ಶಿರಸಿ: ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಒಂದೇ ತಾಯಿಯ ಮಕ್ಕಳಾದ ಇಬ್ಬರು ಯೋಧರನ್ನು ಅವರ ಸ್ವಗ್ರಾಮ ಶಿರಸಿ ತಾಲೂಕಿನ ಕೆಂಚಗದ್ದೆಯ ಸನ್ಮಾನಿಸಿ ಗೌರವಿಸಲಾಗಿದೆ.
ಕೆಂಚಗದ್ದೆಯ ಸೊಸೈಟಿ ಕಾಲೋನಿಯ ನಾರಾಯಣ ನಾಯ್ಕ ಮತ್ತು ಜಾನಕಿ ನಾಯ್ಕ ದಂಪತಿಗಳ ಮಕ್ಕಳಾಗಿರುವ ಶ್ರೀನಿವಾಸ ನಾಯ್ಕ ಹಾಗೂ ಧನಂಜಯ ನಾಯ್ಕ ಅವರನ್ನು ಕೆಂಚಗದ್ದೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ ದೇಶ ಸೇವೆಯನ್ನು ಮೆಚ್ಚಿ ಊರಿನ ನಾಗರಿಕರು ಸನ್ಮಾನಿಸಿದರು. ತಮ್ಮ ಧನಂಜಯ ನಾಯ್ಕ ನಾಸಿಕ್ನಲ್ಲಿರುವ ಟ್ರೇನಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ಅಣ್ಣ ಶ್ರೀನಿವಾಸ ನಾಯ್ಕ ಹೈದರಾಬಾದ್ನಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಯೋಧರನ್ನು ಜನತಾಕಾಲೋನಿ ಯುವಕರು ಸಾಂಪ್ರದಾಯಿಕ ಡೊಳ್ಳು ಕುಣಿತದ ಮುಖಾಂತರ ಅದ್ದೂರಿಯಾಗಿ ಬರಮಾಡಿಕೊಂಡರು.