ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಅಗಸ್ಟ್ 2ರವರೆಗೆ ವಿಧಿಸಲಾಗಿದ್ದ ಸಂಡೇ ಲಾಕ್ಡೌನ್ ಆದೇಶವನ್ನು ಹಿಂಪಡೆಯಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ಕುಮಾರ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಆದೇಶದ ಮೇರೆಗೆ ಅಗಸ್ಟ್ 2ರವರೆಗೆ ವಿಧಿಸಲಾಗಿದ್ದ ಭಾನುವಾರದ ಲಾಕ್ಡೌನ್ ಆದೇಶವನ್ನು ಹಿಂಪಡೆಯುವ ಮೂಲಕ ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.