ETV Bharat / state

ನೆರೆ ಹಾನಿ ಸರಿಪಡಿಸಲು ನರೇಗಾ ಬಳಕೆ : ಸ್ಪೀಕರ್ ಕಾಗೇರಿ - Vishweshwara Hegde Kageri visitst flood affected area

ವಿಧಾನಸಭಾಧ್ಯಕ್ಷನಾಗಿ 2 ವರ್ಷ ಕಳೆದ ಹಿನ್ನೆಲೆ ಬೆಂಗಳೂರಿನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿತ್ತು. ಅದನ್ನು ಮುಗಿಸಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂಪೂರ್ಣ ಹಾನಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ, ಪರಿಹಾರಕ್ಕೆ ಪ್ರಯತ್ನಿಸಲಾಗುವುದು..

vishweshwara-hegde-kageri
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Aug 1, 2021, 9:28 PM IST

ಶಿರಸಿ: ಪ್ರವಾಹದಿಂದ ಹಾನಿಯಾದ ತೋಟ, ಗದ್ದೆಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿಯಡಿ ಮಣ್ಣಿನ ಕೆಲಸ ಹೆಚ್ಚು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಹೆಗಡೆಕಟ್ಟಾದಲ್ಲಿ ಪ್ರವಾಹ ಹಾನಿ ವೀಕ್ಷಣೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲಿ ರೂಪಿಸಿ, ಮಳೆಗಾಲದ ನಂತರ ಕೃಷಿ ಅಭಿವೃದ್ಧಿಗೆ ಸಹಕಾರ ಆಗುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಹಾಗೂ ಗದ್ದೆಗಳಲ್ಲಿ ತೊಳೆದುಕೊಂಡು ಹೋಗಿರುವ ಮಣ್ಣುಗಳ ಕೆಲಸ ಮಾಡಲು ಅಗತ್ಯ ಕಾನೂನು ರೂಪಿಸಲಾಗುವುದು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ಅಡಿಕೆ ತೋಟ, ಗದ್ದೆ, ಏಲಕ್ಕಿ ಬೆಳೆಗಳು ನಾಶವಾಗಿ ರೈತರು ಹೆಚ್ಚಿನ ಹಾನಿ ಅನುಭವಿಸಿದ್ದಾರೆ. ನಾಟಿ ಗದ್ದೆಗಳು ತೊಳೆದುಕೊಂಡು ಹೋಗಿ ಮುಂದೆ ನಾಟಿ ಮಾಡಲೂ ಸಾಧ್ಯವಾಗದ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳೂ ಬಿದ್ದಿವೆ.

ಎಲ್ಲದಕ್ಕೂ ತುರ್ತು ಅಗತ್ಯ ಕಲ್ಪಿಸಲಾಗಿದೆ. ಪುನರ್ವಸತಿ ಕಲ್ಪಿಸಲಾಗಿದ್ದು, ದೊಡ್ಡ ಪ್ರಮಾಣದ ಜೀವ ಹಾನಿ, ಜಾನುವಾರು ಜೀವ ಹಾನಿ ಆಗದಂತೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ವಿಧಾನಸಭಾಧ್ಯಕ್ಷನಾಗಿ 2 ವರ್ಷ ಕಳೆದ ಹಿನ್ನೆಲೆ ಬೆಂಗಳೂರಿನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿತ್ತು. ಅದನ್ನು ಮುಗಿಸಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂಪೂರ್ಣ ಹಾನಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ, ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಓದಿ: ಪೊಲೀಸ್ ಕಮಿಷನರ್ ಬದಲಾವಣೆ ಸಾಧ್ಯತೆ.. ಪಂತ್‌ ಜಾಗಕ್ಕೆ ದಯಾನಂದ್‌-ಎಂ ಎ ಸಲೀಂ ಇಬ್ಬರಲ್ಲಿ ಯಾರು!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.