ಭಟ್ಕಳ (ಉತ್ತರ ಕನ್ನಡ): ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸಲಾಗಿದೆ.
ಭಟ್ಕಳ ಪಟ್ಟಣದ ಚೌಥನಿಯ ನಿವಾಸಿಯಾದ ಗರ್ಭಿಣಿಗೆ ತಪಾಸಣೆ ವೇಳೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಮಹಿಳೆ ಪರಿಸ್ಥಿತಿ ಗಂಭೀರವಾಗಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದು ಅನಿವಾರ್ಯವಾಗಿತ್ತು. ವೈದ್ಯ ಡಾ. ಶಮ್ಸನೂರ್ ಹಾಗೂ ಡಾ. ಸವಿತಾ ಕಾಮತ್ ನೇತೃತ್ವದಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.
ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಓದಿ: ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ನಡೆಯುತ್ತೆ ತಿಂಗಳಿಗೆ 800ಕ್ಕೂ ಹೆಚ್ಚು ಆಪರೇಷನ್ಗಳು!