ಕಾರವಾರ: ಇಲ್ಲಿನ ಅಲಿಗದ್ದಾ ಹಾಗೂ ಮಾಜಾಳಿ ಕಡಲತೀರದಲ್ಲಿ ಒಂದೇ ದಿನ ಎರಡು ಅಪರೂಪದ ಡಾಲ್ಫಿನ್ಗಳ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ. ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಅಪರೂಪದ ಇಂಡೋ ಪೆಸಿಫಿಕ್ ಫಿನ್ಲೆಸ್ ಪೊರ್ಪೋಯ್ಸ್ ಜಾತಿಯ ಡಾಲ್ಫಿನ್ ಮೃತದೇಹ ಪತ್ತೆಯಾಗಿದೆ. 8 ವರ್ಷದ ಹೆಣ್ಣು ಡಾಲ್ಫಿನ್ ಇದಾಗಿದ್ದು, ಹೊಟ್ಟೆಯಲ್ಲಿ ಆದ ರಕ್ತಸ್ರಾವದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಈ ಜಾತಿಯ ಡಾಲ್ಫಿನ್‌ಗಳು ಏಷ್ಯಾದ ಇಂಡೋನೇಷ್ಯಾ, ಮಲೇಶಿಯಾ, ಭಾರತ, ಬಾಂಗ್ಲಾದೇಶಗಳಲ್ಲಿ ಕಂಡುಬರುತ್ತವೆ.
ನಗರದ ಅಲಿಗದ್ದಾ ಕಡಲ ತೀರದ ಬಳಿ ಇಂಡೋ ಪೆಸಿಫಿಕ್ ಹಂಪ್‌ಬ್ಯಾಕ್ ಜಾತಿಯ ಡಾಲ್ಫಿನ್ ಕಳೆಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 2.5 ಮೀಟರ್ ಉದ್ದವಿದ್ದು, 30 ವರ್ಷದ ಡಾಲ್ಫಿನ್ ಇದಾಗಿದೆ. ಬಲೆಗೆ ಸಿಕ್ಕಾಗ ಕೊಳೆತ ಸ್ಥಿತಿಯಲ್ಲಿತ್ತು. ಅದರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಬೋಟ್ ತಾಗಿ ಗಾಯಗೊಂಡು ಡಾಲ್ಫಿನ್ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ನಿಖರ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಲಿದೆ ಎಂದು ಡಿಎಫ್ಓ ಡಾ. ಪ್ರಶಾಂತ ಕೆ.ಸಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14ನೇ ವಾರ್ಷಿಕೋತ್ಸವದ ಸಂಭ್ರಮ