ಭಟ್ಕಳ: ಲಾಕ್ ಡೌನ್ ವೇಳೆ ಕೆಲಸ ನಿರ್ವಹಿಸಿದ ವಾರಿಯರ್ಸ್ ಗಳಾದ ಭಟ್ಕಳದ ಪತ್ರಕರ್ತರಿಗೆ ಉಸಿರಾ ಇಂಡಸ್ಟ್ರಿ ಬೆಂಗ್ರೆ ಇವರ ವತಿಯಿಂದ ಗಿಡವನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಉಸಿರಾ ಇಂಡಸ್ಟ್ರಿ ಬೆಂಗ್ರೆಯ ಮಾಲೀಕರು ಎಂ.ಡಿ.ಮ್ಯಾಥ್ಯೂ ‘ಕಳೆದ ಎರಡು ತಿಂಗಳಿನಿಂದ ಕೊರೊನಾ ಜಗತ್ತನ್ನೆ ಸಂಕಷ್ಟಗೀಡು ಮಾಡಿದೆ. ಈ ವೇಳೆ ಮನೆಯಲ್ಲಿಯೇ ಲಾಕ್ ಡೌನ್ ಆಗಿದ್ದ ಜನರಿಗೆ ಊರಿನ ಆಗುಹೋಗುಗಳ ಬಗ್ಗೆ ಸುದ್ದಿ, ವರದಿಯನ್ನು ನೀಡಿದ ಭಟ್ಕಳ ಪತ್ರಕರ್ತರಿಗೆ ಲಾವಂಚದಿಂದ ತಯಾರಿಸಿದ ಮಾಸ್ಕ್ ನೀಡಬೇಕೆಂದಿದ್ದ ಹಿನ್ನೆಲೆ ಇಂದು ವಿತರಿಸಿದ್ದೇವೆ. ಈಗಾಗಲೇ 2 ತಿಂಗಳಿನಿಂದ ಲಾವಂಚದಿಂದ ಮಾಸ್ಕ್ ತಯಾರಿಕೆ ಮಾಡಿದ್ದು ಅದನ್ನು ಕೆಲವರು ಖರೀದಿ ಮಾಡಿ ಬಳಕೆ ಮಾಡಿದ್ದಾರೆ. ಬಳಕೆ ಮಾಡಿದ ಜನರು ಇದರಿಂದಾದ ಉಪಯೋಗವನ್ನು ತಿಳಿಸಿದ್ದಾರೆ.
ಮೂಲದಲ್ಲಿ ಈ ಲಾವಂಚವೂ ಉತ್ತಮ ಔಷಧಿಯುಳ್ಳ ಗಿಡವಾಗಿದ್ದು, ಈ ಹಿಂದೆ ರಾಜರೆಲ್ಲರು ಈ ಲಾವಂಚದ ಬಳಸುತ್ತಿದ್ದರು. ವೈರಸ್ ತಡೆಗೆ ಲಾವಂಚ ಉತ್ತಮವಾಗಿದ್ದು ಎಲ್ಲೆಡೆ ಮಾಸ್ಕ್ ಬಳಕೆಯಾಗುತ್ತಿದೆ. ಆಯುರ್ವೇದದ ಔಷಧಿಗೂ ಈ ಲಾವಂಚ ಅನೂಕೂಲವಾಗಲಿದೆ. 18 ವರ್ಷದಿಂದ ಇದನ್ನು ಬೆಳೆಸುತ್ತಿದ್ದೇವೆ.
ನೋನಿ ಗಿಡವು ಸಹ ಬಹಳಷ್ಟು ರೋಗ ತಡೆಗೆ ಉಪಯುಕ್ತವಾಗಲಿದ್ದು ಸದ್ಯ ಭಾರತದಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಕ್ಯಾನ್ಸರ್ ತಡೆಗೂ ಇದು ರಾಮಬಾಣವಾಗಿದೆ ಎಂದರು.