಿ ಕೇವಲ ಎರಡು ಸ್ಥಾನ ಮಾತ್ರ ಪಡೆದುಕೊಂಡಿತು.

ಕಾರವಾರ ಕ್ಷೇತ್ರದ ವಿಜೇತ ಕಾಂಗ್ರೆಸ್​ ಅಭ್ಯರ್ಥಿ ಸತೀಶ್​ ಸೈಲ್​

ಹಳಿಯಾಳ ಕ್ಷೇತ್ರ: ತೀವ್ರ ಕೂತುಹಲಕ್ಕೆ ಕಾರಣವಾಗಿದ್ದ ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ವಿರುದ್ಧ 3,584 ಮತಗಳ ಅಂತರದ ಗೆಲುವು ದಾಖಲಿಸಿದರು. ಬಿಜೆಪಿಯಿಂದ ಸುನೀಲ್ ಹೆಗಡೆ, ಕಾಂಗ್ರೆಸ್​ನಿಂದ ದೇಶಪಾಂಡೆ, ಜೆಡಿಎಸ್​ನಿಂದ ಘೋಟೆನೇಕರ್ ಶ್ರೀಕಾಂತ್​ ಲಕ್ಷ್ಮಣ್​ ಕಣಕ್ಕಿಳಿದಿದ್ದರು.​

ಶಿರಸಿ ಕ್ಷೇತ್ರದ ವಿಜೇತ ಕಾಂಗ್ರೆಸ್​ ಅಭ್ಯರ್ಥಿ ಭೀಮಣ್ಣ ನಾಯ್ಕ್​

ಶಿರಸಿ ಕ್ಷೇತ್ರ: ಶಿರಸಿಯಲ್ಲಿ ಸೋಲಿಲ್ಲದ ಸರದಾರ, 6 ಬಾರಿಗೆ ಗೆದ್ದು ಕಳೆದ ಬಾರಿ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮತದಾರರು ಮಣಿಸಿದ್ದಾರೆ. ಸತತ ಸೋಲಿನ ಬಳಿಕ ಕಾಂಗ್ರೆಸ್​ ಭೀಮಣ್ಣ ನಾಯ್ಕ ಈ ಸಲ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ 9,067 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.

ಕಾರವಾರ ಕ್ಷೇತ್ರ: ಕಾರವಾರದಲ್ಲಿಯೂ ಕೈ ಅಭ್ಯರ್ಥಿ ಸತೀಶ್​ ಸೈಲ್ ಹಾಗೂ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್​ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಕೊನೆಯ ಸುತ್ತಿನವರೆಗೂ ಏಳು-ಬೀಳುಗಳ ಪೈಪೋಟಿಯಲ್ಲಿ ಕೊನೆಗೆ ವಿಜಯದ ಮಾಲೆ ಸೈಲ್ ಪರವಾಯಿತು.

ಭಟ್ಕಳ ಕ್ಷೇತ್ರ: ಭಟ್ಕಳದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಕಾಂಗ್ರೆಸ್​ನ ಮಂಕಾಳು ವೈದ್ಯ ಅವರು ಹಾಲಿ ಶಾಸಕ ಸುನಿಲ್​ ನಾಯ್ಕ್ ವಿರುದ್ಧ 32,657 ಮತಗಳ ಅಂತರದ ಗೆಲುವು ಪಡೆದರು.

ಕುಮಟಾ ಕ್ಷೇತ್ರ: ಕುಮಟಾದಲ್ಲಿ ಬಿಜೆಪಿಯ ದಿನಕರ ಶೆಟ್ಟಿ ಹಾಗೂ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನಡುವೆ ಜಿದ್ದಾಜಿದ್ದಿ ಇತ್ತು. ಕೊನೆ ಹಂತದವರೆಗೂ ಸಮಬಲದ ಹೋರಾಟ ನಡೆದಿದ್ದು ಅಂತಿಮವಾಗಿ ಪೊಸ್ಟಲ್ ಬ್ಯಾಲೆಟ್ ಮತಗಳಲ್ಲಿ ದಿನಕರ ಶೆಟ್ಟಿ 673 ಮತಗಳ ಅತಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರು. ಕಾಂಗ್ರೆಸ್​ನ ಹಲವು ಆಕಾಂಕ್ಷಿಗಳ ಮಧ್ಯೆ ಟಿಕೆಟ್​ ಗಿಟ್ಟಿಸಿಕೊಂಡಿದ್ದ ನಿವೇದಿತ್ ಆಳ್ವಾ ಕೇವಲ 19 ಸಾವಿರ ಮತ ಪಡೆದರು.

ಯಲ್ಲಾಪುರ ಕ್ಷೇತ್ರ: ಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್​ ಮತ್ತು ಬಿಜೆಪಿ ಅಭ್ಯರ್ಥಿ ಶಿವರಾಮ್​ ಹೆಬ್ಬಾರ್​ ನಡುವೆಯೂ ಮತಗಳ ಪೈಪೋಟಿ ನಡೆದು ಕೊನೆಗೆ ಬಿಜೆಪಿಯ ಶಿವರಾಮ್​ ಹೆಬ್ಬಾರ್ 4,004 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

ಬಿಜೆಪಿ ಸೋಲಿಗೆ ಕಾರಣವೇನು?: ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಾಲಿಗೆ ಆಡಳಿತ ಪಕ್ಷದ ವಿರೋಧಿ ಅಲೆ ಸಾಕಷ್ಟು ಕೆಲಸ ಮಾಡಿದೆ. ಇದರ ಜೊತೆಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ, ಶಾಸಕರ ವಿರುದ್ಧದ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪಗಳು ವರವಾಗಿವೆ. ಇದಲ್ಲದೆ ಈ ಹಿಂದೆ ಕಾಂಗ್ರೆಸ್ ಜಾರಿಗೊಳಿಸಿದ ಯೋಜನೆಗಳು ಕಾರ್ಯರೂಪಕ್ಕೆ ತರದೇ ಆಡಳಿತ ಪಕ್ಷ ನಿರ್ಲಕ್ಷ್ಯ ಮಾಡಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ-ಆರ್.ವಿ.ದೇಶಪಾಂಡೆ :''ಬಿಜೆಪಿ ಸರ್ಕಾರದಲ್ಲಿ ಆಡಳಿತಕ್ಕೆ ಬಿಗಿಯೇ ಇರಲಿಲ್ಲ. ನಾವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ. ಇದು ನಮ್ಮ ಜವಾಬ್ದಾರಿ. ಐದು ವರ್ಷಗಳ ಕಾಲ ರಾಜ್ಯ ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಆಡಳಿತ ನಡೆಸಲು ಮತದಾರರು ಸಂಪೂರ್ಣ ಬಹುಮತ ನೀಡಿದ್ದಾರೆ. ನಾಡಿನ ಅಭಿವೃದ್ಧಿ, ಮಹಿಳೆಯರು, ಯುವಕರು, ರೈತರು, ಬಡವರ ಹಲವಾರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ'' ಎಂದು 9ನೇ ಬಾರಿಗೆ ಗೆದ್ದ ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಹೇಳಿದರು.

ಮತದಾರರೇ ಅಂತಿಮ- ಸತೀಶ್ ಸೈಲ್​: ''ನನಗೊಬ್ಬರು ಸಾಯೋ ತನಕ ಮಾಜಿಯಾಗಿಯೇ ಇರುತ್ತಿಯಾ ಎಂದಿದ್ದರು. ಆದರೆ ಅದಕ್ಕೆ ಜನರೇ ಉತ್ತರ ನೀಡಿದ್ದಾರೆ. ಕ್ಷೇತ್ರದ ಜನತೆಗೆ ಧನ್ಯವಾದ ಹೇಳುತ್ತೇನೆ. ಮತದಾರರೇ ಅಂತಿಮ ಎಂದ ಸೈಲ್​, ನನಗೆ ಮಾಜಿ ಎಂದವರಿಗೆ ಏನೂ ಹೇಳುವುದಿಲ್ಲ, ಜನರೇ ಈಗ ತೀರ್ಮಾನ ಕೊಟ್ಟಿದ್ದಾರೆ ಎಂದು ಗೆಲುವಿನ ಬಳಿಕ ಸತೀಶ್ ಸೈಲ್ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕಗೆ ಟಾಂಗ್ ನೀಡಿದರು.

ಕಾರ್ಯಕರ್ತರ ಗೆಲುವೆಂದ ಭೀಮಣ್ಣ: ''ಕಾಗೇರಿ ಆರು ಬಾರಿ ಗೆದ್ದರು ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಅದು ಪ್ರಚಾರದ ವೇಳೆ ನನ್ನ ಗಮನಕ್ಕೆ ಬಂದಿತ್ತು. ಇದು ನನ್ನ ಗೆಲುವಲ್ಲ ಕಾರ್ಯಕರ್ತರ ಗೆಲುವು. ಅಭಿವೃದ್ಧಿಯ ಗೆಲುವು. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿತ್ತು'' ಎಂದು ಮೊದಲ ಸಲ ಗೆದ್ದ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಹೇಳಿದರು.

ಇದನ್ನೂ ಓದಿ: ಕರುನಾಡಿಗೆ ಯಾರಾಗ್ತಾರೆ ಸಿಎಂ? ಸಿದ್ದರಾಮಯ್ಯ-ಡಿಕೆಶಿ ನಡುವೆ ಪೈಪೋಟಿ; ಹೈಕಮಾಂಡ್‌ ಅಂಗಳದಲ್ಲಿ ಚೆಂಡು

Last Updated : May 14, 2023, 12:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.