ETV Bharat / state

ಕುಮಟಾದಲ್ಲಿ 'ಹೊಸ್ತು ಹಬ್ಬ'ದ ಸಂಭ್ರಮ: ಗದ್ದೆಗೆ ತೆರಳಿ ಪೂಜೆ ಸಲ್ಲಿಸುವ ಇಡೀ ಊರ ಜನ

ಕುಮಟಾದಲ್ಲಿ ಹೊಸ್ತು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಮೀನಿನಲ್ಲಿ ಬೆಳೆದ ಹೊಸ ಫಸಲನ್ನು ಮನೆಗೆ ತರುವುದನ್ನು 'ಹೊಸ್ತು ಹಬ್ಬ' ಎಂದು ಆಚರಿಸಲಾಗುತ್ತದೆ.

a-unique-celebration-at-kumta-hostu-festival-celebration
ಕುಮಟಾದಲ್ಲಿ ಹೊಸ್ತು ಹಬ್ಬದ ಸಂಭ್ರಮ: ಊರಿಗೆ ಊರೇ ಗದ್ದೆಗೆ ತೆರಳಿ ಪೂಜೆ!
author img

By ETV Bharat Karnataka Team

Published : Nov 7, 2023, 2:17 PM IST

ಕುಮಟಾದಲ್ಲಿ ಹೊಸ್ತು ಹಬ್ಬದ ಸಂಭ್ರಮ

ಕಾರವಾರ(ಉತ್ತರಕನ್ನಡ): ಹೊಸ ಫಲ ಅಥವಾ ಫಸಲನ್ನು ಮನೆಗೆ ತರುವ ಪ್ರಕ್ರಿಯೆಯನ್ನು ಕರಾವಳಿ ಭಾಗದಲ್ಲಿ ಹೊಸ್ತು ಹಬ್ಬವಾಗಿ ಆಚರಿಸಲಾಗುತ್ತದೆ. ಗ್ರಾಮೀಣ ಸೊಗಡು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸುವಂತಿಲ್ಲ ಎಂಬ ನಂಬಿಕೆ ಇಲ್ಲಿನ ಜನರದ್ದು. ಈ ಸಂಬಂಧ ಹೊಸ್ತು ಹಬ್ಬದಂದು ಊರಿಗೆ ಊರೇ ಗ್ರಾಮಗಳ ಗದ್ದೆಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.

ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಜನರು ಒಟ್ಟು ಸೇರಿ ಹೊಸ್ತು ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ನೂರಾರು ವರ್ಷಗಳಿಂದ ಇಲ್ಲಿನ ರೈತರು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಬ್ಬವನ್ನು ಹರಣ ಮೂರ್ತ, ಹೊಸ ಧಾನ್ಯ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.

ಗದ್ದೆಯಲ್ಲಿ ವಿಶೇಷ ಪೂಜೆ: ಹಬ್ಬದ ದಿನ ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆ ಹೊತ್ತು ತರುತ್ತಾರೆ. ಕುಮಟಾದ ಬರ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಪ್ರತಿವರ್ಷ ವಿಜಯದಶಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಒಂದು ವೇಳೆ ಅಂದು ಆಚರಿಸಲು ಸಾಧ್ಯವಾಗದೇ ಇದ್ದರೆ ಗಂಗಾಷ್ಟಮಿಯಂದು ಆಚರಿಸಲಾಗುತ್ತದೆ. ಈ ಬಾರಿ ವಿಜಯದಶಮಿಯಂದು ಹಬ್ಬ ಆಚರಿಸಲು ಸಾಧ್ಯವಾಗದೇ ಇರುವುದರಿಂದ ಗಂಗಾಷ್ಟಮಿಯಂದು ಆಚರಿಸಲಾಗಿದೆ ಎಂದು ಅರ್ಚಕ ಭಾಸ್ಕರ್​ ದೇಸಾಯಿ ಹೇಳಿದರು.

ಹೊಸ್ತು ಹಬ್ಬದಂದು ಗ್ರಾಮದೇವತೆಗಳಾದ ಯಜಮಾನ, ಘಟಭೀರ ದೇವರ ಕಳಸ ಹೊತ್ತು ನೂರಾರು ಭಕ್ತರು ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಾರೆ‌. ಹೊಸ್ತಿನ ಹಬ್ಬಕ್ಕೆ ಸಿದ್ಧತೆ ನಡೆಸಿ ಗದ್ದೆಗೆ ಅರ್ಚಕರು ಹಾಗೂ ಗ್ರಾಮದ ಜನರು ತೆರಳಿ ಕದಿರು ಕೊಯ್ಯುತ್ತಾರೆ. ಕದಿರು ಕೊಯ್ದ ಬಳಿಕ ಪ್ರತಿಯೊಬ್ಬರೂ ತಲೆಯ ಮೇಲೆ ಕದಿರು ಹೊತ್ತು ಅವರವರ ಮನೆಗೆ ತೆರಳುತ್ತಾರೆ. ಮನೆಯಲ್ಲಿ ಸದಾ ಧಾನ್ಯಲಕ್ಷ್ಮಿ ನೆಲೆಸಬೇಕು ಅನ್ನುವ ಪ್ರಾರ್ಥನೆಯೊಂದಿಗೆ ದೇವಸ್ಥಾನದಿಂದ ಮನೆಗೆ ತರಲಾದ ಕದಿರನ್ನು ತಮ್ಮ ತಮ್ಮ ಮನೆಯ ಬಾಗಿಲು, ಕೃಷಿ ಉಪಕರಣಗಳಿಗೆ ಕದಿರು ಕಟ್ಟಿ ಹಬ್ಬಾಚರಿಸಲಾಗುತ್ತದೆ.

ಹಲವು ವರ್ಷಗಳಿಂದ ಕುಮುಟಾದ ಬರ್ಗಿ ಹಾಗೂ ಇತರ ಗ್ರಾಮಗಳಲ್ಲಿ ಈ ವಿಶೇಷ ಹೊಸ್ತಿನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಸೊಡಗಿನೊಂದಿಗೆ ವಿಶೇಷ ಅರ್ಥಗಳನ್ನು ಹೊಂದಿರುವ ಈ ಸಂಪ್ರದಾಯಗಳು ವಿಶೇಷ ಮೌಲ್ಯಗಳನ್ನು ಹೊಂದಿದೆ.

ಇದನ್ನೂ ಓದಿ: ಶಿವ-ಗಂಗೆಯ ಮದುವೆ ನಿಶ್ಚಿತಾರ್ಥ; ಗೋಕರ್ಣದಲ್ಲಿ ಹೀಗೊಂದು ವಿಶೇಷ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.