ಕಾರವಾರ: ನಿಷೇಧದ ನಡುವೆಯೂ ಅಕ್ರಮವಾಗಿ ಮರಳು ತೆಗೆದು ಸಾಗಣೆ ಮಾಡುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮರಳು ತೆಗೆಯುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದ್ದರೂ ಕೂಡ ನಗರದ ನಂದಗದ್ದಾದ ನಾಗಾನಾಥ ದೇವಸ್ಥಾನದ ಬಳಿ ಟಾಟಾ ಏಸ್ ರಿಕ್ಷಾ ಹಾಗೂ ಟಾಟಾ ಮೊಬೈಲ್ ವಾಹನಗಳ ಮುಖಾಂತರ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ನಗರಠಾಣೆ ಪೊಲೀಸ್ ಸಿಬ್ಬಂದಿ ದಾಳಿ ಮಾಡಿ, ಮರಳು ಹಾಗೂ ವಾಹನ ವಶಕ್ಕೆ ಪಡೆದಿದ್ದಾರೆ. ಈ ವಾಹನಗಳು ನಗರದ ಮಧುಕರ ಜೋಶಿ ಹಾಗೂ ಸಂತೋಷ ತಾಮಸ್ಸೆ ಎಂಬುವರಿಗೆ ಸೇರಿದವು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.