ಶಿರಸಿ: ಶಾಲೆ ಬಿಟ್ಟ ನಂತರ ಆಟವಾಡಲು ತೆರಳಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಇಂಗು ಗುಂಡಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾಹಕ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಬಾಳಗಾರಿನಲ್ಲಿ ನಡೆದಿದೆ.
ಬಾಳಗಾರ ಗ್ರಾಮದ ಸಹನಾ ಕೃಷ್ಣ ಭಟ್ (10) ಮತ್ತು ರಶ್ಮಿ ಪಟಗಾರ (7) ಮೃತಪಟ್ಟ ದುರ್ದೈವಿಗಳು. ಶನಿವಾರ ಮಧ್ಯಾಹ್ನ ಶಾಲೆಗೆ ರಜೆಯಿರುವ ಕಾರಣ ಆಟವಾಡಲು ತೆರಳಿದ್ದ ಮಕ್ಕಳು ಸಂಜೆಯದಾರೂ ಮನೆಗೆ ಬಾರದ ಕಾರಣ ಪೊಷಕರು ಹುಡುಕಾಡಿದಾಗ ಹತ್ತಿರದ ಇಂಗು ಗುಂಡಿಯಲ್ಲಿ ಮೃತ ದೇಹ ಪತ್ತೆಯಾಗಿವೆ.
ಪ್ರತಿ ಶನಿವಾರ, ಭಾನುವಾರ ಸೊಪ್ಪಿನ ಬೆಟ್ಟಕ್ಕೆ ಆಟವಾಡಲು ಮಕ್ಕಳು ಹೋಗುತ್ತಿದ್ದರು ಎಂದು ಪೊಷಕರು ತಿಳಿಸಿದ್ದಾರೆ. ಸೊಪ್ಪಿನ ಬೆಟ್ಟದಲ್ಲಿ ನೀರಿಂಗಿಸಲು ಇಂಗು ಗುಂಡಿಗಳನ್ನು ತೊಡಿದ್ದು ಆಕಸ್ಮಿಕವಾಗಿ ಇಬ್ಬರೂ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.