ETV Bharat / state

ಮೀನುಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು: ಒಕ್ಕೂಟದ ಆಗ್ರಹ

ಮೀನುಗಾರರು ಹಾಗೂ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದು, ತಡಮಾಡದೇ ಸರ್ಕಾರ ಸಾಲಮನ್ನಾ ಮಾಡಲು ಮುಂದಾಗಬೇಕು ಎಂದು ಭಟ್ಕಳ ತಾಲೂಕು ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಠ್ಠಲ್ ದೇವಿಮನೆ ಆಗ್ರಹಿಸಿದ್ದಾರೆ.

ಮೀನುಗಾರರು ಹಾಗೂ ಸಹಕಾರಿ ಸಂಘಗಳಿಗೆ ಸರ್ಕಾರ ಸ್ಪಂದಿಸಬೇಕು: ವಿಠ್ಠಲ್ ದೇವಿಮನೆ
author img

By

Published : Oct 8, 2019, 12:28 PM IST

ಭಟ್ಕಳ: ಮೀನುಗಾರರು ಹಾಗೂ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದು, ತಡಮಾಡದೇ ಸರ್ಕಾರ ಸಾಲಮನ್ನಾ ಮಾಡಲು ಮುಂದಾಗಬೇಕೆಂದು ಭಟ್ಕಳ ತಾಲೂಕು ಮೀನುಗಾರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಠ್ಠಲ್ ದೇವಿಮನೆ ಆಗ್ರಹಿಸಿದ್ದಾರೆ.

ಸತ್ಕಾರ ಹೋಟೆಲ್​ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಠ್ಠಲ್ ದೇವಿಮನೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೀನುಗಾರರಿಗೆ ಸಾಲಮನ್ನಾ ಘೋಷಣೆ ಮಾಡಿದ್ದು, ಇಲ್ಲಿವರೆಗೆ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗದ ಹಿನ್ನೆಲೆಯಲ್ಲಿ ಮೀನುಗಾರ ಹಾಗೂ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಗಾಗಿ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ಹೇಳಿದರು.

ಮೀನುಗಾರರು ಹಾಗೂ ಸಹಕಾರಿ ಸಂಘಗಳಿಗೆ ಸರ್ಕಾರ ಸ್ಪಂದಿಸಬೇಕು: ವಿಠ್ಠಲ್ ದೇವಿಮನೆ

ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರರು ಹೈರಾಣಾಗಿ ಹೋಗಿದ್ದು, ಪಡೆದ ಸಾಲವನ್ನು ತುಂಬಲಾಗದೇ ಅಸಹಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾಲ ಮನ್ನಾ ಯೋಜನೆ ಘೋಷಣೆ ಮಾಡುತ್ತಿದ್ದಂತೆಯೇ ಮೀನುಗಾರರು ನಿಟ್ಟುಸಿರು ಬಿಟ್ಟಿದ್ದರು. ಈ ಸಂಬಂಧ ಕಳೆದ ಆಗಸ್ಟ್ 1 ರಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಉಪಸ್ಥಿಯಲ್ಲಿ ನಡೆದ ಸಭೆಗೆ ಸಹಕಾರಿ ಸಂಘಗಳು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಪಾಲ್ಗೊಂಡಿದ್ದರು. ಸದರಿ ಸಭೆಯಲ್ಲಿ 2019 ಮಾರ್ಚ31ರ ಕಾಲಾವಧಿಯೊಳಗಿನ ಸಾಲಗಾರರ ಯಾದಿಯನ್ನು ತಯಾರಿಸುವಂತೆ ತಿಳಿಸಲಾಗಿತ್ತು.

ಆದರೆ, ಈವರೆಗೆ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಿಲ್ಲ. ಅಲ್ಲದೆ ಸಾಲ ಮನ್ನಾ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಸಾಲಗಾರರು ಸಾಲ ಮರುಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಹಕಾರಿ ಸಂಘಗಳ ಮೇಲೆ ದುಷ್ಪರಿಣಾಮ ಬೀರಿದೆ ಎಂದರು. ಇನ್ನೂ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಂಸದರು, ಎಲ್ಲರೂ ಸೇರಿ ಸರಕಾರದ ಮೇಲೆ ಒತ್ತಡ ಹೇರಿ ಜನರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ಒಕ್ಕೂಟದ ಪ್ರಮುಖರಾದ ಚೋಳರಾಜ, ರಾಜೇಶ ಹರಿಕಾಂತ, ಗಣಪತಿ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

Intro:ಭಟ್ಕಳ: ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದಂತೆ ಮೀನುಗಾರರು ಸಾಲ ಘೋಷಣೆ ಮಾಡಿದ್ದು ಇಲ್ಲಿವರೆಗೆ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗದ ಮೀನುಗಾರ ಹಾಗೂ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ತಡಮಾಡದೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಭಟ್ಕಳ ತಾಲ್ಲೂಕು ಮೀನುಗಾರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಠ್ಠಲ್ ದೇವಿಮನೆ ಆಗ್ರಹಿಸಿದ್ದಾರೆ
Body:ಭಟ್ಕಳ: ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದಂತೆ ಮೀನುಗಾರರು ಸಾಲ ಘೋಷಣೆ ಮಾಡಿದ್ದು ಇಲ್ಲಿವರೆಗೆ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗದ ಮೀನುಗಾರ ಹಾಗೂ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ತಡಮಾಡದೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಭಟ್ಕಳ ತಾಲ್ಲೂಕು ಮೀನುಗಾರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಠ್ಠಲ್ ದೇವಿಮನೆ ಆಗ್ರಹಿಸಿದ್ದಾರೆ.

ಅವರು ಇಲ್ಲಿನ ಸತ್ಕಾರ ಹೋಟೆಲಿನಲ್ಲಿ ಕರೆಯಲಾದ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು .ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರರು ಹೈರಾಣಾಗಿ ಹೋಗಿದ್ದಾರೆ. ಪಡೆದ ಸಾಲವನ್ನು ತುಂಬಲಾಗದ ಅಸಹಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾಲ ಮನ್ನಾ ಯೋಜನೆ ಘೋಷಣೆ ಸುತ್ತಿದ್ದತೆಯೇ ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈ ಸಂಬಂಧ ಕಳೆದ ಆಗಸ್ಟ್ 1 ರಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಉಪಸ್ಥಿಯಲ್ಲಿ ನಡೆದ ಸಭೆಗೆ ಸಹಕಾರಿ ಸಂಘಗಳು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಪಾಲ್ಗೊಂಡಿದ್ದರು, ಸದರಿ ಸಭೆಯಲ್ಲಿ 2019 ಮಾರ್ಚ31ರ ಕಾಲಾವಾಧಿಯೊಗಿನ ಸಾಲಗಾರರ ಯಾದಿಯನ್ನು ತಯಾರಿಸುವಂತೆ ತಿಳಿಸಲಾಗಿತ್ತು.ಆದರೆ ಇಲ್ಲಿವರೆಗೆ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಿಲ್ಲ ಅಲ್ಲದೆ
ಸಾಲ ಮನ್ನಾ ವಿಚಾರವಾಗಿ ಸಾಮಾಜಿಕ ಜಾಲಗಳ ಸುದ್ದಿ ಹರಿದಾಡುತ್ತಿದ್ದು, ಸಾಲಗಾರರು ಸಾಲ ಮರುಪಾವತಿ  ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಹಕಾರಿ ಸಂಘಗಳ ಮೇಲೆ ದುಷ್ಟಪರಿಣಾಮ ಬೀರಿದೆ. .

ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಂಸದರು, ಎಲ್ಲರೂ ಸೇರಿ ಸರಕಾರದ ಮೇಲೆ ಒತ್ತಡ ಹೇರಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ಒಕ್ಕೂಟದ ಪ್ರಮುಖರಾದ ಚೋಳರಾಜ, ರಾಜೇಶ ಹರಿಕಾಂತ, ಗಣಪತಿ ಮೊಗೇರ ಮುಂತಾದವರು ಉಪಸ್ಥಿತರಿದ್ದರು.Conclusion:ಉದಯ ನಾಯ್ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.