ETV Bharat / state

ಹೆಲ್ಮೆಟ್ ಧರಿಸಿ ದಾಂಡಿಯಾ ನೃತ್ಯ... ಕಾರವಾರದಲ್ಲಿ ಮಹಿಳೆಯರ ಕಾರ್ಯಕ್ಕೆ ಮೆಚ್ಚುಗೆ

ಉತ್ತರ ಕನ್ನಡ ಜಿಲ್ಲೆ ಕಾರವಾರದ ಕೆಹೆಚ್​ಬಿ ಕಾಲೋನಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ನಡೆದ ದಾಂಡಿಯಾ ನೃತ್ಯ ಪ್ರದರ್ಶನ. ನೃತ್ಯಗಾರರು ಹೆಲ್ಮೆಟ್​ ಧರಿಸಿ ಹೆಜ್ಜೆ ಹಾಕಿ, ಸಂಚಾರ ನಿಯಮ ಪಾಲನೆ ಮಾಡುವಂತೆ ಜಾಗೃತಿ ಮೂಡಿಸಿರುವುದು ಎಲ್ಲರ  ಮೆಚ್ಚುಗೆಗೆ ಪಾತ್ರವಾಯಿತು.

ದಾಂಡಿಯಾ ನೃತ್ಯದ ಮೂಲಕ ಸಂಚಾರಿ ನಿಯಮ ಜಾಗೃತಿ
author img

By

Published : Oct 6, 2019, 12:30 PM IST

Updated : Oct 6, 2019, 1:20 PM IST

ಕಾರವಾರ: ನವರಾತ್ರಿ ಹಬ್ಬ ಎಂದರೆ ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯ. ಇವುಗಳ ಜೊತೆ ಸಾಮಾಜಿಕ ಸಂದೇಶ ಸಾರುವ ಆಚರಣೆಗಳು ಕೂಡ ನಡೆಯುತ್ತಿವೆ. ಕಾರವಾರದ ಕೆ.ಹೆಚ್.ಬಿ ಕಾಲೋನಿ ಮಹಿಳೆಯರು ಇಂತಹದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.

ಹೌದು, ಮಹಿಳೆಯರು ತಲೆಗೆ ಹೆಲ್ಮೆಟ್ ಧರಿಸಿ ಸಾಂಪ್ರದಾಯಿಕ ದಾಂಡಿಯಾ ನೃತ್ಯ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಸಂದೇಶ ಸಾರಿದ್ದಾರೆ. ಕಳೆದ ಏಳು ದಿನಗಳಿಂದ ಕಾರವಾರ ನಗರದ 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಂಡಿಯಾ ಕಾರ್ಯಕ್ರಮ ನಡೆಯುತ್ತಿದ್ದು, ಶನಿವಾರ ರಾತ್ರಿ ಕೆಹೆಚ್​ಬಿ ಕಾಲೋನಿಯಲ್ಲಿ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಕಂಡು ಬಂತು.

ದಾಂಡಿಯಾ ನೃತ್ಯದ ಮೂಲಕ ಸಂಚಾರಿ ನಿಯಮ ಜಾಗೃತಿ

ಪ್ರಮುಖವಾಗಿ ಹೆಲ್ಮೆಟ್ ಧರಿಸಿ, ದಂಡದ ಜೊತೆಗೆ ಜೀವ ರಕ್ಷಿಸಿಕೊಳ್ಳಿ ಎಂದು ಹೇಳುವ ಮೂಲಕ ಇಲ್ಲಿ ಜಾಗ್ರತಿ ಮೂಡಿಸಿದ್ದು ವಿಶೇಷ.

Intro:Body:ಕಾರವಾರ: ನವರಾತ್ರಿ ಅಂದ್ರೆ ದಿನವೂ ವಿವಿಧ ಸಂಪ್ರದಾಯಗಳ ಆಚರಣೆ ನಡೆಸೋದು ಸಾಮಾನ್ಯ. ಹಬ್ಬದ ಆಚರಣೆಯಲ್ಲೂ ಸಾಮಾಜಿಕ ಸಂದೇಶ ಸಾರುವ ಮೂಲಕ ಕಾರವಾರದ ಕೆ.ಎಚ್.ಬಿ. ಕಾಲೋನಿಯ ಮಹಿಳೆಯರು ವಿಶೇಷತೆ ಮೆರೆದಿದ್ದಾರೆ.
ಸಾಂಪ್ರದಾಯಿಕ ದಾಂಡಿಯಾ ನೃತ್ಯವನ್ನು ತಲೆಗೆ ಹೆಲ್ಮೆಟ್ ಧರಿಸಿ ಪ್ರದರ್ಶಿಸುವ ಮೂಲಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಸಂದೇಶ ನೀಡಿದರು. ಕಳೆದ ಏಳು ದಿನಗಳಿಂದ ಕಾರವಾರ ನಗರದ ಹದಿನೈದಕ್ಕೂ ಹೆಚ್ಚು ಕಡೆಗಳಲ್ಲಿ ದಾಂಡಿಯಾ ಕಾರ್ಯಕ್ರಮ ನಡೆಯುತ್ತಿದೆ. ಶನಿವಾರ ರಾತ್ರಿ ಕೆಎಚ್ ಬಿ ಕಾಲೊನಿಯಲ್ಲಿ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರು
ಹೆಲ್ಮೆಟ್ ಧರಿಸಿ ನೃತ್ಯ ಪ್ರದರ್ಶಿಸಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ದ್ವಿಚಕ್ರ ವಾಹನ ಚಾಲನೆಯ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ದಂಡದ ಜೊತೆಗೆ ಜೀವವನ್ನು ರಕ್ಷಿಸಿಕೊಳ್ಳಿ ಎಂದು ನವರಾತ್ರಿ ಸಂದರ್ಭದಲ್ಲಿ ವನಿತೆಯರು ನೀಡಿದ ಸಂದೇಶ ಪಾಲಿಸುವುದಾಗಿ ನೆರೆದಿದ್ದ ನೂರಾರು ಜನರು ಅಭಿಪ್ರಾಯ ವ್ಯಕ್ತಪಡಿಸಿದರು.

Conclusion:
Last Updated : Oct 6, 2019, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.