ETV Bharat / state

ಟ್ಯಾಗೋರ್ ಕಡಲತೀರಕ್ಕೆ ಹರಿದು ಬಂದ ಪ್ರವಾಸಿಗರ ದಂಡು - tagore beaches opens for tourists news

ಕಾರವಾರದ ಬೀಚ್​ನಲ್ಲಿ ಹೊಸ ವರ್ಷದಂದು ಹೇರಿದ್ದ ನಿಷೇಧಾಜ್ಞೆ ತೆರವುಗೊಂಡಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

huge numbers of tourists visits to tagore beach
ಪ್ರವಾಸಿಗರ ದಂಡು
author img

By

Published : Jan 3, 2021, 8:25 PM IST

ಕಾರವಾರ: ಹೊಸ ವರ್ಷಾಚರಣೆ ವೇಳೆ ಕರಾವಳಿಯ ಕಡಲತೀರಗಳಲ್ಲಿ ನಿಷೇಧಾಜ್ಞೆ ಹೇರಿದ ಕಾರಣ ಅದೆಷ್ಟೋ ಪ್ರವಾಸಿಗರು ಸೇರಿದಂತೆ ಸ್ಥಳೀಯರು ನಿರಾಸೆ ಅನುಭವಿಸಿದ್ದರು. ಆದರೆ ಇದೀಗ ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ಕಡಲತೀರಗಳಿಗೆ ಜನ ಹರಿದು ಬರುತ್ತಿದ್ದು, ಕಾರವಾರದ ರವೀಂದ್ರನಾಥ ಟ್ಯಾಗೋರ್​ ಕಡಲತೀರ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.

ಪ್ರವಾಸಿಗರ ದಂಡು

ರೂಪಾಂತರ ಕೊರೊನಾ ಆತಂಕದ ಕಾರಣ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಐದು ತಾಲೂಕುಗಳ ಕಡಲತೀರಗಳಲ್ಲಿ ಡಿ.31ರ ಒಂದು ದಿನ ರಾತ್ರಿ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಜಿಲ್ಲಾಡಳಿತ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕಿತ್ತು. ಸಂಜೆಯಾಗುತ್ತಿದ್ದಂತೆ ಪ್ರತಿನಿತ್ಯ ಕಡಲತೀರಕ್ಕೆ ಬಂದು ವಿಹರಿಸುತ್ತಿದ್ದ ಅದೆಷ್ಟೋ ಮಂದಿ ಸೇರಿದಂತೆ ಹೊಸ ವರ್ಷದ ಸಂಭ್ರಮಾಚರಣೆಗೆ ಆಗಮಿಸಿದ್ದ ಜನರು ಅಂದು ನಿರಾಸೆಯಿಂದಲೇ ವಾಪಸ್​ ತೆರಳಿದ್ದರು. ರೂಪಾಂತರ ಕೊರೊನಾ ಆತಂಕ ಇರುವ ಹಿನ್ನೆಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೇಳಿತ್ತು.

ಆದರೆ ಇದೀಗ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ರಾತ್ರಿವರೆಗೂ ಜನರು ಕುಟುಂಬ ಸಮೇತ ಬಂದು ವಿಹರಿಸಿ ತೆರಳುತ್ತಿದ್ದಾರೆ. ಆದರೆ ಇದು ಜಿಲ್ಲಾಡಳಿತಕ್ಕೆ ಕಾಣುತ್ತಿಲ್ಲವೇ ? ಕೇವಲ ಹೊಸ ವರ್ಷದ ದಿನ ನಿಷೇಧಾಜ್ಞೆ ಜಾರಿ ಮಾಡಿ ಅದೆಷ್ಟೊ ಮಂದಿ ಸಂಭ್ರಮಕ್ಕೆ ತೆರೆ ಎಳೆದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈಗಲೂ ಪೊಲೀಸರನ್ನು ನೇಮಿಸಿ ಗುಂಪುಗೂಡದಂತೆ ಮತ್ತು ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸೂಚಿಸುವ ಕೆಲಸ ಮಾಡಬೇಕು ಎಂಬುದು ಬಹುತೇಕ ಸಾರ್ವಜನಿಕರ ಒತ್ತಾಯವಾಗಿದೆ.

ಇದನ್ನೂ ಓದಿ:ಮಾಸ್ಕ್-ಪಿಪಿಇ ಕಿಟ್‌ಗಳ ದೀರ್ಘಕಾಲದ ಬಳಕೆಯ ಅಡ್ಡ ಪರಿಣಾಮವೇನು? ತಜ್ಞರು ಏನಂತಾರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.