ETV Bharat / state

ಉಳವಿ ಚೆನ್ನಕೇಶ್ವರ ಜಾತ್ರೆ: ಕೇಂದ್ರ ಸಚಿವ ಸುರೇಶ್​ ಅಂಗಡಿ, ಕುಟುಂಬಸ್ಥರು ಭಾಗಿ - Channakeshwara temple in Uluviya

ಇತಿಹಾಸ ಪ್ರಸಿದ್ಧ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯ ಚೆನ್ನಕೇಶ್ವರ ದೇವಸ್ಥಾನದ ಜಾತ್ರೆ ಆರಂಭವಾಗಿದೆ.

Suresh Angady and family members visited Channakeshwara temple in Uluviya
ಉಳುವಿಯ ಚನ್ನಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸುರೇಶ್​ ಅಂಗಡಿ, ಕುಟುಂಬಸ್ಥರು
author img

By

Published : Feb 10, 2020, 9:35 PM IST

ಶಿರಸಿ: ಇತಿಹಾಸ ಪ್ರಸಿದ್ಧ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯ ಚೆನ್ನಕೇಶ್ವರ ದೇವಸ್ಥಾನದ ಜಾತ್ರೆ ಆರಂಭವಾಗಿದ್ದು, ಕೇಂದ್ರ ಸಚಿವ ಸುರೇಶ ಅಂಗಡಿ ಕುಟುಂಬದವರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದರು.

Suresh Angady and family members visited Channakeshwara temple in Uluviya
ಉಳವಿ ಚೆನ್ನಕೇಶ್ವರ ಜಾತ್ರೆ: ಕೇಂದ್ರ ಸಚಿವ ಸುರೇಶ್​ ಅಂಗಡಿ, ಕುಟುಂಬಸ್ಥರು ಭಾಗಿ

ಚನ್ನಬಸವೇಶ್ವರ ದೇವರಿಗೆ ಅಭಿಷೇಕ ಮಾಡಿಸಿ, ಬೆಳ್ಳಿಯ ರಥ ಎಳೆಯುವ ಮೂಲಕ ಚೆನ್ನಬಸವಣ್ಣ ದೇವರಿಗೆ ಸಚಿವ ಅಂಗಡಿ ಪೂಜೆ ಸಲ್ಲಿಸಿದರು. ಉಳವಿ ಜಾತ್ರೆಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರ ಚಕ್ಕಡಿಗಳನ್ನು, ಜೊಡೆತ್ತುಗಳನ್ನು ಅವರು ವೀಕ್ಷಿಸಿದರು.

ನಂತರ ಉಳವಿಯಲ್ಲಿ ಶ್ರೀ ಚೆನ್ನಬಸವೇಶ್ವರ ದಾಸೋಹ ನಿಲಯದಲ್ಲಿನ 'ಬೋಳಮಲ್ಲ ಬಂಧುಗಳು ಬೆಳಗಾವಿ' ದಾಸೋಹದಲ್ಲಿ ಪ್ರಸಾದ ಸೇವಿಸಿದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಅಂಗಡಿಯವರನ್ನು ಸನ್ಮಾನಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.