ಭಟ್ಕಳ: ತಾಲೂಕಿನ ಅರಬ್ಬೀ ಸಮುದ್ರದ 15 ನಾಟಿಕಲ್ ದೂರದ ನೇತ್ರಾಣಿ ದ್ವೀಪದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಮೂವರು ಮೀನುಗಾರರನ್ನು ರಕ್ಷಿಸಲಾಗಿದೆ.
ಬೆಳಂಬಾರು ಮೂಲದ ಸುರೇಶ್ ಕಾರ್ವಿ ಎಂಬುವರಿಗೆ ಸೇರಿದ ಮತ್ಸ್ಯಾಂಜನೇಯ ಹೆಸರಿನ ಬೋಟ್ ಮುಳುಗಡೆಗೊಂಡಿತ್ತು. ಇದರಲ್ಲಿದ್ದ ಮೀನುಗಾರಿಕೆಗೆ ತೆರಳಿದ್ದ ಮೂವರು ಮೀನುಗಾರರನ್ನು ಇನ್ನೊಂದು ಬೋಟ್ನ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಕೋಸ್ಟಲ್ ಪೊಲೀಸರಿಂದ ಬೋಟ್ ದಡಕ್ಕೆ ಎಳೆತರಲು ಪ್ರಯತ್ನ ನಡೆಸಲಾಗಿದೆ.
ಬೋಟ್ ದುರಂತ: ದಿನವಿಡೀ ಹುಡುಕಿದರೂ ಪತ್ತೆಯಾಗದ ಕೈತಪ್ಪಿಹೋದ ಶವ
ಮಂಗಳೂರು ಬೋಟ್ ದುರಂತ: ಶ್ರೀರಕ್ಷಾ ಎಂಬ ಬೋಟ್ ರವಿವಾರ ಮೀನುಗಾರಿಕೆಗೆಂದು ತೆರಳಿದ್ದು, ಮೀನುಗಳನ್ನು ತುಂಬಿಕೊಂಡು ಮರಳಿ ಬರುವಾಗ ಅಳಿವೆ ಬಾಗಿಲಿನಲ್ಲಿ ಬೋಟ್ ದುರಂತಕ್ಕೀಡಾಗಿತ್ತು. ಪರಿಣಾಮ ಬೋಟ್ನಲ್ಲಿದ್ದ 25 ಮಂದಿಯಲ್ಲಿ 19 ಮಂದಿ ದಡ ಸೇರಿದ್ದರು. ಆರು ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು.