ಕಾರವಾರ: ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕುಳಗಿ - ಪಣಸೋಲಿ ಅರಣ್ಯಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಭಾರಿ ಗಾತ್ರದ ಹುಲಿಯೊಂದು ದರ್ಶನ ನೀಡಿದೆ.
ಕುಳಗಿ - ಪಣಸೋಲಿ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೊರಟಿದ್ದ ಪ್ರವಾಸಿಗರಿಗೆ ರಸ್ತೆಯಂಚಿನಲ್ಲಿಯೇ ಹುಲಿ ಮರವೊಂದಕ್ಕೆ ತನ್ನ ಮೈಯನ್ನು ಉಜ್ಜಿಕೊಳ್ಳುತ್ತಿತ್ತು. ಇದನ್ನು ಕಂಡು ಪ್ರವಾಸಿಗರು ಫುಲ್ ಖುಷ್ ಆದರು. ಇನ್ನು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದ ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಫುಲ್ ವೈರಲ್ ಆಗಿದೆ.