ETV Bharat / state

ಸಾತೇರಿ ದೇವಿಗೆ ಪೂಜೆ ಸಲ್ಲಿಸಿದ ಸ್ಪೀಕರ್​​ ವಿಶ್ವೇಶ್ವರ ಹೆಗಡೆ ಕಾಗೇರಿ - ಕಾರವಾರ ತಾಲೂಕಿನ ಹಣಕೋಣ

ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಕಾರವಾರ ತಾಲೂಕಿನ ಹಣಕೋಣದ ಸಾತೇರಿ ದೇವಿ ದೇವಸ್ಥಾನಕ್ಕೆ ವಿಧಾನಸಭಾ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದ್ರು.

ಸಾತೇರಿ ದೇವಿಗೆ ಪೂಜೆ ಸಲ್ಲಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Sep 11, 2019, 7:34 PM IST

ಕಾರವಾರ: ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಕಾರವಾರ ತಾಲೂಕಿನ ಹಣಕೋಣದ ಸಾತೇರಿ ದೇವಿ ದೇವಸ್ಥಾನಕ್ಕೆ ಇಂದು ವಿಧಾನಸಭಾ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ದೇವಿ ದರ್ಶನ ಪಡೆದರು.

ಅಂಕೋಲಾದಲ್ಲಿ ಸಹಕಾರಿ ಬ್ಯಾಂಕ್ ಒಂದರ ಉದ್ಘಾಟನೆಗೆ ಆಗಮಿಸಿದ ಸಭಾಧ್ಯಕ್ಷರು, ಬಳಿಕ ಜಾತ್ರೆಯ ಕೊನೆಯ ದಿನವಾದ್ದರಿಂದ ಕಾರವಾರದ ಹಣಕೋಣದ ಸಾತೇರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಿಗೆ ಹಣ್ಣು ಕಾಯಿ ಉಡಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆಯುವ ಸಾತೇರಿ ದೇವಿಯಲ್ಲಿ ನಾಡಿನ ಸಮಸ್ತರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ಅತಿವೃಷ್ಟಿಯಿಂದ ಜಿಲ್ಲೆಯ ಜನ ಮಾತ್ರವಲ್ಲದೆ ಇಡೀ ರಾಜ್ಯದ ಜನರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲರಿಗೂ ಕಷ್ಟವನ್ನೂ ದೂರ ಮಾಡಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದರು.

ಸಾತೇರಿ ದೇವಿಗೆ ಪೂಜೆ ಸಲ್ಲಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಇನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, ದೇವಿ ಎಲ್ಲರ ಕಷ್ಟವನ್ನು ದೂರ ಮಾಡಿ ಸದ್ಬುದ್ಧಿ ನೀಡಲಿ ಎಂದರು. ಸಿಎಂ ಜಿಲ್ಲೆಗೆ ಆಗಮಿಸದ ಬಗ್ಗೆ ಪ್ರಶ್ನಿಸಿದಾಗ, ರಾಜ್ಯಾದ್ಯಂತ ಅತಿವೃಷ್ಟಿಯಾಗಿದೆ. ಎಲ್ಲ ಕಡೆಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿವೆ. ಇದರ ಜತೆಗೆ ಸಂಘ ಸಂಸ್ಥೆಗಳು ನೆರವಿಗೆ ನಿಂತಿವೆ. ಸುಧಾರಣೆಗೆ ಕಾಲಾವಕಾಶ ಬೇಕು ಎಂದು ಹೇಳಿದರು.

Intro:ಸಾತೇರಿ ದೇವಿಗೆ ಪೂಜೆ ಸಲ್ಲಿಸಿದ ಸ್ಪೀಕರ್ ಕಾಗೇರಿ
ಕಾರವಾರ: ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಕಾರವಾರ ತಾಲ್ಲೂಕಿನ ಹಣಕೋಣದ ಸಾತೇರಿ ದೇವಿ ದೇವಸ್ಥಾನಕ್ಕೆ ಇಂದು ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿನೀಡಿ ದೇವಿ ದರ್ಶನ ಪಡೆದರು.
ಅಂಕೋಲಾದಲ್ಲಿ ಸಹಕಾರಿ ಬ್ಯಾಂಕ್ ಒಂದರ ಉದ್ಘಾಟನೆಗೆ ಆಗಮಿಸಿದ ಅವರು ಬಳಿಕ ಜಾತ್ರೆಯ ಕೊನೆಯ ದಿನವಾದ ಕಾರವಾರದ ಹಣಕೋಣದ ಸಾತೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಿಗೆ ಹಣ್ಣು ಕಾಯಿ ಉಡಿ ಅರ್ಪಿಸಿದ ಸಭಾಧ್ಯಕ್ಷರು ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆಯುವ ಸಾತೇರಿ ದೇವಿಯಲ್ಲಿ ನಾಡಿನ ಸಮಸ್ತರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಅಲ್ಲಿಸಿದ್ದೇನೆ. ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ಜನರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲರಿಗೂ ಕಷ್ಟವನ್ನೂ ದೂರ ಮಾಡಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.
ಇನ್ನು ಡಿಕೆಸಿ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ ದೇವಿ ಎಲ್ಲರಿಗೂ ಕಷ್ಟವನ್ನು ದೂರಮಾಡಿ ಸದ್ಬುದ್ದಿ ನೀಡಲಿ ಎಂದರು.
ಸಿಎಂ ಜಿಲ್ಲೆಗೆ ಆಗಮಿಸದ ಬಗ್ಗೆ ಪ್ರಶ್ನಿಸಿದಾಗ ರಾಜ್ಯದಾದ್ಯಂತ ಅತಿವೃಷ್ಠಿಯಾಗಿದೆ. ಎಲ್ಲಕಡೆಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿವೆ. ಇದರ ಜತೆಗೆ ಸಂಘ ಸಂಸ್ಥೆಗಳು ನೆರವಿಗೆ ನಿಂತಿವೆ. ಸುಧಾರಣೆಗೆ ಕಾಲಾವಕಾಶ ಬೇಕು ಎಂದು ಹೇಳಿದರು.

Body:ಕ

Conclusion:ಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.