ETV Bharat / state

ಸಾಲುಸಾಲು ರಜೆ ಎಫೆಕ್ಟ್​: ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಮುರುಡೇಶ್ವರ

ಸಾಲುಸಾಲು ಸರ್ಕಾರಿ ರಜೆ ಕಾರಣ ಕಳೆದ 3 ದಿನಗಳಿಂದ ಭಟ್ಕಳ ತಾಲೂಕಿನ ಪ್ರಸಿದ್ಧ ಪ್ರವಾಸಿ ಕೇಂದ್ರ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮುರುಡೇಶ್ವರ
author img

By

Published : Oct 8, 2019, 7:59 PM IST

ಕಾರವಾರ : ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ 3 ದಿನಗಳಿಂದ ಭಟ್ಕಳ ತಾಲೂಕಿನ ಪ್ರಸಿದ್ಧ ಪ್ರವಾಸಿಕೇಂದ್ರ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮುರುಡೇಶ್ವರ

ಬೆಂಗಳೂರು, ಮೈಸೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನರು ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮುರುಡೇಶ್ವರದಲ್ಲಿರುವ ಸುಂದರ ಕಡಲತೀರ, ಏಷ್ಯಾದಲ್ಲೇ 2ನೇ ಅತಿ ಎತ್ತರದ ಶಿವನಮೂರ್ತಿ, ರಾಜಗೋಪುರ, ಪಂಚಕ್ಷೇತ್ರಗಳಲ್ಲಿ ಒಂದಾದ ಶಿವನ ಸನ್ನಿಧಾನ ಸೇರಿದಂತೆ ಇಲ್ಲಿನ ನಿಸರ್ಗ ನಿರ್ಮಿತ ಪ್ರಕೃತಿಯ ಸೊಬಗನ್ನು ಸವಿಯಲು ಸಾವಿರಾರು ಪ್ರವಾಸಿಗರು ಮೂರು ದಿನಗಳಿಂದ ಮುರುಡೇಶ್ವರಕ್ಕೆ ಬರುತ್ತಿದ್ದಾರೆ.

Intro:Body:ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವಾಲಯವು ಧಾರ್ಮಿಕ ಪುಣ್ಯ ಸ್ಥಳವಾಗಿದ್ದು ಐತಿಹಾಸಿಕ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀಸಮುದ್ರದ ತೀರದಲ್ಲಿದ್ದು,
ಸಾಲು ಸಾಲು ಸರ್ಕಾರಿ ರಜೆ,ಇನ್ನೊಂದೆಡೆ ಮಕ್ಕಳಿಗೆ ಶಾಲೆಗಳಿಗೆ ರಜೆ, ಕಡಿಮೆಯಾದ ಮಳೆ ಅಬ್ಬರ, ಇವೆಲ್ಲವುಗಳ ಪರಿಣಾಮ ಮೂರು ದಿನಗಳಿಂದ ಭಟ್ಕಳ ತಾಲ್ಲೂಕಿನ ಪ್ರಸಿದ್ದ ಪ್ರವಾಸಿಕೇಂದ್ರ ಮುರ್ಡೇಶ್ವರದಲ್ಲಿ ಪ್ರವಾಸಿಗರು ಜಾತ್ರೆಯಲ್ಲಿ ಸೇರಿದಂತೆ ತುಂಬಿ ತುಳುಕುತ್ತಿದ್ದಾರೆ.

ದೂರದ ಬೆಂಗಳೂರು, ಮೈಸೂರು ಸೇರಿದಂತೆ ಉತ್ತರ ಕರ್ನಾಟಕದ ಜನರು ಸಾಲು ಸಾಲು ರಜೆಯ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತಿರುವ ಮುರ್ಡೇಶ್ವರದ ಸುಂದರ ಕಡಲತೀರ, ಏಷ್ಯಾದಲ್ಲೇ 2ನೇ ಅತಿ ಎತ್ತರವಾದ ಶಿವನಮೂರ್ತಿ, ರಾಜಾಗೋಪುರ, ಪಂಚಕ್ಷೇತ್ರಗಳಲ್ಲಿ ಒಂದಾದ ಶಿವನ ಸನ್ನಿಧಾನ ಸೇರಿದಂತೆ ಇಲ್ಲಿನ ನಿಸರ್ಗ ನಿರ್ಮಿತ ಪ್ರಕೃತಿಯ ಸೊಬಗನ್ನು ಸವಿಯಲು ಲಕ್ಷದ ಸಂಖ್ಯೆಯಲ್ಲಿ ಪ್ರವಾಸಿಗರು ಮೂರು ದಿನಗಳಿಂದ ಮುರ್ಡೇಶ್ವರಕ್ಕೆ ಬರುತ್ತಿದ್ದಾರೆ.

ಹೌದು ಮುರುಡೇಶ್ವರದಲ್ಲಿ ದೊಡ್ಡ ಶಿವನ ವಿಗ್ರಹವಿದ್ದು, ಇದು ಏಷ್ಯಾದಲ್ಲಿಯೆ 2ನೇ ಅತಿ ಎತ್ತರವಾದ ಶಿವನ ಪ್ರತಿಮೆಯಾಗಿದೆ ಹಾಗೂ ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ. ಇದು ಧಾರ್ಮಿಕರನಷ್ಟೇ ತನ್ನತ್ತ ಸೆಳೆಯದೆ, ಪ್ರವಾಸಿಗರನ್ನು ಕೂಡ ಆಕರ್ಷಿಸುತ್ತಿದೆ.

ಸದ್ಯ ದಸರಾ ರಜೆ ನಿಮಿತ್ತ ಉತ್ತರ ಕನ್ನಡ ಜಿಲ್ಲೆಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದು ಮುರುಡೇಶ್ವರಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ತಮ್ಮ ರಜೆಯನ್ನು ಮೋಜು ಮಸ್ತಿ ಮಾಡಿ ಕಳೆಯಲು ಇದು ಸೂಕ್ತವಾದ ಜಾಗವೆಂದು ಆಯ್ಕೆ ಮಾಡಿಕೊಂಡು ಬಂದರೆ ಮುರ್ಡೇಶ್ವರದಲ್ಲಿರುವ ಎಲ್ಲಾ ವಸತಿಗೃಹಗಳು ತುಂಬಿ ತುಳುಕುತ್ತಿವೆ, ಸಾವಿರ ನೀಡುತ್ತೇವೆಂಲರೂ ಇಲ್ಲಿ ವಸತಿಗೃಹಗಳು ಸೀಗುವುದು ಕಷ್ಟಕರವಾಗಿದೆ, ಇದೇ ಸಮಯ ಎಂದುಕೊಂಡು ಇಲ್ಲಿನ ಕೆಲವು ವಸತಿಗೃಹಗಳು ಒಂದಕ್ಕೆ ಎರಡರಷ್ಟು ಬಾಡಿಗೆ ಹೆಚ್ಚಿಸಿವೆ.

ಪ್ರವಾಸಿಗರು ಕೈಯಲ್ಲಿ ಸ್ವಲ್ಪ ಹಣ ಇಟ್ಟುಕೊಂಡು ಎರಡು ಮೂರು ಎಟಿಎಂ ಕಾರ್ಡಗಳನ್ನು ತರುತ್ತಿದ್ದಾರೆ. ಆದರೆ ನಿರೀಕ್ಷೆಗೂ ಮೀರಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕಿನವರು ಎಟಿಎಂಗೆ ಹಾಕಿದ ಹಣವೆಲ್ಲಾ ಖಾಲಿಯಾಗಿ ಪ್ರವಾಸಿಗರು ಪರದಾಡುವಂತಾಗಿದೆ. ಹಣವಿಲ್ಲದೇ ಪ್ರವಾಸ ಮಾಡುವುದಾದರೂ ಹೇಗೆ ಎಂದು ಪ್ರವಾಸಿಗರು ಗುಣುಗುಡುತ್ತಿದ್ದಾರೆ.
Conclusion:ಉದಯ ನಾಯ್ಕ .ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.