ಕಾರವಾರ: 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಹಾಕದೆ ಇರುವುದಕ್ಕೆ ಸ್ಫೂರ್ತಿ ಸೇವಾ ಸಂಘಟನೆ ಮಹಿಳಾ ಸದಸ್ಯರು, ನಗರದ ಅರ್ಜುನ್ ಚಿತ್ರಮಂದಿರದ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಫೂರ್ತಿ ಸೇವಾ ಸಂಘಟನೆ ಮಹಿಳಾ ಸದಸ್ಯರು ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಹಾಕದಿರುವುದನ್ನು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದೆಲ್ಲೆಡೆ ಸಿನಿಮಾ ಕುರಿತು ಚರ್ಚೆ ನಡೆಯುತ್ತಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಹ ಮಾಡಲಾಗುತ್ತಿದೆ. ಆದರೆ ಕಾರವಾರದಲ್ಲಿ ಮಾತ್ರ ಮಾಡುತ್ತಿಲ್ಲ.
ಇದನ್ನೂ ಓದಿ: ದೇಶಪ್ರೇಮದ ಜೊತೆ ಸ್ನೇಹ ಸಂಬಂಧದ ಮೌಲ್ಯ ಹೆಚ್ಚಿಸುವ 'ಜೇಮ್ಸ್'
ಜನರು ಇಷ್ಟಪಡುವ ಚಿತ್ರಗಳನ್ನು ಮೊದಲು ಪ್ರದರ್ಶನ ಮಾಡಿ. ಇಲ್ಲದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಯಾವ ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.