ETV Bharat / state

ಮುರುಡೇಶ್ವರ ಕಡಲ ತೀರದಲ್ಲಿ ಅಪಾಯಕ್ಕೆ ಸಿಲುಕಿದ ಪ್ರವಾಸಿಗನ ರಕ್ಷಣೆ - bhatkal uttarkannada latest news

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನಿವಾಸಿ ಅಕ್ಷಯ ಪರಶುರಾಮ ವಾಡಗನ್ 11 ಜನ ಗೆಳೆಯರೊಂದಿಗೆ ಇಂದು ಮುರುಡೇಶ್ವರಕ್ಕೆ ಬಂದಿದ್ದರು. ಅಕ್ಷಯ್​ ಅವರು ಮುರುಡೇಶ್ವರ ಕಡಲ ತೀರದಲ್ಲಿ ಸಮಸ್ಯೆಗೆ ಸಿಲುಕಿದ್ದು, ಲೈಫ್‍ಗಾರ್ಡ್​​​ ಸಿಬ್ಬಂದಿ ರಕ್ಷಿಸಿದ್ದಾರೆ.

tourist protected by lifeguards in Murudeshwar Beach
ಮುರುಡೇಶ್ವರ ಕಡಲ ತೀರದಲ್ಲಿ ಅಪಾಯಕ್ಕೆ ಸಿಲುಕಿದ ಪ್ರವಾಸಿಗನ ರಕ್ಷಣೆ
author img

By

Published : Oct 30, 2020, 7:44 PM IST

ಭಟ್ಕಳ: ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಈಜಾಡಲು ತೆರಳಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಮುರುಡೇಶ್ವರ ಕಡಲ ತೀರದ ಲೈಫ್‌ ಗಾರ್ಡ್​​​ಗಳ ಸಹಾಯದಿಂದ ರಕ್ಷಿಸಿ ದಡಕ್ಕೆ ಕರೆತಂದ ಘಟನೆ ಇಂದು ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನಿವಾಸಿ ಅಕ್ಷಯ ಪರಶುರಾಮ ವಾಡಗನ್ ಅಪಾಯದಿಂದ ಪಾರಾದ ವ್ಯಕ್ತಿ. ಇವರು 11 ಜನ ಗೆಳೆಯರೊಂದಿಗೆ ಇಂದು ಮುರುಡೇಶ್ವರಕ್ಕೆ ಬಂದಿದ್ದರು. ಎಲ್ಲರೂ ನೀರಿಗಿಳಿದು ಈಜಾಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅಕ್ಷಯ ಅಪಾಯಕ್ಕೆ ಸಿಲುಕಿಕೊಂಡರು.

ಆ ವೇಳೆ, ಅಲ್ಲೇ ದಡದಲ್ಲಿದ್ದ ಲೈಫ್‍ಗಾರ್ಡ್​​​ ಸಿಬ್ಬಂದಿ ರವಿ ಮಾದೇವ ಹರಿಕಾಂತ ಹಾಗೂ ಚಂದ್ರಶೇಖರ ಈಶ್ವರ ಹರಿಕಾಂತ ಅಪಾಯದಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಸದ್ಯ ಈ ಕುರಿತು ಮುರುಡೇಶ್ವರ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.